newsfirstkannada.com

ನಡು ರಸ್ತೆಯಲ್ಲೇ ಚಾಕು ಹಿಡಿದು ಪುಂಡಾಟ; ಸಿಕ್ಕಸಿಕ್ಕವರಿಗೆ ಚುಚ್ಚುತ್ತೇನೆ ಎಂದು ಆವಾಜ್​​

Share :

20-11-2023

    ರಸ್ತೆಯಲ್ಲಿ ಚಾಕು ಹಿಡಿದು ಓಡಾಡಿದ ವ್ಯಕ್ತಿ

    ಚಾಕು ತೋರಿಸಿ ಜನರನ್ನು ಹೆದರಿಸ್ತಿರೋ ವ್ಯಕ್ತಿ

    ಕುಡಿದ ಮತ್ತಿನಲ್ಲಿ ಚಾಕು ಹಿಡಿದು ಭಾರೀ ಪುಂಡಾಟ!

ಹುಬ್ಬಳ್ಳಿ: ವ್ಯಕ್ತಿಯೋರ್ವ ಚಾಕು ತೋರಿಸಿ ಉದ್ಧಟತನ ಮೆರೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹೀಗಾಗಿ ಈತನನ್ನು ಕಂಡು ಸ್ಥಳೀಯರು ಮನೆಯಿಂದ ಹೊರ ಬರೋಕು ಹೆದರುತ್ತಿದ್ದಾರೆ.

ಹೌದು, ದೃಶ್ಯ ಕಂಡು ಬಂದಿದ್ದು ಹುಬ್ಬಳ್ಳಿಯ ದೀನಬಂಧು ಅನ್ನೋ ಕಾಲೋನಿಯಲ್ಲಿ. ನಡು ರಸ್ತೆಯಲ್ಲೇ ಚಾಕು ಹಿಡಿದು ಜನರಿಗೆ ಬೆದರಿಕೆ ಹಾಕುತ್ತಾ ವಿನೋದ್​ ಎಂಬ ಕಿಡಿಗೇಡಿ ಓಡಾಡಿದ್ದ. ಅಡ್ಡ ಬಂದವರಿಗೆ ಸಾಯಿಸುತ್ತೇನೆ, ಚುಚ್ಚುತ್ತೇನೆ ಎಂದು ಹೆದರಿಸುತ್ತಿದ್ದ.

ವಿನೋದ್​ ಹೀಗೆ ಮಾಡುತ್ತಿರೋದು ಇದು ಮೊದಲನೇ ಬಾರಿ ಅಲ್ಲ. ಇತ್ತೀಚೆಗೆ ಅದರಲ್ಲೂ ಕಳೆದ ಒಂದು ವಾರದಿಂದ ಅಂತೂ ಕುಡಿದ ಮತ್ತಿನಲ್ಲಿ ಕೈಯಲ್ಲಿ ಚಾಕು ಹಿಡಿದು ಕಾಲೋನಿಯಲ್ಲಿ ಸಿಕ್ಕಸಿಕ್ಕವರಿಗೆ ಹೆದರಿಸಿ ಓಡಾಡುತ್ತಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ಒಬ್ಬರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಡು ರಸ್ತೆಯಲ್ಲೇ ಚಾಕು ಹಿಡಿದು ಪುಂಡಾಟ; ಸಿಕ್ಕಸಿಕ್ಕವರಿಗೆ ಚುಚ್ಚುತ್ತೇನೆ ಎಂದು ಆವಾಜ್​​

https://newsfirstlive.com/wp-content/uploads/2023/11/Chaku.jpg

Load More