ಪತ್ನಿ ಮೇಲಿನ ಸಿಟ್ಟಿಗೆ ಇಬ್ಬರು ಮಕ್ಕಳಿಗೆ ವಿಷ ಕೊಟ್ಟ ಪಾಪಿ ತಂದೆ
ವಿಷ ಸೇವಿಸಿದ ತಂದೆ ಹಾಗೂ ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕ
ಸಾವು ಬದುಕಿನ ನಡುವೆ ಅಪ್ಪ, ಮಕ್ಕಳು ಹೋರಾಟ; ಮುಂದೇನು?
ರಾಮನಗರ: ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೋರ್ವ ತನ್ನ ಎರಡು ಪುಟ್ಟ ಕಂದಮ್ಮಗಳಿಗೆ ಉಷ ಉಣಿಸಿದ ದಾರುಣ ಘಟನೆ ತಾಲೂಕಿನ ಕ್ಯಾಸಾಪುರ ಗ್ರಾಮದಲ್ಲಿ ನಡೆದಿದೆ. ಕುಮಾರ್ (35), ವಂದನಾ (4) ತನುಶ್ರೀ (3) ವಿಷ ಸೇವಿಸಿದವರು.
ಕೌಟುಂಬಿಕ ಕಲಹದಿಂದ ಕೆಲ ದಿನಗಳ ಹಿಂದೆ ಪತ್ನಿ ಗಂಡನನ್ನು ಬಿಟ್ಟು ಹೋಗಿದ್ದಳು. ಇಬ್ಬರು ಮಕ್ಕಳು ತಂದೆಯ ಬಳಿ ಇದ್ದವು. ಇದರಿಂದ ಮನನೊಂದ ಇಬ್ಬರ ಮಕ್ಕಳ ತಂದೆ ಕುಮಾರ್ ಜಾಮೂನ್‌ನಲ್ಲಿ ವಿಷ ಬೆರೆಸಿ ತಿನ್ನಿಸಿದ್ದಾರೆ. ಬಳಿಕ ತಾನೂ ವಿಷ ತೆಗೆದುಕೊಂಡಿದ್ದಾರೆ. ಜಾಮೂನ್ ತಿನ್ನುತ್ತಿದ್ದಂತೆ ಮೂವರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರ ಸ್ಥಿತಿ ಚಿಂತಾಜನಕ ಎಂದು ತಿಳಿದು ಬಂದಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಚನ್ನಪಟ್ಟಣ ತಾಲೂಕಿನ ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯಲ್ಲಿ ಮೂವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ