newsfirstkannada.com

Video: ವಿಮಾನದೊಳಗೆ ಭಿಕ್ಷೆ ಬೇಡಿದ ವ್ಯಕ್ತಿ! ಆದ್ರೆ ಒಂದೊಳ್ಳೆ ಕಾರ್ಯ ಮಾಡಲು ಹೊರಟಿದ್ದಾನೆ ಈತ

Share :

15-07-2023

  ಬಸ್​​ ಆಯ್ತು, ರೈಲು ಆಯ್ತು, ವಿಮಾನದಲ್ಲಿ ಭಿಕ್ಷಾಟನೆ

  ವಿಮಾನದಲ್ಲಿ ನಿಂತು ಭಿಕ್ಷಾಟನೆಗೆ ಇಳಿದಿದ್ದೇಕೆ ಈ ವ್ಯಕ್ತಿ?

  ಏನೋ ಮಾಡಲು ಹೊರಟಿದ್ದಾನೆ ಈ ವ್ಯಕ್ತಿ! ಅದೇನು ಗೊತ್ತಾ?

ಸಾಮಾನ್ಯವಾಗಿ ಟ್ರಾಫಿಕ್​ ಸಿಗ್ನಲ್​, ಬಸ್​ಸ್ಟ್ಯಾಂಡ್​, ರೈಲಿನಲ್ಲಿ ಭಿಕ್ಷೆ ಬೇಡುತ್ತಾ ಬರುವ ಜನರನ್ನು ನೋಡಿರಬಹುದು. ಆದರೆ ವಿಮಾನದಲ್ಲಿ ಭಿಕ್ಷೆ ಬೇಡಿದ ಪ್ರಸಂಗದ ಬಗ್ಗೆ ತಿಳಿದಿದ್ಯಾ?. ಇಂತಹದೊಂದು ಸಂಗತಿ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದಿದೆ.

ವಿಮಾನದಲ್ಲಿ ಓಡಾಡುವವರ ಬಗ್ಗೆ ಗೊತ್ತೇ ಇರುತ್ತದೆ. ಉಳಿದೆಲ್ಲಾ ಸಾರಿಗೆ ಸೌಲಭ್ಯಕ್ಕಿಂತ ವಿಮಾನ ಕೊಂಚ ದುಬಾರಿ. ಹಾಗಾಗಿ ಇಲ್ಲಿ ಓಡಾಡುವವರು ಶ್ರೀಮಂತರು ಎಂದರೆ ತಪ್ಪಿಲ್ಲ. ಆದರೆ ವಿಮಾನದಲ್ಲೂ ಭಿಕ್ಷುಕರ ಭಿಕ್ಷಾಟನೆ ಶುರುವಾಗಿದೆ ಅಂದ್ರೆ ನಂಬ್ತೀರಾ? ನಂಬಲೇ ಬೇಕು. ಈ ದೃಶ್ಯ ಕಂಡ ಮೇಲಂತೂ ನಂಬಿಕೆ ಬಂದೇ ಬರುತ್ತೆ.

ಅಂದಹಾಗೆಯೇ ಈ ಘಟನೆ ಭಾರತದಲ್ಲಿ ನಡೆದಿದೆ ಅಂತಾ ತಪ್ಪಾಗಿ ಭಾವಿಸಬೇಡಿ. ನೆರೆಯ ದೇಶ ಪಾಕಿಸ್ತಾನದಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಈತ ಭಿಕ್ಷೆ ಬೇಡುತ್ತಿಲ್ಲ. ಬದಲಾಗಿ ಲಾಹೋರ್​ನಲ್ಲಿ ಮದರಸಾ ನಿರ್ಮಿಸಲು ಈತ ಹಣ ಸಂಗ್ರಹಕ್ಕೆ ಇಳಿದಿದ್ದಾನೆ. ಅದಕ್ಕಾಗಿ ವಿಮಾನದ ಒಳಹೊಕ್ಕಿದ್ದಾನೆ.

ವಿಮಾನದ ಒಳಗೆ ನಿಂತು ಮದರಸಾ ನಿರ್ಮಿಸಲು ಹಣ ಸಂಗ್ರಹಿಸುತ್ತಿದ್ದೇನೆ. ದಾನ ಮಾಡಲು ಇಚ್ಛಿಸುವವರು ಹಣ ಕೊಡಬಹುದು ಎಂದು ಎಲ್ಲರ ಬಳಿ ಕೇಳಿದ್ದಾನೆ. ಅಲ್ಲೇ ಇದ್ದ ಪ್ರಯಾಣಿಕನೋರ್ವ ಈ ದೃಶ್ಯವನ್ನು ತನ್ನ ಕ್ಯಾಮೆರಾದ ಮೂಲಕ ಸೆರೆ ಹಿಡಿದಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Video: ವಿಮಾನದೊಳಗೆ ಭಿಕ್ಷೆ ಬೇಡಿದ ವ್ಯಕ್ತಿ! ಆದ್ರೆ ಒಂದೊಳ್ಳೆ ಕಾರ್ಯ ಮಾಡಲು ಹೊರಟಿದ್ದಾನೆ ಈತ

https://newsfirstlive.com/wp-content/uploads/2023/07/Begging.jpg

Load More