newsfirstkannada.com

ಹೆಂಡತಿಯ ಬೆರಳಿಗೆ ಕಚ್ಚಿದ ಗಂಡ.. ಠಾಣೆ ಮೆಟ್ಟಿಲೇರಿದ ಪತ್ನಿ.. ಪತಿ ಅರೆಸ್ಟ್​

Share :

Published August 3, 2023 at 8:55pm

    ಗಂಡ-ಹೆಂಡತಿ ಜಗಳ.. ಪತಿ ಮೇಲೆ ಎಫ್​​ಐಆರ್​

    ಪತ್ನಿಯ ಎಡ ತೋರು ಬೆರಳಿಗೆ ಕಚ್ಚಿದ ಗಂಡ

    ಗಂಡನಿಗೆ ಕಂಬಿ ಎಣಿಸುವಂತೆ ಮಾಡಿದ ಪತ್ನಿ ಪುಷ್ಪಾ

ಬೆಂಗಳೂರು: ಗಂಡ ತನ್ನ ಹೆಂಡತಿಯ ಬೆರಳಿಗೆ ಕಚ್ಚಿದ ಪ್ರಸಂಗ ಕೋಣನಕುಂಟೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಕೋಪಗೊಂಡ ಪತ್ನಿ ಗಂಡನ ಮೇಲೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಎಫ್​ಐಆರ್​ ಕೂಡ ದಾಖಲಾಗಿದೆ. ಈ ಕಾರಣಕ್ಕೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯ್​ ಕುಮಾರ್​ ಎಂಬಾತ ಪತ್ನಿ ಪುಷ್ಪಾಳನ್ನು ಮದುವೆಯಾಗಿ 23 ವರ್ಷಗಳು ಕಳೆದಿವೆ. ಆದರೆ ಇವರಿಬ್ಬರ ನಡುವೆ ಮನಸ್ತಾಪ ಮತ್ತು ಆಗಾಗ ಜಗಳ ನಡೆಯುತ್ತಿತ್ತು. ಈ ಕಾರಣಕ್ಕೆ ಪುಷ್ಪಾ ತನ್ನ ಮಗನೊಂದಿಗೆ ಬೇರೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.

ಜುಲೈ 28ರಂದು ಸಂಜೆ 4 ಗಂಟೆಗೆ ವಿಜಯ್​ ಕುಮಾರ್​ ಪತ್ನಿ ಪುಷ್ಪಾಳಿದ್ದ ಮನೆಗೆ ಬಂದಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ವಿಜಯ್​ ತನ್ನ ಪತ್ನಿಯ ಎಡ ತೋಳು ಬೆರಳನ್ನು ಕಚ್ಚಿದ್ದಾನೆ. ಇದರಿಂದ ನೊಂದ ಪತ್ನಿ ಕೋಣನಕುಂಟೆ ಪೊಲೀಸ್​​ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪುಷ್ಪಾ ನೀಡಿದ ದೂರಿನ ಅನ್ವಯ 498ಎ, 325, 504, 506ರ ಅಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿಯ ಬೆರಳಿಗೆ ಕಚ್ಚಿದ ಗಂಡ.. ಠಾಣೆ ಮೆಟ್ಟಿಲೇರಿದ ಪತ್ನಿ.. ಪತಿ ಅರೆಸ್ಟ್​

https://newsfirstlive.com/wp-content/uploads/2023/08/BNG_FINGER.jpg

Load More