newsfirstkannada.com

ಬರ್ತಡೇ ಪಾರ್ಟಿಯಲ್ಲಿ ಕಿರಿಕ್.. ಕೇಕ್ ತಿನ್ನಿಸುವಾಗ ಬರ್ಬರವಾಗಿ ಚೂರಿ ಇರಿದ ಸ್ನೇಹಿತರು

Share :

06-06-2023

  ‘ಪಾರ್ಟಿ’ಯಲ್ಲಿ ಕೊಲೆಗೆ ಕಾರಣ ಆಗಿದ್ದು ಏನು ಗೊತ್ತಾ?

  ಕೊಲೆ ಮಾಡಿ ಆರೋಪಿಗಳು ಹೋಗಿದ್ದೆಲ್ಲಿಗೆ..?

  ಕೊಲೆ ಮಾಡಿ ಇಬ್ಬರು ಶರಣಾದರು, ಆದರೆ..

ಹಣದ ಮುಂದೆ ಸ್ನೇಹ, ಪ್ರೀತಿ, ಸಂಬಂಧ, ಸಂಭ್ರಮದ ಕ್ಷಣಗಳು ಕ್ಷಣಿಕ ಮಾತ್ರ. ಇವುಗಳ ಮಧ್ಯೆ ಹಣವೆಂಬ ಮಾಯಾವಿ ಯಾವಾಗ ಬೇಕಾದರೂ ತಂದಿಡಬಹುದು. ಮಹಾರಾಷ್ಟ್ರದ ಗೋವಂದಿ ನಗರದಲ್ಲಿ ನಡೆದಿದ್ದೂ ಅದೇ. ‘ಒಂದೇ ತಟ್ಟೇಲಿ ಊಟ ಮಾಡಿ ಸ್ಕೆಚ್ಚು ಹಾಕ್ತಾರೋ..’ ಎಂಬ ಸಾಹಿತ್ಯದ ಸಾಲಿನಂತೆ ಇದೆ ಈ ಕ್ರೈಂ ಸ್ಟೋರಿ ಇದೆ!!

10000 ರೂಗಾಗಿ ನಡೀತು ಬರ್ಬರ ಕೊಲೆ

ತನ್ನ ನಾಲ್ವರು ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಲು ಹೋಗಿ 18 ವರ್ಷದ ಯುವಕ ಬರ್ಬರವಾಗಿ ಕೊಲೆಯಾಗಿದ್ದಾನೆ. ಶಿವಾಜಿನಗರ ಪೊಲೀಸ್ ಠಾಣೆಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಕೊಲೆಯಾದ ಯುವಕ ಮೇ 31 ರಂದು ಹುಟ್ಟುಹಬ್ಬ ನಿಮಿತ್ತ ಹೋಟೆಲ್ ಒಂದರಲ್ಲಿ ಪಾರ್ಟಿ ಆಯೋಜನೆ ಮಾಡಿದ್ದ. ಪಾರ್ಟಿ ಬಳಿಕ ಹೋಟೆಲ್​ನ ಬಿಲ್ ಒಟ್ಟು 10 ಸಾವಿರ ರೂಪಾಯಿ ಬಂದಿತ್ತು.

ಬಿಲ್ ಕಟ್ಟುವ ವಿಚಾರಕ್ಕೆ ಸ್ನೇಹಿತರ ಮಧ್ಯೆ ಗಲಾಟೆ ಆಗಿದೆ. ಒಂದಷ್ಟು ಕಚ್ಚಾಟಗಳ ಬಳಿಕ 10000 ಹಣವನ್ನು ಅಲ್ಲಿ ಪೇ ಮಾಡಿ ಬರುತ್ತಾರೆ. ಕೊಲೆ ಆರೋಪಿಗಳು ಮತ್ತೊಂದು ಬರ್ತಡೇ ಪಾರ್ಟಿಯನ್ನು ಆಯೋಜನೆ ಮಾಡುತ್ತಾರೆ. ಈ ವೇಳೆ ಕೇಕ್ ತನ್ನಿಸುವ ನಾಟಕವಾಡಿ, ಮಾರಕಾಸ್ತ್ರದಿಂದ ಚುಚ್ಚಿ ಕೊಲೆ ಮಾಡಿ ಎಸ್ಕೇಪ್ ಅಗಿದ್ದಾರೆ.

ಮುಂದೆ ಏನು..?

ಭೀಕರವಾಗಿ ಹಲ್ಲೆಗೆ ಒಳಗಾಗಿದ್ದ 18 ವರ್ಷದ ಯುವಕ ಅಲ್ಲೇ ಪ್ರಾಣಬಿಟ್ಟಿದ್ದ. ಗಲಾಟೆ ದೊಡ್ಡದಾಗುತ್ತಿದ್ದಂತೆಯೇ 17 ವರ್ಷದ ಇಬ್ಬರು ಅಪ್ರಾಪ್ತರು ಪೊಲೀಸರಿಗೆ ಶರಣಾಗುತ್ತಾರೆ. ಆದರೆ 19, 20 ವರ್ಷದ ಯುವಕರಿಬ್ಬರು ಬೇರೆ ರಾಜ್ಯಗಳಿಗೆ ಪ್ರಯಾಣಿಸುತ್ತಾರೆ. ಕೊನೆಗೂ ಮಹಾರಾಷ್ಟ್ರ ಪೊಲೀಸರು, ಓರ್ವನನ್ನು ಉತ್ತರ ಪ್ರದೇಶದಲ್ಲಿ ಮತ್ತೋರ್ವನನ್ನು ಗುಜರಾತ್​ನಲ್ಲಿ ಬಂಧಿಸಿ ಕರೆದುಕೊಂಡು ಬಂದಿದ್ದಾರೆ. ಇಬ್ಬರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರ್ತಡೇ ಪಾರ್ಟಿಯಲ್ಲಿ ಕಿರಿಕ್.. ಕೇಕ್ ತಿನ್ನಿಸುವಾಗ ಬರ್ಬರವಾಗಿ ಚೂರಿ ಇರಿದ ಸ್ನೇಹಿತರು

https://newsfirstlive.com/wp-content/uploads/2023/06/CAKE.jpg

Load More