40 ಸಾವಿರ ಪುಟಗಳ ಕಂಡು RTI ಕಾರ್ಯಕರ್ತ ಗಾಬರಿ
ಪ್ರತಿ ಪುಟಕ್ಕೆ 2 ರೂಪಾಯಿಯಂತೆ ಹಣ ಕೊಟ್ನಾ RTI ಕಾರ್ಯಕರ್ತ?
RTI ಕಾರ್ಯಕರ್ತನ ಸುದೀರ್ಘ ಅನುಭವ ಏನು ಗೊತ್ತಾ?
ಮಧ್ಯಪ್ರದೇಶದ ಇಂದೋರ್ನಲ್ಲಿ ಧರ್ಮೇಂದ್ರ ಶುಕ್ಲಾ ಎಂಬ ಆರ್ಟಿಐ ಕಾರ್ಯಕರ್ತರೊಬ್ಬರು ಕೊರೊನಾ ಸಾಂಕ್ರಾಮಿಕ-2019ಗೆ ಸಂಬಂಧಿಸಿದಂತೆ ಸರ್ಕಾರದಿಂದ ‘ಮಾಹಿತಿ ಹಕ್ಕು’ ಅಡಿಯಲ್ಲಿ ದಾಖಲೆಗಳನ್ನು ಕೇಳಿದ್ದರು. ಅವರಿಗೆ ಬರೋಬ್ಬರಿ 40 ಸಾವಿರ ಪುಟಗಳ ಮಾಹಿತಿಯನ್ನು ನೀಡಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಕೊರೊನಾಗೆ ಸಂಬಂಧಿಸಿದ ಮಾಹಿತಿ
ಅಂದ್ಹಾಗೆ ಧರ್ಮೇಂದ್ರ ಶುಕ್ಲಾ ಅವರು, 40 ಸಾವಿರ ಪುಟಗಳ ಪ್ರತಿ ಪೇಜ್ಗೆ 2 ರೂಪಾಯಿ ಹಣವನ್ನು ಪಾವತಿ ಮಾಡಬೇಕಾಗಿಲ್ಲ. ಯಾಕಂದರೆ ಅವರು ಮಾಹಿತಿ ಕೇಳಿದ ಒಂದು ತಿಂಗಳಲ್ಲಿ ಸರ್ಕಾರದ ಅಧಿಕಾರಿಗಳು ಮಾಹಿತಿಯನ್ನು ನೀಡಿಲ್ಲ. ಕೊರೊನಾ ಸಂದರ್ಭದಲ್ಲಿ ಸರ್ಕಾರ ಮಾಡಿದ ಚಿಕಿತ್ಸೆ. ವೈದ್ಯಕೀಯ ಸಹಾಯಕ್ಕೆ ಬೇಕಾಗಿದ್ದ ಉಪಕರಣಗಳ ಖರೀದಿ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಚೀಫ್ ಮೆಡಿಕಲ್ ಮತ್ತು ಹೆಲ್ತ್ ಆಫೀಸರ್ (CHMO)ಗೆ ಕೇಳಿದ್ದೆ. ಆದರೆ ಅವರು ನಿಗಧಿತ ಸಮಯಕ್ಕೆ ನನಗೆ ಮಾಹಿತಿಯನ್ನು ನೀಡಿಲ್ಲ ಎಂದು ಶುಕ್ಲಾ ಹೇಳಿದ್ದಾರೆ.
ಮೊದಲ ಬಾರಿ ಅರ್ಜಿ ಹಾಕಿದಾಗ ನನಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ಮತ್ತೊಮ್ಮೆ ಮೆಲ್ಮನವಿ ಸಲ್ಲಿಸಿದ್ದೆ. ಕೊನೆಗೆ 40 ಸಾವಿರ ಪುಟುಗಳ ಮಾಹಿತಿಯನ್ನು ನೀಡಿದ್ದಾರೆ. ಜೊತೆಗೆ ಇದಕ್ಕೆ ಯಾವುದೇ ವೆಚ್ಚವನ್ನು ಬರಿಸೋದು ಬೇಡ ಎಂದು ಅಧಿಕಾರಿ ಡಾ.ಶರದ್ ಗುಪ್ತ ತಿಳಿಸಿದ್ದಾರೆ ಎಂದಿದ್ದಾರೆ. 40000 ಪುಟಗಳ ದಾಖಲೆಗಳನ್ನು ನಾನು ನನ್ನ ಕಾರಿನಲ್ಲಿ ಇಟ್ಟುಕೊಂಡು ಮನೆಗೆ ಬಂದಿದ್ದೇನೆ. ಕಾರಿನ ಡ್ರೈವರ್ ಸೀಟ್ ಮಾತ್ರ ಖಾಲಿ ಇತ್ತು ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ