ಗೆಳೆಯನ ಭೇಟಿಗೆ ಗುಜರಾತ್ನಿಂದ ಗೋವಾಗೆ ಹೊರಟಿದ್ದ ಕಾರು ನೀರು ಪಾಲು
ಗಾಬರಿ ಬಿದ್ದು ಅತಿ ವೇಗವಾಗಿ ಓಡಿಸಲು ಹೋಗಿ ನಿಯಂತ್ರಣ ತಪ್ಪಿದ ಚಾಲಕ
ಚಾಲಕ ಗಾಬರಿ ಬಿದ್ದಿದ್ದು ಏಕೆ? ಭೀಕರ ಅಪಘಾತಕ್ಕೆ ಕಾರಣ ತೆರೆದಿಟ್ಟ ಆ ಯುವತಿ!
ಪಣಜಿ: ಗೋವಾಗೆ ಯುವತಿಯೊಂದಿಗೆ ಹೋಗುತ್ತಿದ್ದ 22 ವರ್ಷದ ಯುವಕ ಗಾಬರಿಯಿಂದ ಅತಿವೇಗವಾಗಿ ತನ್ನ ಕಾರು ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಘಟನೆ ನಡೆದಿದೆ. ಕಳೆದ ಭಾನುವಾರ ಮಧ್ಯರಾತ್ರಿ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಗುಜರಾತ್ನ ಬಹ್ರುಚ್ ನವರಾದ ಭಶುದೇವ್ ಬಂಢಾರಿ ಅನ್ನುವವರ ಕಾರು ನದಿಗೆ ಬಿದ್ದಿದ್ದು, ಕಾರು ಚಲಾಯಿಸುತ್ತಿದ್ದ ಭಶುದೇವ್ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ:ವಿನೇಶ್ ಪೋಗಟ್ ಜತೆಗಿನ ಅಮೀರ್ ಖಾನ್ ವಿಡಿಯೋ ಕಾಲ್ ವೈರಲ್; ಏನಿದರ ರಹಸ್ಯ?
ಭಶುದೇವ್ ಬಂಢಾರಿ ಯುವತಿಯೊಂದಿಗೆ ಗೋವಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಇಬ್ಬರು ತನ್ನ ಗೆಳೆಯ ಭೇಟಿಗೆ ಹೊರಟಿದ್ದರು. ಮರ್ಸೆಲ್ ಗ್ರಾಮದ ಬಳಿ ಬಂಢಾರಿ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಾಬರಿಗೊಂಡ ಬಂಢಾರಿ, ಚೇಸ್ ಮಾಡಿಕೊಂಡು ಬರುತ್ತಿರುವ ಕಾರಿನಿಂದ ತಪ್ಪಿಸಿಕೊಳ್ಳಲು ಅತಿವೇಗವಾಗಿ ಕಾರನ್ನು ಓಡಿಸಿದ್ದಾರೆ. ಇದರಿಂದ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿಯೇ ಇದ್ದ ನದಿಗೆ ಬಿದ್ದಿದೆ. ಕಾರು ನದಿಗೆ ಬಿದ್ದ ಬಳಿಕ ಅದರಲ್ಲಿದ್ದ ಯುವತಿ ಈಜಿ ದಡ ಸೇರಿದ್ದಾಳೆ. ಆದ್ರೆ ಯುವಕ ಮಾತ್ರ ನಾಪತ್ತೆಯಾಗಿದ್ದಾನೆ. ಗೌಂಡಾಳಿ ಹಾಗೂ ಸೈಂಟೆಸ್ಕೋವ್ ಗ್ರಾಮಗಳ ನಡುವೆ ಈ ಘಟನೆ ನಡೆದಿದೆ.
गोवा के एसटी एस्टेवम इलाके में भारतीय नौसेना और गोवा फायर ब्रिगेड ने मिलकर नदी में गिरी एक कार का रेस्क्यू किया, देखिए वीडियो।#Goa #RescueOperation #River pic.twitter.com/qE1Jf98JfO
— निष्पक्ष प्रतिदिन | Nishpaksh Pratidin (@Nishpakshprati1) September 1, 2024
ಇದನ್ನೂ ಓದಿ: ‘0001’ ವಿಐಪಿ ನಂಬರ್ಗಾಗಿ 6 ಲಕ್ಷ ಪಾವತಿಸಿ.. ಫ್ಯಾನ್ಸಿ ನಂಬರ್ಗಳ ಬೆಲೆ ಏರಿಸಿಕೊಂಡ ಸರ್ಕಾರ
ಇನ್ನೂ ಮಧ್ಯರಾತ್ರಿ ಸುಮಾರು ಎರಡು ಗಂಟೆಗೆ ಸುದ್ದಿ ತಿಳಿದ ಪೋಂಡಾದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳ ಹಾಗೂ ನೌಕಾದಳದ ಸಹಾಯದಿಂದ ಕ್ರೇನ್ ಮೂಲಕ ಕಾರನ್ನು ಆಚೆಗೆ ಎಳೆದು ತಂದಿದ್ದಾರೆ. ಕಾರ್ನಲ್ಲಿ ಯಾವುದೇ ವ್ಯಕ್ತಿಯೂ ಕೂಡ ಪತ್ತೆಯಾಗಿಲ್ಲ. ಯುವಕ ನೀರಿನಲ್ಲಿ ಮುಳುಗಿ ಹೋಗಿದ್ದಾನಾ ಇಲ್ಲವೇ ಇನ್ನೂ ಬದುಕಿದ್ದಾನಾ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು ಪೊಂಡಾದ ಅಸಿಸ್ಟಂಟ್ ಡಿವಿಜಿನಲ್ ಆಫೀಸರ್ ಆಗಿರುವ ಅಜಿತ್ ಕಾಮತ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ