/newsfirstlive-kannada/media/post_attachments/wp-content/uploads/2024/08/Alian.jpg)
ಏಲಿಯನ್​ ಇವೆಯಾ?. ಭೂಮಿಗೆ ಆಗಾಗ ಬಂದು ಹೊಗುತ್ತಿವೆಯಾ?. ಈ ಸತ್ಯ ಇಂದಿಗೂ ಅಸ್ಪಷ್ಟವಾಗಿ ಉಳಿದಿವೆ. ಆದರೂ ಇದರ ಕಲ್ಪನೆಯನ್ನು ಈಗಾಗಲೇ ಮಾಡಿಯಾಗಿವೆ. ಏಲಿಯನ್​ಗಳ ರೂಪ, ಬಣ್ಣ ಸದ್ಯ ಬಹುತೇಕರ ಮನದಲ್ಲಿ ನೆಲೆಯಾಗಿದೆ. ಆದರೆ ವಿಚಾರ ಅದಲ್ಲ, ಭಾರತದಲ್ಲಿ ಏಲಿಯನ್​ಗೂ ಒಂದು ದೇವಸ್ಥಾನವಿದೆ ಎಂದರೆ ನಂಬುತ್ತೀರಾ?. ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ತಮಿಳುನಾಡಿನ ವ್ಯಕ್ತಿಯೊಬ್ಬರು ಎಲಿಯನ್​ಗಾಗಿ ದೇವಸ್ಥಾನ ನಿರ್ಮಿಸಿದ್ದಾರೆ. ಹೌದು. ಸೇಲಂನಲ್ಲಿ ವ್ಯಕ್ತಿಯೊಬ್ಬರು ಅನ್ಯಲೋಕದ ಏಲಿಯನ್​ಗಾಗಿ ದೇವಾಲಯವನ್ನೇ ನಿರ್ಮಿಸಿದ್ದಾರೆ. ಏಲಿಯನ್​​ಗಳು ನೈಸರ್ಗಿಕ ವಿಕೋಪಗಳನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿವೆಯಂತೆ. ಈ ಕಾರಣಕ್ಕಾಗಿ ದೇವಸ್ಥಾನ ನಿರ್ಮಿಸಿ ಪೂಜಿಸುತ್ತಿದ್ದಾರೆ.
ಇದನ್ನೂ ಓದಿ: Rain Effects: ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ, ನದಿಗೆ ಬಿದ್ದ ಬೈಕ್.. ಓರ್ವನ ರಕ್ಷಣೆ, ಮತ್ತೋರ್ವ ನಾಪತ್ತೆ
/newsfirstlive-kannada/media/post_attachments/wp-content/uploads/2024/08/Alien-Gon.jpg)
ಸೇಲಂನ ಮಲ್ಲಮೂಪಂಬಟ್ಟಿಯ ಲೋಗನಾಥನ್​​ ತಮ್ಮ ಅಲ್ಪ ಭೂಮಿಯಲ್ಲಿ ಏಲಿಯನ್​ ದೇವಸ್ಥಾನ ನಿರ್ಮಿಸಿದ್ದಾರೆ. ಮಾತ್ರವಲ್ಲದೆ ಶಿವ, ಪಾರ್ವತಿ, ಮುರುಗನ್​, ಕಾಳಿ ಮಾತೆಯ ಜೊತೆಗೆ ಏಲಿಯನ್​ ಮೂರ್ತಿಯನ್ನು ಇವರು ಪೂಜಿಸುತ್ತಿದ್ದಾರೆ.
ಇದನ್ನೂ ಓದಿ: ಅವನತಿಯತ್ತ ಸಾಗಿದ ಅಪ್ಪು ನೆನಪಿನ ಸ್ಕೂಲ್​.. ‘ಬೆಟ್ಟದ ಹೂವು’ ಖ್ಯಾತಿಯ ಶಾಲೆಗೆ ಇದೆಂಥಾ ಸ್ಥಿತಿ..?
‘ನಾನು ಅನ್ಯಗ್ರಹ ಜೀವಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ದೇವಾಲಯವನ್ನು ನಿರ್ಮಿಸಲು ಅನುಮತಿ ಪಡೆದಿದ್ದೇನೆ’ ಎಂದು ಲೋಗನಾಥನ್​ ಹೇಳುತ್ತಾರೆ. ನೈಸರ್ಗಿಕ ವಿಕೋಪ ಹೆಚ್ಚುತ್ತಿರುವ ಕಾರಣ ಅವುಗಳನ್ನು ತಡೆಯುವ ಶಕ್ತಿ ಅನ್ಯಗ್ರಹ ಜೀವಿಗಳಿಗಿವೆ ಎಂದು ಅವರು ನಂಬಿದ್ದಾರೆ.
ಇದನ್ನೂ ಓದಿ: ಮೂರು ತಿಂಗಳಲ್ಲಿ ಮದುವೆ; ಅದಕ್ಕಾಗಿ ಹಣ ಸಂಪಾದಿಸಲು ಕೇರಳಕ್ಕೆ ಬಂದಿದ್ದ.. ಆದರೆ..
ಸದ್ಯ ಏಲಿಯನ್​ ದೇವಸ್ಥಾನ ಕಾಣಲು ಅನೇಕ ಜನರು ಅಲ್ಲಿಗೆ ಬರುತ್ತಿದ್ದಾರಂತೆ. ಮಾತ್ರವಲ್ಲದೆ, ಈ ಕುರಿತಾಗಿ ಅನೇಕರು ಕುತೂಹಲದಿಂದ ಮಾಹಿತಿ ಕಲೆಹಾಕುತ್ತಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us