newsfirstkannada.com

ದಂಪತಿಯಿಂದ ವ್ಯಕ್ತಿ ಮೇಲೆ ಹಲ್ಲೆ; ಆಯತಪ್ಪಿ ಹಳಿಗೆ ಬಿದ್ದವನ ಮೇಲೆ ಹರಿದ ರೈಲು; ಅಯ್ಯೋ ಅನ್ಯಾಯವಾಗಿ ಸಾವನ್ನಪ್ಪಿದ

Share :

18-08-2023

    ಡಿಕ್ಕಿ ಹೊಡೆದನೆಂದು ಸರಿಯಾಗಿ ಗೂಸಾ ಕೊಟ್ಟ ದಂಪತಿ

    ಪತಿಯ ಏಟು ತಗುಲಿ ಅನ್ಯಾಯವಾಗಿ ಹಳಿಗೆ ಬಿದ್ದ ವ್ಯಕ್ತಿ

    ಎದೆ ಝೆಲ್ ಎನಿಸೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಚಿಕ್ಕದಾಗಿ ಶುರುವಾಗಿದ್ದ ಜಗಳ‌ ಸಾವಿನಲ್ಲಿ ಅಂತ್ಯ ಕಂಡ ಘಟನೆ ಮುಂಬೈನ ಸಿಯಾನ್ ರೈಲು ನಿಲ್ದಾಣದಲ್ಲಿ ನಡೆದಿದೆ. 26 ವರ್ಷದ ದಿನೇಶ್ ರೈಲ್ವೆ ಹಳಿಗೆ ಬಿದ್ದು ಸಾವನ್ನಪ್ಪಿದ್ದಾನೆ.

ದಿನೇಶ್ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಶೀತಲ್ ಮಾನೆ ಎಂಬ ಮಹಿಳೆಗೆ ಡಿಕ್ಕಿ ಹೊಡೆಯುತ್ತಾನೆ. ಕೋಪಗೊಂಡ ಶೀತಲ್ ತನ್ನ ಛತ್ರಿಯಿಂದ ದಿನೇಶ್​​ಗೆ ಹೊಡೆಯುತ್ತಾಳೆ. ನಂತರ ಶೀತಲ್ ಪತಿ ಅವಿನಾಶ್ (35) ದಿನೇಶ್‌ಗೆ ಕಪಾಳಮೋಕ್ಷ ಮಾಡಿದ್ದಾನೆ.

ಕಪಾಳಮೋಕ್ಷ ಮಾಡಿದ ರಭಸಕ್ಕೆ ದಿನೇಶ್ ರೈಲ್ವೆ ಹಳಿ ಮೇಲೆ ಬೀಳುತ್ತಾನೆ. ಅದೇ ಸಮಯಕ್ಕೆ ರೈಲು ಬರುತ್ತಿರುವುದನ್ನು ಗಮನಿಸಿ ದಿನೇಶ್​​ ಫ್ಲಾಟ್​ಫಾರ್ಮ್​ ಮೇಲೇರಿ ಬರಲು ಪ್ರಯತ್ನಿಸುತ್ತಾನೆ. ಅಷ್ಟರಲ್ಲಾಗಲೇ ರೈಲು ಆತನ ಮೇಲೆ ಹರಿದಿದೆ.

ಈ ಘಟನೆಯಿಂದ ದಿನೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದ್ದು, ಸದ್ಯ ಪೋಲಿಸರು ಇಬ್ಬರು ದಂಪತಿಗಳನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಂಪತಿಯಿಂದ ವ್ಯಕ್ತಿ ಮೇಲೆ ಹಲ್ಲೆ; ಆಯತಪ್ಪಿ ಹಳಿಗೆ ಬಿದ್ದವನ ಮೇಲೆ ಹರಿದ ರೈಲು; ಅಯ್ಯೋ ಅನ್ಯಾಯವಾಗಿ ಸಾವನ್ನಪ್ಪಿದ

https://newsfirstlive.com/wp-content/uploads/2023/08/Mumbai.jpg

Load More