newsfirstkannada.com

ಟ್ರ್ಯಾಕ್ಟರ್ ಸ್ಟಂಟ್‌ ಮಾಡುತ್ತಲೇ ಯುವಕ ದಾರುಣ ಸಾವು; ಎದೆ ನಡುಗಿಸುತ್ತೇ ಈ ವಿಡಿಯೋ!

Share :

29-10-2023

    ಟ್ರಾಕ್ಟರ್​ ಸ್ಟಂಟಿಂಗ್ ವೇಳೆ 29 ವರ್ಷದ ಸಿಂಗ್ ಸಾವು

    ಟ್ರ್ಯಾಕ್ಟರ್​ನ ಮುಂದಿನ ಎರಡು ವ್ಹೀಲ್ ಎತ್ತಿ ಸಾಹಸ!

    29 ವರ್ಷದ ಸುಖ್​ಮಂಜೀತ್ ಸಿಂಗ್ ದುರಂತ ಅಂತ್ಯ

ಚಂಡಿಗಢ: ಸ್ಟಂಟ್ಸ್​ ಥ್ರಿಲ್ ಬಟ್ ಕಿಲ್ಸ್​ ಅಂತಾರೆ. ಯಾವುದೇ ಸಾಹಸ ಆಗಲಿ ತುಂಬಾ ಮಜಾ ಕೊಡುತ್ತೆ. ಥ್ರಿಲ್ ಕೊಡುತ್ತೆ. ಆದ್ರೆ ಒಂದ್ ಸೆಕೆಂಡ್ ಮಿಸ್ಸಾದ್ರೆ, ಅಪ್ಪಿತಪ್ಪಿ ಯಾಮಾರಿದ್ರೆ ಜೀವವೇ ಹೋಗ್ಬಿಡುತ್ತೆ. ಅಂಥದ್ದೆ ಒಂದು ಘಟನೆ ಪಂಜಾಬ್​ನಲ್ಲಿ ನಡೆದಿದೆ.

ಟ್ರಾಕ್ಟರ್​ ಸ್ಟಂಟ್​​ ವೇಳೆ ಓರ್ವನ ಜೀವವೇ ಹೋಗಿಬಿಟ್ಟಿದೆ. ಟ್ರ್ಯಾಕ್ಟರ್​ನ ಚಕ್ರಕ್ಕೆ ಸಿಲುಕಿ ಒದ್ದಾಡಿ ಈತ ಸಾವನಪ್ಪಿದ್ದಾನೆ. ಹೀಗೆ ಸ್ಟಂಟ್ ವೇಳೆ ಸಾವನ್ನಪ್ಪಿರೋದು 29 ವರ್ಷದ ಸುಖ್​ಮಂಜೀತ್ ಸಿಂಗ್.

ಈತ ಟ್ರ್ಯಾಕ್ಟರ್​ನ ಮುಂದಿನ ಎರಡು ವ್ಹೀಲ್​ಗಳನ್ನ ಎತ್ತಿ, ಹಿಂದಿನ ಎರಡು ಟೈಯರ್​ಗಳನ್ನ ಮಣ್ಣಡಿ ಸಿಲುಕಿಸಿ, ಸಾಹಸ ಪ್ರದರ್ಶನ ಆರಂಭಿಸಿದ್ದ. ಈ ವೇಳೆ ಟ್ರ್ಯಾಕ್ಟರ್ ಮುಂದಕ್ಕೆ ಹೋಗೋಕೆ ಶುರು ಮಾಡಿದೆ. ಗರಗರ ಸುತ್ತೋಕೂ ಆರಂಭಿಸಿದೆ. ತಕ್ಷಣ ಅದಕ್ಕೆ ಬ್ರೇಕ್ ಹಾಕ್ಕೋದಕ್ಕೆ ಸುಖ್​ಮಂಜೀತ್ ಸಿಂಗ್ ಮುಂದಾಗಿದ್ದ. ಈ ವೇಳೆ ಟ್ರ್ಯಾಕ್ಟರ್ ಚಕ್ರದ ಅಡಿಗೆ ಸಿಲುಕಿಬಿಟ್ಟಿದ್ದಾನೆ.

ಟ್ರ್ಯಾಕ್ಟರ್ ಮೂವಿಂಗ್​ನಲ್ಲಿದ್ದ ಕಾರಣ ಆತನಿಗೂ ತಪ್ಪಿಸಿಕೊಳ್ಳೋಕೆ ಆಗಿಲ್ಲ. ಪಕ್ಕದಲ್ಲಿದ್ದವರಿಗೂ ಕಾಪಾಡೋಕೆ ಸಾಧ್ಯವಾಗಿಲ್ಲ. ಪರಿಣಾಮ ಸುಖ್​ಮಂಜೀತ್ ಸಿಂಗ್ ಸಾವನಪ್ಪಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ​

ಟ್ರ್ಯಾಕ್ಟರ್ ಸ್ಟಂಟ್‌ ಮಾಡುತ್ತಲೇ ಯುವಕ ದಾರುಣ ಸಾವು; ಎದೆ ನಡುಗಿಸುತ್ತೇ ಈ ವಿಡಿಯೋ!

https://newsfirstlive.com/wp-content/uploads/2023/10/Tractor-Stunt.jpg

Load More