newsfirstkannada.com

ಕಾರ್ ಓಡಿಸುವಾಗ ಹೆಲ್ಮೆಟ್ ಹಾಕದ್ದಕ್ಕೆ ₹1000 ಫೈನ್.. ಯುವಕನಿಗೆ ಡಬಲ್ ಶಾಕ್‌; ಆಮೇಲೇನಾಯ್ತು?

Share :

Published August 26, 2024 at 7:58pm

Update August 26, 2024 at 7:59pm

    ಹೆಲ್ಮೆಟ್ ಧರಿಸದೆ ಕಾರು ಚಲಾಯಿಸಿದ್ದಕ್ಕೆ ದಂಡ ಹಾಕಿದ ಸಂಚಾರಿ ಪೊಲೀಸರು

    ದಂಡದ ರಸೀದಿ ಮೊಬೈಲ್​ಗೆ ಬಂದದ್ದು ನೋಡಿ ಬೆಚ್ಚಿ ಬಿದ್ದ ಕಾರಿನ ಚಾಲಕ

    ಪ್ರಶ್ನೆ ಮಾಡಿದ್ದಕ್ಕೆ ದಂಡ ಕಟ್ಟಿ, ಇಲ್ಲ ಕೋರ್ಟ್​ಗೆ ಹೋಗಿ ಎಂದ ಪೊಲೀಸರು

ಲಖನೌ: ದೊಡ್ಡ ದೊಡ್ಡ ಸಿಟಿಗಳಲ್ಲಿ ಪ್ರತಿಯೊಂದು ಸಿಗ್ನಲ್​ನಲ್ಲಿ ಈಗ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳ ಮೂಲಕ ಯಾರೇ ಟ್ರಾಫಿಕ್ ಸಿಗ್ನಲ್​ ರೂಲ್ಸ್​ಗಳನ್ನು ಮೀರಿದರೂ ಕೂಡ ಅವರ ಮೊಬೈಲ್​ಗೆ ಟ್ರಾಫಿಕ್ ಕಂಟ್ರೋಲ್​ನಿಂದ ದಂಡದ ಮೊತ್ತ ಹೋಗುತ್ತೆ. ಅದಕ್ಕೆ ಗಮನ ಕೊಡದೇ ಹೋದ ಪಕ್ಷದಲ್ಲಿ ನಿಮ್ಮ ಇ-ಮೇಲ್​ಗೆ ಕೂಡ ಒಂದು ದಂಡದ ರಸೀದಿ ಬಂದು ಬೀಳುತ್ತೆ. ಹೀಗೆ ಟ್ರಾಫಿಕ್ ಕಂಟ್ರೋಲ್ ರೂಮ್​ನಿಂದ ಬಂದ ದಂಡದ ರಸೀದಿ ನೋಡಿ ಉತ್ತರಪ್ರದೇಶದಲ್ಲೊಬ್ಬ ಬೆಚ್ಚಿ ಬಿದ್ದಿದ್ದಾನೆ. ಅಲ್ಲಾ ಸ್ವಾಮಿ, ಕಾರ್ ಓಡಿಸುವಾಗಲೂ ಹೆಲ್ಮೆಟ್ ಧರಿಸಿರಲೇಬೇಕು ಎಂಬ ಸಂಚಾರಿ ನಿಯಮ ದೇಶದಲ್ಲಿ ಯಾವಾಗ ಬಂತು ಎಂದು ಶಾಕ್ ಆಗಿದ್ದಾನೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್​ನಿಂದ ಕೈದಿಗಳಿಗೆ ಗುಡ್​ನ್ಯೂಸ್.. 2 ತಿಂಗಳಲ್ಲಿ ಬಿಡುಗಡೆ ಭಾಗ್ಯ

ಉತ್ತರಪ್ರದೇಶದ ನೋಯ್ಡಾ ಸಂಚಾರಿ ಪೊಲೀಸರಿಂದ ಒಂದು ಯಡವಟ್ಟು ನಡೆದು ಹೋಗಿದೆ. ತುಷಾರ್ ಸಕ್ಸೇನಾ ಎಂಬ ಯುವಕನಿಗೆ ಕಾರ್​ ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಹೆಲ್ಮೆಟ್ ಧರಿಸಿದ ಕಾರಣ ನಿಮಗೆ 1 ಸಾವಿರ ದಂಡ ವಿಧಿಸಲಾಗಿದೆ ಎಂದು ತುಷಾರ್ ಸಕ್ಸೇನಾಗೆ ಮೊಬೈಲ್​ಗೆ ಇತ್ತೀಚೆಗೆ ಒಂದು ಟೆಕ್ಷ್ಟ್ ಮೆಸೇಜ್ ಬಂದಿದೆ. ಅದಕ್ಕೆ ಅಷ್ಟೊಂದು ಗಮನ ಕೊಡದೇ ಇದ್ದಾಗ ಇ-ಮೇಲ್​ನಲ್ಲಿಯೂ ಕೂಡ ಸಂಚಾರಿ ಪೊಲೀಸರಿಂದ ಮತ್ತೊಂದು ಮೆಸೇಜ್ ಬಂದಿದ್ದು ನೋಡಿದಾಗ ಯುವಕ ನಿಜಕ್ಕೂ ಶಾಕ್ ಆಗಿದ್ದಾನೆ.

ಇದನ್ನೂ ಓದಿ: ಸಂಸದೆ ಕಂಗನಾ ಹೇಳಿಕೆಯಿಂದ ಬಿಜೆಪಿ ಪಕ್ಷಕ್ಕೆ ಅತಿ ದೊಡ್ಡ ಮುಜುಗರ; ನಡು ಬೀದಿಯಲ್ಲಿ ಕೈ ಬಿಡ್ತಾ ಹೈಕಮಾಂಡ್‌?

ಫೋರ್ ವ್ಹೀಲರ್​ನಲ್ಲಿ ಹೆಲ್ಮೆಟ್ ಧರಿಸದ ಕಾರಣಕ್ಕೆ ನಿಮಗೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂಬ ಮೆಸೇಜ್ ನೋಡಿದ ಯುವಕ ಸಂಚಾರಿ ಪೊಲೀಸರನ್ನು ಸಂಪರ್ಕಿಸಿ, ಇದು ಹೇಗೆ ದಂಡ ವಿಧಿಸಿದ್ದೀರಿ. ಕಾರ್​ನಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸಬೇಕೆಂಬ ನಿಯಮ ಎಲ್ಲಿದೆ ಎಂದು ಕೇಳಿದ್ದಾನೆ ಅದಕ್ಕೆ ಸಂಚಾರಿ ಪೊಲೀಸರು ದಂಡ ಕಟ್ಟಿ ಇಲ್ಲವೇ ಕೋರ್ಟ್ ಮೆಟ್ಟಿಲೇರಿ ಇತ್ಯರ್ಥಪಡಿಸಿಕೊಳ್ಳಿ ಎಂದಿದ್ದಾರೆ.

ಅದು ಅಲ್ಲದೇ ತುಷಾರ್ ಸಕ್ಸೆನಾ ಈ ಹಿಂದೆ ಎಂದು ಎನ್​ಸಿಆರ್ ರೋಡ್ ಸೈಡ್ ಪ್ರಯಾಣವೇ ಮಾಡಿಲ್ಲ ಒಂದು ವೇಳೆ ಮಾಡಿದ್ದರು, ಕಾರ್​ನಲ್ಲಿ ಹೆಲ್ಮೆಟ್ ಧರಿಸದಿದ್ದಕ್ಕೆ ಫೈನ್ ಹಾಕುವುದು ಹೇಗೆ ಎಂದು ಪ್ರಶ್ನಿಸಿದ್ದು ಅಲ್ಲದೇ ನೋಯ್ಡಾ ಪೊಲೀಸರಿಗೆ ಮತ್ತೊಮ್ಮೆ ಸರಿಯಾಗಿ ತನಿಖೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರ್ ಓಡಿಸುವಾಗ ಹೆಲ್ಮೆಟ್ ಹಾಕದ್ದಕ್ಕೆ ₹1000 ಫೈನ್.. ಯುವಕನಿಗೆ ಡಬಲ್ ಶಾಕ್‌; ಆಮೇಲೇನಾಯ್ತು?

https://newsfirstlive.com/wp-content/uploads/2024/08/FINE-WITHOUT-HELMET-IN-CAR.jpg

Load More