newsfirstkannada.com

ಪ್ರಧಾನಿ ಮೋದಿಗೆ ಬೆದರಿಕೆ ಆರೋಪ; ಮುಂಬೈನಲ್ಲಿ RTI ಕಾರ್ಯಕರ್ತ ಅರೆಸ್ಟ್​

Share :

Published May 29, 2023 at 1:42am

    ಸೋಶಿಯಲ್ ಮೀಡಿಯಾದಲ್ಲಿ ಬೆದರಿಕೆ ಹಾಕಿದ ಆರೋಪ

    ಐಪಿಸಿ ಸೆಕ್ಷನ್​​ 509, 500, 506 (2), 504 ಅಡಿಯಲ್ಲಿ ಕೇಸ್​

    ಗುಲಾಮ್ ಖಾಜಿ ಬಂಧಿತ ಆರ್​ಟಿಐ ಕಾರ್ಯಕರ್ತ

ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬೆದರಿಕೆ ಹಾಕಿದ್ದ ಆರೋಪದ ಮೇರೆಗೆ ಮಾಹಿತಿ ಹಕ್ಕು ಕಾರ್ಯಕರ್ತನನ್ನು ಬಂಧಿಸಲಾಗಿದೆ. ಗುಲಾಮ್ ಖಾಜಿ ಎಂಬ ಮಾಹಿತಿ ಹಕ್ಕು ಕಾರ್ಯಕರ್ತನನ್ನು ಅರೆಸ್ಟ್​ ಮಾಡಿದ್ದೇವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮಾತಾಡಿದ ಮುಂಬೈನ ಸಕಿನಾಕಾ ಪೊಲೀಸ್ ಠಾಣೆ ಅಧಿಕಾರಿ, ಆರೋಪಿ ಗುಲಾಮ್​​​ ಖಾಜಿ ಕೇವಲ ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ನಾಲಿಗೆ ಹರಿಬಿಟ್ಟಿದ್ದ. ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಸೇರಿದಂತೆ ಹಲವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಕೇಳಿ ಬಂದಿದೆ. ಹೀಗಾಗಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದೇವೆ ಎಂದಿದ್ದಾರೆ.

ಗುಲಾಮ್​ ಖಾಜಿ ತನ್ನ ಫೇಸ್ಬುಕ್​ ಖಾತೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಮತ್ತಿತರ ನಾಯಕರಿಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಅವಹೇಳನಕಾರಿ ಹೇಳಿಕೆ ನೀಡಿದ್ದ. ಈತನ ವಿರುದ್ಧ ಐಪಿಸಿ ಸೆಕ್ಷನ್​​ 509, 500, 506 (2), 504 ಅಡಿಯಲ್ಲಿ ಕೇಸ್​ ಮಾಡಿದ್ದೇವೆ ಎಂದರು ಪೊಲೀಸ್​ ಅಧಿಕಾರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿಗೆ ಬೆದರಿಕೆ ಆರೋಪ; ಮುಂಬೈನಲ್ಲಿ RTI ಕಾರ್ಯಕರ್ತ ಅರೆಸ್ಟ್​

https://newsfirstlive.com/wp-content/uploads/2023/05/Modi_1.jpg

Load More