newsfirstkannada.com

ಹಲ್ಲು ನೋವು ಪರಿಹಾರಕ್ಕೆ YouTube ಮೊರೆ ಹೋಗಿ ಪ್ರಾಣಬಿಟ್ಟ ವಿದ್ಯಾರ್ಥಿ.. ಸ್ಪರ್ಧೆಯಲ್ಲಿ ಗೆಲ್ಲಲು 150 ಮೊಮೊಸ್ ತಿಂದು ಉಸಿರು ನಿಲ್ಲಿಸಿದ ವ್ಯಕ್ತಿ..

Share :

18-07-2023

    ದೇಶದಲ್ಲಿ ಎರಡು ಪ್ರತ್ಯೇಕ ದುರಂತ ಘಟನೆ

    ನಿಮ್ಮ ಸಮಸ್ಯೆಗೆ ಯೂಟ್ಯೂಬ್ ಪರಿಹಾರ ಅಲ್ಲ

    ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ..!

ಇವತ್ತಿನ ದಿನಮಾನದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ತುಂಬಾ ಸುಲಭ. ಅಂಗೈಯಲ್ಲೇ ಮೊಬೈಲ್ ಇರುವಾಗ, ಏನೇ ಸಮಸ್ಯೆ ಬಂದರೂ, ಯಾವುದೇ ಡೌಟ್ ಬಂದರೂ ಗೂಗಲ್, ಸೋಶಿಯಲ್​ ಮೀಡಿಯಾಗಳ ಮೊರೆ ಹೋಗುತ್ತೇವೆ. ಅಂತೆಯೇ ವಿದ್ಯಾರ್ಥಿಯೊಬ್ಬ ಯುಟ್ಯೂಬ್​​​ ಮೂಲಕ ತನ್ನ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಹೋಗಿ ಜೀವವನ್ನೇ ಕಳೆದುಕೊಂಡಿದ್ದಾನೆ.

ಜಾರ್ಖಂಡ್​​ ಮೂಲದ ಅಜಯ್ ಮಹ್ತೋ (26) ಸಾವನ್ನಪ್ಪಿದ ವಿದ್ಯಾರ್ಥಿ. ಈತನಿಗೆ ವಿಪರೀತ ಹಲ್ಲು ನೋವು ಕಾಣಿಸಿಕೊಂಡಿತ್ತು. ವೈದ್ಯರ ಸಲಹೆ ಪಡೆಯುವ ಬದಲಾಗಿ, ಯೂಟ್ಯೂಬ್​​ ಮೂಲಕ ಔಷಧಿ ಹುಡುಕಿದ್ದಾನೆ. ಹಲ್ಲು ನೋವಿಗೆ ಪರಿಹಾರ ಏನು ಅಂತಾ ಯೂಟ್ಯೂಬ್​ನಲ್ಲಿ ಸರ್ಚ್​ ಮಾಡಿದಾಗ ಯಾವುದೋ ಒಂದು ವಿಡಿಯೋ ಪ್ಲೇ ಆಗಿದೆ. ಅದನ್ನು ನೋಡಿದ ಅಜಯ್, ಹೆಚ್ಚುವರಿಯಾಗಿ ಕನೇರ್​ (oleander: ಕಣಗಿಲು) ಬೀಜಗಳನ್ನು ಸೇವಿಸಿದ್ದಾನೆ. ಅದು ವಿಷವಾಗಿ ಮಾರ್ಪಟ್ಟಿದೆ.

ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬಿಷ್ಣುಗಢ ಕಮ್ಯುನಿಟಿ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಆತ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಅವರ ತಂದೆ ನುನುಚಂದ್ ಪ್ರತಿಕ್ರಿಯಿಸಿ, ಯೂಟ್ಯೂಬ್ ನೋಡಿ ಕನೇರ್ ಬೀಜಗಳನ್ನು ಸೇವಿಸಿದ್ದರಿಂದ ಅನಾಹುತ ಆಗಿದೆ. ನನ್ನ ಮಗ ಲಾಡ್ಜ್​ ಒಂದರಲ್ಲಿ ವಾಸ್ತವ್ಯ ಹೂಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ. 10 ಮತ್ತು 12ನೇ ತರಗತಿಯ ಸಿಬಿಎಸ್​ ಪರೀಕ್ಷೆಯಲ್ಲಿ ಱಂಕ್ ಬಂದಿದ್ದ ಎಂದಿದ್ದಾರೆ.

150 ಮೊಮೊಸ್ ತಿಂದು ಪ್ರಾಣಬಿಟ್ಟ

ಇದೇ ರೀತಿ ಬಿಹಾರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. 150 ಮೊಮೊಸ್​ಗಳನ್ನು ತಿಂದು 25 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಯಾರು ಹೆಚ್ಚು ಮೊಮೊಸ್​ಗಳನ್ನು ತಿನ್ನುತ್ತಾರೋ ಅವರಿಗಾಗಿ ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿ ಬರೋಬ್ಬರಿ 150 ಮೊಮೊಸ್​​ ತಿಂದು ಪ್ರಾಣಬಿಟ್ಟಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಲ್ಲು ನೋವು ಪರಿಹಾರಕ್ಕೆ YouTube ಮೊರೆ ಹೋಗಿ ಪ್ರಾಣಬಿಟ್ಟ ವಿದ್ಯಾರ್ಥಿ.. ಸ್ಪರ್ಧೆಯಲ್ಲಿ ಗೆಲ್ಲಲು 150 ಮೊಮೊಸ್ ತಿಂದು ಉಸಿರು ನಿಲ್ಲಿಸಿದ ವ್ಯಕ್ತಿ..

https://newsfirstlive.com/wp-content/uploads/2023/07/YOUTUBE.jpg

Load More