newsfirstkannada.com

ತುಮಕೂರು ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಹಠಾತ್ ಸಾವು.. ‘ಹೊಡೆದು ಸಾಯಿಸಿದ್ದಾರೆ’ ಎಂದು ಕುಟುಂಬಸ್ಥರು ಕಣ್ಣೀರು

Share :

06-11-2023

    ಸಬ್ ಇನ್​ಸ್ಪೆಕ್ಟರ್, ಸಿಬ್ಬಂದಿ ವಿರುದ್ಧ ಗಂಭೀರ ಆರೋಪ

    ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಮಸಾಲಾ ಜಯರಾಂ

    ಅಕ್ಟೋಬರ್ 23 ರಂದು ಕುಮಾರ್ ಆಚಾರ್ (48) ಸಾವು

ತುಮಕೂರು: ಪೊಲೀಸರ ಕಿರುಕುಳದಿಂದ ವ್ಯಕ್ತಿಯೋರ್ವ ಸಾವಿಗೀಡಾಗಿರುವ ಆರೋಪ ಕೇಳಿ ಬಂದಿದೆ. ಪೊಲೀಸರ ವಶದಲ್ಲಿದ್ದ ವ್ಯಕ್ತಿಯ ಸಾವಿಗೆ ಸಬ್ ಇನ್​ಸ್ಪೆಕ್ಟರ್ ಮತ್ತು ಸಿಬ್ಬಂದಿಯೇ ಕಾರಣ ಅವರನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ತುರುವೆಕೆರೆ ಬಿಜೆಪಿ ಮಾಜಿ ಶಾಸಕ ಮಸಾಲಾ ಜಯರಾಮ್ ಆಗ್ರಹಿಸಿದ್ದಾರೆ.

ಏನಿದು ಪ್ರಕರಣ..?

ಅಕ್ಟೋಬರ್ 23 ರಂದು ಕುಮಾರ್ ಆಚಾರ್ (48) ಸಾವಿಗೀಡಾಗಿದ್ದರು. ವಿಠಲದೇವರಹಳ್ಳಿ ಬಳಿ ಇಸ್ಪೀಟ್ ಆಡುತ್ತಿದ್ದರೆಂದು ಪೊಲೀಸರು ದಾಳಿಗೆ ಹೋಗಿದ್ದರು. ಈ ವೇಳೆ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತರುವಾಗ ಕುಮಾರ್ ಆಚಾರ್ ಸಾವನ್ನಪ್ಪಿದ್ದು, ಇದಕ್ಕೆ ಪೊಲೀಸರೇ ಕಾರಣ ಎಂದು ಆರೋಪಿಸಲಾಗಿದೆ.

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ವಿಠಲದೇವರಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಈ ಸಂಬಂಧ ತುರುವೆಕೆರೆಯ ತಮ್ಮ ಫಾರಂ ಹೌಸ್​ನಲ್ಲಿ ಮಾಜಿ ಶಾಸಕ ಮಸಾಲ ಜಯರಾಂ ಸುದ್ದಿಗೊಷ್ಠಿ ನಡೆಸಿ ಮಾತನಾಡಿದರು. ತುರುವೆಕೆರೆ ತಾಲೂಕಿನ ಕೆ.ಮಾವಿನ ಹಳ್ಳಿಯ ಹೊರಾಂಗಣದಲ್ಲಿ ಇಸ್ಪೀಟ್ ಆಟದಲ್ಲಿ ಕೆಲವರು ತೊಡಗಿದ್ದಾರೆಂದು ಬಂದ ದೂರಿನನ್ವಯ ಪೊಲೀಸರು ದಾಳಿ ಮಾಡಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಮಾಡಿದ ದೌರ್ಜನ್ಯದಿಂದಾಗಿ ಕೆ.ಮಾವಿನಹಳ್ಳಿ ಗ್ರಾಮದ ಕುಮಾರ್ ಆಚಾರ್ ಎಂಬುವವರು ಮರಣ ಹೊಂದಿದ್ದರು.

ಆದರೆ ಪೊಲೀಸರು ಇದೊಂದು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಇದು ಖಂಡನೀಯ. ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಆ ವೇಳೆ ಸಿಕ್ಕ ಕೆಲವರಿಗೆ ಹೆಡೆಮಟ್ಟೆಯಿಂದ ಹೊಡೆದಿದ್ದಾರೆ. ಪೊಲೀಸರು ಮಾಡಿದ ಹಲ್ಲೆಗೆ ಒಳಗಾಗಿದ್ದವರಲ್ಲಿ ಕುಮಾರ್ ಆಚಾರ್ ಸಹ ಒಬ್ಬರು. ದ್ವಿಚಕ್ರ ವಾಹನದಲ್ಲಿ ಪೊಲೀಸರು ಆರೋಪಿಗಳನ್ನು ಕರೆ ತರುವ ಸಂದರ್ಭದಲ್ಲಿ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಕುಮಾರ್ ದಾರಿ ಮಧ್ಯೆಯೇ ಅಸುನೀಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ನೆಪ ಮಾತ್ರಕ್ಕೆ ಅವರಿಗೆ ಚಿಕಿತ್ಸೆ ಕೊಡಿಸುವ ನಾಟಕ ಮಾಡಿದ್ದಾರೆ. ಆ ವೇಳೆಗಾಗಲೇ ಕುಮಾರ್ ಆಚಾರ್ ನಿಧನರಾಗಿದ್ದರು. ಇದಕ್ಕೆ ನೇರ ಹೊಣೆಗಾರರು ಸಬ್ ಇನ್​ಸ್ಪೆಪೆಕ್ಟರ್ ಹಾಗೂ ಮೂವರು ಸಿಬ್ಬಂದಿ ಕಾರಣರಾಗಿದ್ದಾರೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಮಕೂರು ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಹಠಾತ್ ಸಾವು.. ‘ಹೊಡೆದು ಸಾಯಿಸಿದ್ದಾರೆ’ ಎಂದು ಕುಟುಂಬಸ್ಥರು ಕಣ್ಣೀರು

https://newsfirstlive.com/wp-content/uploads/2023/11/TUM_POLICE-1.jpg

Load More