22 ವರ್ಷದ ಯುವಕನನ್ನು ಕಚ್ಚಿ ಸಾಯಿಸಿದ ವಿಷಸರ್ಪ
ಯುವಕನ ಚಿತೆಯಲ್ಲಿ ಹಾವು ಎಸೆದು ಜೀವಂತ ಸುಟ್ಟ ಜನ
ಹಾವನ್ನು ಜೀವಂತ ಸುಟ್ಟರು ಕ್ರಮ ಕೈಗೊಳ್ಳದ ಅಧಿಕಾರಿಗಳು
ಛತ್ತಿಸ್ಗಢದ ಕೊರ್ಬಾ ಜಿಲ್ಲೆಯಲ್ಲಿ 22 ವರ್ಷದ ಯುವಕ ಹಾವು ಕಚ್ಚಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಆದ್ರೆ ಯುವಕನಿಗೆ ಕಚ್ಚಿದ ಹಾವನ್ನು ಗ್ರಾಮಸ್ಥರು ಹಿಡಿದಿಟ್ಟಿದ್ದರು. ಆಸ್ಪತ್ರೆಯಲ್ಲಿ ಯುವಕ ಮೃತಪಟ್ಟ ಸುದ್ದಿಯನ್ನು ಕೇಳಿದ ಗ್ರಾಮಸ್ಥರು. ಯುವಕನ ಅಂತ್ಯ ಕ್ರಿಯೆ ನಡೆಯುವಾಗ ಅವನ ಚಿತೆಯ ಮೇಲೆ ಹಾವನ್ನು ಹಾಕಿ ಜೀವಂತವಾಗಿ ಸುಟ್ಟುಬಿಟ್ಟಿದ್ದಾರೆ.
ಇದನ್ನೂ ಓದಿ: ತಿರುಪತಿ ಲಡ್ಡು ವಿವಾದಕ್ಕೆ ಟ್ವಿಸ್ಟ್.. ಮಹಾಶಾಂತಿ ಬೆನ್ನಲ್ಲೇ ಪ್ರಮಾಣ ಮಾಡಿದ ಭೂಮಲ ಕರುಣಾಕರರೆಡ್ಡಿ!
ಸೆಪ್ಟಂಬರ್ 22 ಅಂದ್ರೆ ರವಿವಾರ ಈ ಘಟನೆ ನಡೆದಿದೆ. ವಿಷಕಾರಿ ಹಾವು ಕಚ್ಚಿದ್ದರಿಂದ 22 ವರ್ಷದ ಯುವಕ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮತ್ತೊಂದು ಕಡೆ ಸ್ಥಳೀಯರು ಯುವಕನಿಗೆ ಕಡಿದಿದ್ದ ಹಾವನ್ನು ಹಿಡಿದು ಒಂದು ಬ್ಯಾಗ್ನಲ್ಲಿ ಹಾಕಿ ಇಟ್ಟಿದ್ದರು. ಆಸ್ಪತ್ರೆಗೆ ಸೇರಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಅವನ ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳು ನಡೆಯುವ ವೇಳೆ ಸ್ಥಳೀಯರು ತಾವು ಹಿಡಿದಿದ್ದ ಸರ್ಪವನ್ನು ಅಂತ್ಯಕ್ರಿಯೆ ನಡೆಯುವ ಜಾಗಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಯುವಕನ ಚಿತೆಗೆ ಬೆಂಕಿಯಿಡುತ್ತಿದ್ದಂತೆ ಹಾವನ್ನು ಕೂಡ ಆ ಚಿತೆಗೆ ಎಸೆದು ಜೀವಂತವಾಗಿ ಸುಟ್ಟಿದ್ದಾರೆ.
ಇದನ್ನೂ ಓದಿ: Coldplay ಹವಾ.. ಭಾರತದಲ್ಲಿ ಟಿಕೆಟ್ ಸೋಲ್ಡ್ ಔಟ್.. ಸ್ಟೇಡಿಯಂ ಪಕ್ಕದ ಹೋಟೆಲ್ಗಳು ಬುಕ್; ಏನಿದರ ಇತಿಹಾಸ?
ಹಾವನ್ನು ಹಿಡಿದಿಟ್ಟ ಸ್ಥಳೀಯರು ಇದು ಮುಂದೆ ಮತ್ಯಾರಿಗಾದರೂ ಜೀವಕಂಟಕ ಆಗಬಹುದು ಎಂದು ಹೆದರಿ, ಹಾವನ್ನು ಚಿತೆಯಲ್ಲಿ ಎಸೆದು ಜೀವಂತವಾಗಿ ದಹನ ಮಾಡಿದ್ದಾರೆ. ಈ ಒಂದು ಸುದ್ದಿ ಕಾಡ್ಗಿಚ್ಚಿನಂತೆ ಊರೆಲ್ಲಾ ಹಬ್ಬಿದೆ ಆದ್ರೆ ಕೊರ್ಬಾ ಜಿಲ್ಲೆಯ ಸಬ್ ಡಿವಿಜನಲ್ ಆಫೀಸರ್ ಅಖಿಲೇಶ್ ಖೇಲ್ವಾರ್ ಮಾತ್ರ ಯಾವ ಗ್ರಾಮಸ್ಥರ ವಿರುದ್ಧವೂ ಹಾವನ್ನು ಜೀವಂತವಾಗಿ ಸುಟ್ಟದ್ದಕ್ಕಾಗಿ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮಾತನಾಡಿರುವ ಅಖಲೇಶ್, ಗ್ರಾಮದ ಜನರಿಗೆ ಹಾವುಗಳ ಬಗ್ಗೆ ಹಾಗೂ ಹಾವು ಕಚ್ಚುವ ವಿಚಾರದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ