ಸಂಜಯ್ ಮಹತೋ ಎಂಬಾತನಿಗೆ ಪತ್ನಿ ಮೇಲೆ ಅತೀವ ಪ್ರೀತಿ
ಹೆಂಡತಿ ಹುಟ್ಟುಹಬ್ಬಕ್ಕೆ ಚಂದಿರನನ್ನೇ ಕರೆತರುವುದಾಗಿ ಭರವಸೆ
ಮುದ್ದಾದ ಹೆಂಡತಿಗೆ ಸೂಪರ್ ಗಿಫ್ಟ್ ಕೊಟ್ಟ ಖುಷಿ ಪಟ್ಟ ಗಂಡ
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಚಂದ್ರಯಾನ-3 ಯಶಸ್ವಿಯಾಗಿ ಚಂದಿರನ ಅಂಗಳ ಸೇರಿದೆ. ಇದನ್ನೇ ಸ್ಪೂರ್ತಿಯಾಗಿ ಪಡೆದ ಬಂಗಾಳ ಮೂಲದ ಸಂಜಯ್ ಮಹತೋ ತನ್ನ ಪ್ರೀತಿಯ ಪತ್ನಿ ಹುಟ್ಟುಹಬ್ಬಕ್ಕೆ ಚಂದಿರನ ಬಳಿ ಒಂದು ಎಕರೆ ಪ್ರದೇಶ ಖರೀದಿ ಮಾಡಿ ಉಡುಗೊರೆಯಾಗಿ ನೀಡಿದ್ದಾನೆ.
ಹೌದು. ಸಾಮಾನ್ಯವಾಗಿ ಪ್ರೀತಿಯ ಮಡದಿಯ ಬರ್ತ್ಡೇಗಾಗಿ ಪತಿ ಏನಾದರೊಂದು ಗಿಫ್ಟ್ ನೀಡೋದು ಸಹಜ. ಆದರೆ ಇಲ್ಲಿ ಗಂಡ ಒಂದು ಎಕರೆ ಜಾಗವನ್ನು ಖರೀದಿ ಮಾಡಿದ್ದಾನೆ. ಅದು ಚಂದಿರನ ಅಂಗಳದಲ್ಲಿ ಎಂಬುದೇ ಅಚ್ಚರಿಯ ಸಂಗತಿಯಾಗಿದೆ. ಅಷ್ಟು ಮಾತ್ರವಲ್ಲದೆ ಈ ಜಾಗ ಖರೀದಿಗೂ ಒಂದು ಕಾರಣವಿದ್ದು ಈತ ವಿವಾಹಕ್ಕೂ ಮುನ್ನ ಪತ್ನಿಗೆ ಚಂದಿರನನ್ನ ಕರೆತರುವುದಾಗಿ ಭರವಸೆ ನೀಡಿದ್ದರಂತೆ. ಹೀಗಾಗಿ ಚಂದ್ರಯಾನ-3 ಬಳಿಕ ಸಂಜಯ್ಗೆ ಈ ರೀತಿ ಆಲೋಚನೆ ಬಂದಿದ್ದು, ಲೂನಾ ಸೊಸೈಟಿ ಇಂಟರ್ನ್ಯಾಷನಲ್ ಮೂಲಕ 10,000 ರೂಪಾಯಿ ಹಣ ನೀಡಿ ಚಂದಿರನಲ್ಲಿ ಪ್ರದೇಶ ಖರೀದಿ ಮಾಡಿದ್ದಾರೆ.
ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ. ಪತ್ನಿಯ ಹುಟ್ಟುಹಬ್ಬಕ್ಕೆ ಗಂಡ ದೊಡ್ಡದಾದ ಸಿಹಿಸುದ್ದಿಯ ಜೊತೆಗೆ ಗಿಫ್ಟ್ ನೀಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ