newsfirstkannada.com

ಬಿರಿಯಾನಿ ಅಂದ್ರೆ ಪ್ರಾಣ.. ಒಂದು ಕಪ್‌ ಮೊಸರು ಜಾಸ್ತಿ ಕೇಳಿದ್ದಕ್ಕೆ ಜೀವವೇ ಹೋಯ್ತು; ಆಗಿದ್ದೇನು ಗೊತ್ತಾ?

Share :

11-09-2023

    ಬಿರಿಯಾನಿ ಹೋಟೆಲ್ ಸಿಬ್ಬಂದಿಗೆ ಜೊತೆ ಲಿಯಾಖತ್​ ಗಲಾಟೆ

    ಮೃತ ಯುವಕ ಲಿಯಾಖತ್​ಗೆ ಬಿರಿಯಾನಿ ಎಂದರೆ ಪಂಚಪ್ರಾಣ

    ಪೊಲೀಸ್​ ತನಿಖೆ ವೇಳೆ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದ ಗ್ರಾಹಕ ಸಾವು

ಹೈದರಾಬಾದ್: ಬಿರಿಯಾನಿ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದೆಷ್ಟೋ ಜನರು ಬಿರಿಯಾನಿಗಾಗಿ ಗಂಟೆ ಗಂಟೆಲೇ ಅಂಗಡಿಗಳ ಮುಂದೆ ಕ್ಯೂನಲ್ಲಿ ನಿಂತುಕೊಂಡು ಬಿರಿಯಾನಿ ತಿನ್ನುತ್ತಾರೆ.  ಊಟಕ್ಕೆ ಹೇಗೆ ಉಪ್ಪಿನಕಾಯಿ ಬೇಕೋ ಹಾಗೇ ಬಿರಿಯಾನಿ ಜೊತೆ ಮೊಸರು ಬಜ್ಜಿ ಇದ್ರೆ ಟೆಸ್ಟ್ ಚೆನ್ನಾಗಿರುತ್ತೆ. ಹೈದರಾಬಾದ್‌ ನಗರದ ಹಲವು ಹೋಟೆಲ್‌ಗಳು ಬಿರಿಯಾನಿಗೆ ಹೆಸರುವಾಸಿಯಾಗಿವೆ. ಹೀಗೆ ಹೋಟೆಲ್ ಸಿಬ್ಬಂದಿಗೆ ಗ್ರಾಹಕನೊಬ್ಬ ಬಿರಿಯಾನಿ ಜೊತೆ ಹೆಚ್ಚುವರಿಯಾಗಿ ಒಂದು ಕಪ್ ಮೊಸರನ್ನ ಕೇಳಿದ್ದಕ್ಕೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಹಳೇ ಪಟ್ಟಣ ಚಂದ್ರಯ್ಯನಗುಟ್ಟದ ಲಿಯಾಖತ್ ಎಂಬ ಯುವಕ ಮೆರಿಡಿಯನ್ ಹಟ್ಸ್‌ಗೆ ಬಿರಿಯಾನಿ ತಿನ್ನಲು ಬಂದಿದ್ದ. ಲಿಯಾಖತ್​ಗೆ ಬಿರಿಯಾನಿ ಎಂದರೆ ಪಂಚಪ್ರಾಣ. ಹೀಗೆ ಬಿರಿಯಾನಿ ಜೊತೆ ಒಂದು ಕಪ್ ಮೊಸರು ಜಾಸ್ತಿ ಕೊಡುವಂತೆ ಹೋಟೆಲ್​ ಸಿಬ್ಬಂದಿಗೆ ಹೇಳಿದ್ದಾನೆ. ಇದೇ ವಿಚಾರಕ್ಕೆ ಗ್ರಾಹಕ ಹಾಗೂ ಹೊಟೇಲ್​​ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಹೀಗೆ ಪ್ರಾರಂಭಗೊಂಡ ಜಗಳ ತೀವ್ರಗೊಂಡಿದೆ. ಹೋಟೆಲ್​​ ಸಿಬ್ಬಂದಿಯು ಲಿಯಾಖತ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪಂಜಗುಟ್ಟ ಪೊಲೀಸರು ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮೆರಿಡಿಯನ್ ಹೋಟೆಲ್ ಸಿಬ್ಬಂದಿ ಹಾಗೂ ಗ್ರಾಹಕ ಲಿಯಾಖತ್​ನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನು ಓದಿ: ಪ್ರೀತಿಸಿದ ಹುಡುಗಿ ಬೇರೆಯವರ ಜೊತೆ ಮದುವೆಗೆ ರೆಡಿ; ಕೋಪಗೊಂಡ ಹುಚ್ಚು ಪ್ರೇಮಿ ಮಾಡಿದ್ದೇನು ಗೊತ್ತಾ..?

ಬಿರಿಯಾನಿ ಗಲಾಟೆ ಕುರಿತಂತೆ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸುತ್ತಿದ್ದಾಗ ಲಿಯಾಖತ್ ಏಕಾಏಕಿ ಜ್ಞಾನ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಪೊಲೀಸರು ಆತನನ್ನು ಸ್ಥಳೀಯ ಡೆಕ್ಕನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಿಯಾಖತ್ ಮೃತಪಟ್ಟಿದ್ದಾರೆ. ಸದ್ಯ ಪೊಲೀಸರು ಶವವನ್ನು ಗಾಂಧಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಈ ವಿಷಯ ತಿಳಿದ ಮೃತನ ಸಂಬಂಧಿಕರು ಕೇವಲ ಒಂದು ಮೊಸರಿಗಾಗಿ ಅಮಾಯಕ ಜೀವವನ್ನೇ ಕಳೆದುಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್ ಲಭ್ಯ

ಬಿರಿಯಾನಿ ಅಂದ್ರೆ ಪ್ರಾಣ.. ಒಂದು ಕಪ್‌ ಮೊಸರು ಜಾಸ್ತಿ ಕೇಳಿದ್ದಕ್ಕೆ ಜೀವವೇ ಹೋಯ್ತು; ಆಗಿದ್ದೇನು ಗೊತ್ತಾ?

https://newsfirstlive.com/wp-content/uploads/2023/09/death-58.jpg

Load More