ಬೆಲೆ ಏರಿಕೆಯಿಂದ ಬೇಸತ್ತ ಆಸಾಮಿ!
ದುಡಿಯೋಕೆ ಆಗುತ್ತಿಲ್ಲ ಎಂದು ಅಳಲು
ತಿಂಗಳಿಗೆ 15 ಸಾವಿರಕ್ಕಾಗಿ ಸರ್ಕಾರಕ್ಕೆ ಬೇಡಿಕೆ
ಯಾದಗಿರಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಈಗ ಐದು ಗ್ಯಾರಂಟಿ ಜಾರಿಗೆ ಮುಂದಾಗಿದೆ. ಈಗಾಗಲೇ ಯುವ ನಿಧಿ ಹೊರತುಪಡಿಸಿ ಬಹುತೇಕ ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ. ಒಂದೆಡೆ ಗ್ಯಾರಂಟಿಗಳಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ ಎಂದು ಹಲವರು ಬಹಿರಂಗವಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನೊಂದೆಡೆ ರಾಜ್ಯದ ಬಡವರಿಗೆ ಈ ಐದು ಗ್ಯಾರಂಟಿ ಬಹಳ ಉಪಯೋಗ ಆಗುತ್ತಿವೆ. ಅದರಲ್ಲೂ ಫ್ರೀ ಬಸ್, ಗೃಹಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ ಸ್ಕೀಮ್ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿ ಬಂದಿದೆ.
ವಿಧಾನಸಭಾ ಚುನಾವಣೆ ಮುಗಿದ ಮೇಲೆ ಇಡೀ ರಾಜ್ಯದ ಚರ್ಚೆ ಸರ್ಕಾರದ ಗ್ಯಾರಂಟಿ ಸುತ್ತಲೇ ನಡೆಯುತ್ತಿದೆ. ಗ್ಯಾರಂಟಿ ಖುಷಿಯಲ್ಲಿರೋ ರಾಜ್ಯದ ಜನತೆಗೆ ಕಳೆದೊಂದು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರೋ ಮಳೆ ಸಂಕಷ್ಟ ತಂದೊಡ್ಡಿದೆ. ದೇಶದಲ್ಲಿ ಸರಿಯಾದ ಸಮಯಕ್ಕೆ ಮುಂಗಾರು ಮಳೆ ಬಾರದ ಕಾರಣ ದಿನಬಳಕೆ ವಸ್ತುಗಳ ಅಂದರೆ ದವಸ ಧಾನ್ಯಗಳು, ತರಕಾರಿ ಹೀಗೆ ಹಲವು ಬೆಲೆ ಏರಿಕೆ ಆಗಿದೆ. ಇತ್ತೀಚೆಗಂತೂ ಹಾಲಿನ ದರ, ಪೆಟ್ರೋಲ್, ಡೀಸೆಲ್ ಬೆಲೆಯೂ ಹೆಚ್ಚಳವಾಗಿದೆ. ಬೆಲೆ ಏರಿಕೆ, ಮಳೆಯಿಂದ ಬೆಳೆ ನಾಶ ಹೀಗೆ ಹಲವು ಸಮಸ್ಯೆಗಳು ಮಧ್ಯಮ ವರ್ಗದವರಿಗೆ ತಲೆನೋವಾಗಿ ಪರಿಣಮಿಸಿವೆ. ಅದರಲ್ಲೂ ಅನ್ನದಾತರ ಗೋಳು ಕೇಳುವವರಿಲ್ಲ, ರೈತರ ಕಷ್ಟವಂತೂ ಹೇಳ ತೀರದಂತಾಗಿದೆ. ಇದರ ಮಧ್ಯೆ ಈ ಮೇಲಿನ ಎಲ್ಲಾ ಕಷ್ಟಗಳಿಂದ ಬೇಸತ್ತು ಹೋದ ವ್ಯಕ್ತಿಯೋರ್ವ ಯಾದಗಿರಿ ನಗರ ಸಭೆ ಕಾರ್ಯಾಲಯದ ಪೌರಾಯುಕ್ತರಿಗೆ ಪತ್ರ ಬರೆದಿದ್ದಾನೆ. ಪ್ರತಿ ತಿಂಗಳಿಗೆ 15 ಸಾವಿರ ನೀಡಿ ಎಂದು ಬೇಡಿಕೆಯಿಟ್ಟಿದ್ದಾನೆ.
ವ್ಯಕ್ತಿ ಬರೆದ ಪತ್ರದಲ್ಲೇನಿದೆ?
ಸರ್ಕಾರದ 5 ಗ್ಯಾರಂಟಿಗಳು ಇನ್ನೂ ಲಭ್ಯವಾಗುತ್ತಿಲ್ಲ. ದವಸ ಧಾನ್ಯಗಳು, ಕಿರಾಣಿ ವಸ್ತುಗಳು ಹಾಗೂ ಇತರೆ ಪದಾರ್ಥಗಳ ಬೆಲೆ ದಿನೇ ದಿನೇ ಆಕಾಶಕ್ಕೆ ಏಣಿ ಹಾಕುತ್ತಿದೆ. ಇದರಿಂದ ನನಗೆ ಒಂದೊಂದು ವಸ್ತುಗಳನ್ನು ಖರಿದೀಸಲು ಕಷ್ಟವಾಗುತ್ತಿದೆ. ಆದರೆ ಇಂತಹ ಸಂದರ್ಭದಲ್ಲಿ ನನಗೆ ಯಾವುದೇ ಕೆಲಸ ಕೂಡ ಸಿಕ್ಕಿಲ್ಲ. ಇದರ ಜೊತೆಗೆ ನನಗೆ ಬೇರೆ ಯಾವುದೇ ಆದಾಯದ ಮೂಲ ಕೂಡ ಇಲ್ಲ. ಹೀಗಾಗಿ ನನಗೆ ತಿಂಗಳಿಗೆ ಖರ್ಚಿಗಾಗಿ 15 ಸಾವಿರ ಹಣ ಕೊಡಿ ಎಂದು ಪತ್ರ ಬರೆಯುವ ಮೂಲಕ ತನ್ನ ಅಳಲು ತೋಡಿಕೊಂಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ