/newsfirstlive-kannada/media/post_attachments/wp-content/uploads/2024/11/MAHINDRA-THAR-GUN-FIRE.jpg)
ಮಹೀಂದ್ರಾ ಥಾರ್​, ಅದೆಷ್ಟೋ ಜನರ ಕನಸಿನ ವಾಹನ. ಕನಿಷ್ಠ ಪಕ್ಷ ಒಂದು ಭಾರಿಯಾದರೂ ಈ ವಾಹವನ್ನು ಓಡಿಸಿ ನೋಡಬೇಕು ಎಂದು ಕನಸುಳ್ಳವರು ಸಾಕಷ್ಟು ಜನರು ಇದ್ದಾರೆ. ಆದ್ರೆ ಮಧ್ಯಪ್ರದೇಶದಲ್ಲಿ ಮಹೀಂದ್ರಾ ಥಾರ್​ ಖರೀದಿಸಿದ ಖುಷಿಯಲ್ಲಿದ್ದವನನ್ನು ಪೊಲೀಸರು ಎಳೆದಕೊಂಡು ಹೋಗಲಿ ಎಂಬ ಆಗ್ರಹಗಳು ಕೇಳಿ ಬರುತ್ತಿವೆ. ಸುಖಾಸುಮ್ಮನೆ ಯಾವ ಪೊಲೀಸರು ಹಾಗೆ ಯಾರನ್ನೂ ಎಳೆದುಕೊಂಡು ಹೋಗುವುದಿಲ್ಲ. ಆದ್ರೆ ಥಾರ್ ಖರೀದಿಸಿದ ಖುಷಿಯಲ್ಲಿದ್ದವನು ಗನ್​​ನಿಂದ ಆಗಸದಲ್ಲಿ ಬುಲೆಟ್ ಫೈರ್ ಮಾಡಿ ತಗಲಾಕಿಕೊಂಡಿದ್ದಾನೆ. ನೆಟ್ಟಿಗರು ಆ ವ್ಯಕ್ತಿಯ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಮಧ್ಯಪ್ರದೇಶದ ಯುವಕ ಥಾರ್ ಖರೀದಿಸಿದ ಖುಷಿಯಲ್ಲಿ ಗಾಳಿಯಲ್ಲಿ ಗುಂಡು ಹೊಡೆದ ಮಧ್ಯಪ್ರದೇಶದ ಯುವಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ಯಶ್ಪಾಲ್ ಸಿಂಗ್ ಪನ್ವರ್ ಎಂಬುವವರ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸಿಂಗಾರಗೊಂಡ ಥಾರ್ ವಾಹನದಲ್ಲಿ ಸಂಬಂಧಿಯೊಂದಿಗೆ ನಿಂತಿದ್ದ ವ್ಯಕ್ತಿ, ಥಾರ್ ಖರೀದಿಸಿದ ಖುಷಿಯಲ್ಲಿ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.
View this post on Instagram
ಇದನ್ನೂ ಓದಿ:ಎ.ಆರ್ ರೆಹಮಾನ್‌ಗೆ ಬಿಗ್ ಶಾಕ್.. ದಿಢೀರ್ ಬೇರೆಯಾಗುವ ನಿರ್ಧಾರ ಪ್ರಕಟಿಸಿದ ಸೈರಾ; ಕಾರಣವೇನು?
ಇದೇ ವಿಡಿಯೋ ರತನ್ ಧಿಲ್ಲಾನ್ ಎಂಬುವವರು ಇನ್​ಸ್ಟಾಗ್ರಾಮ್​ನಲ್ಲಿ ರಿಪೋಸ್ಟ್​ ಮಾಡಿದ್ದು. ಈ ಒಂದು ಘಟನೆ ನಡೆಯಲು ಮಹೀಂದ್ರಾ ಶೋರೂಮ್​ನವರು ಹೇಗೆ ಬಿಟ್ಟರು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೂಡ ಆಗ್ರಹಿಸಿದ್ದಾರೆ. ಜೊತೆಗೆ ಮಧ್ಯಪ್ರದೇಶದ ಪೊಲೀಸರನ್ನು ಕೂಡ ಪೋಸ್ಟ್​ನಲ್ಲಿ ಟ್ಯಾಗ್ ಮಾಡಿದ್ದಾರೆ.
ಯಾವಾಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತೊ, ಅನೇಕರು ಕೂಡಲೇ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಲು ಶುರು ಮಾಡುತ್ತಿದ್ದಾರೆ. ಆದ್ರೆ ಮಧ್ಯಪ್ರದೇಶದ ಪೊಲೀಸರಿಂದ ಇನ್ನೂ ಯಾವುದೇ ಕ್ರಮ ಕೈಗೊಂಡ ಬಗ್ಗೆ ವರದಿಯಾಗಿಲ್ಲ. ಇದನ್ನು ಹೀಗೆ ನಿರ್ಲಕ್ಷ್ಯ ಮಾಡಿದರೆ ಮುಂದೊಂದು ದಿನ ಹೊಸ ವಾಹನ ಖರೀದಿ ಮಾಡುವವರಿಗೆ ಇದೇ ಟ್ರೆಂಡ್ ಆಗಿ ಬದಲಾಗುವ ಸಾಧ್ಯತೆ ಇದೆ ಎಂದು ಹಲವು ಕಳವಳವನ್ನು ಕೂಡ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us