ಮಧ್ಯರಾತ್ರಿ 12 ಘಂಟೆಗೆ ಕೊಲೆ
ಈ ಕೊಲೆ ಹಿಂದಿನ ಅಸಲಿ ಕಾರಣ ಏನ್ ಗೊತ್ತಾ..!
ಆತನ ಮೇಲೆ ದ್ವೇಷ.. ಹಣದ ಮೇಲೆ ಆಸೆ..!
ಸಿಲಿಕಾನ್ ಸಿಟಿ ವಿಚಿತ್ರ ಕ್ರೈಮ್ಗಳಿಗೆ ಸಾಕ್ಷಿಯಾಗಿದೆ. ಆದ್ರೆ ಈ ಸ್ಟೋರಿ ನಿಜಕ್ಕೂ ಭಯಾನಕ. ಬರೋಬ್ಬರಿ ಆರು ತಿಂಗಳ ಹಳೇಯ ದ್ವೇಷದ ಕತೆಯಿದು. ಹಣಕ್ಕಾಗಿ ನಡೆದಿದ್ದ ಕಿರಿಕ್. ಆದ್ರೆ ಮತ್ತೆ ಅವರ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಆತನಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡ ಪಾಪಿಗಳು ಆತನನ್ನ ಕೊಚ್ಚಿ ಕೊಚ್ಚಿ ಅಟ್ಟಾಡಿಸಿ ಕೊಂದೇ ಬಿಟ್ರು.
ಮಧ್ಯರಾತ್ರಿ 12 ಘಂಟೆಗೆ ಕೊಲೆ
ಅಂದು ಮಧ್ಯರಾತ್ರಿ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಅನ್ನೋರ ಹುಟ್ಟುಹಬ್ಬವಿತ್ತು. ಹತ್ತಾರು ಜನ ಬರ್ತ್ಡೇಯಲ್ಲಿ ಭಾಗಿಯಾಗಿದ್ರು. ಅವತ್ತೆ ಲಗ್ಗೆರೆಯ ಚೌಡೇಶ್ವರಿ ನಗರದಲ್ಲಿರುವ ಹಳ್ಳಿ ರುಚಿ ಹೋಟೆಲ್ ಬಳಿ ಭೀಕರವಾಗಿ ಕೊಲೆಯಾಗಿತ್ತು. ರವಿ ಎಂಬಾತನನ್ನ ಸುತ್ತುವರೆದ ಏಳು ಜನ ಹಂತಕರು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಚುಚ್ಚಿ, ತಲೆ ಮೇಲೆ ಕಲ್ಲು ಹಾಕಿ ಕೊಂದಿದ್ರು. ಆ ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು.
ಅಷ್ಟಕ್ಕೂ ಈ ಕೊಲೆ ಹಿಂದಿನ ಅಸಲಿ ಕಾರಣ ಏನ್ ಗೊತ್ತಾ..!
ಅವತ್ತು ಮಾರ್ಚ್ 22. ಯುಗಾದಿ ಹಬ್ಬದ ದಿನ. ಸಹಜವಾಗಿ ಏರಿಯಾದ ಎಲ್ಲರೂ ಒಂದು ಕಡೆ ಸೇರಿ ಜೂಜಾಟವಾಡ್ತಿದ್ರೂ. ರವಿ ಎಂಬಾತ ಸಿಕ್ಕಾಪಟ್ಟೆ ಹಣ ಗೆದ್ದು ಮನೆಗೆ ಹೋದ. ಆದ್ರೆ, ಅವತ್ತು ಆತನ ಮೇಲಿದ್ದ ದ್ವೇಷದ ಕಿಚ್ಚು ಹಾಗೇ ಉಳಿದಿತ್ತು.
ಆತನ ಮೇಲೆ ದ್ವೇಷ.. ಹಣದ ಮೇಲೆ ಆಸೆ..!
ಹೌದು.. ಅದೇ ದ್ವೇಷದ ಕಿಚ್ಚಿನಲ್ಲೇ ಧಗಧಗ ಉರಿಯುತ್ತಿದ್ದ ಆ ಕಿರಾತಕರಿಗೆ ಮತ್ತೊಂದು ಚಾನ್ಸ್ ಸಿಕ್ತು. ಹುಟ್ಟುಹಬ್ಬದ ದಿನದಂದು ಕಾಲ್ ಕೆರೆದು ಜಗಳಕ್ಕೆ ಹೋದ ಗ್ಯಾಂಗ್ ಹಾಗೂ ರವಿ ಮಧ್ಯೆ ಲೈಟಾಗಿ ಕಿರಿಕ್ ಆಯ್ತು. ಆಮೇಲೆ ರವಿ ಮನೆಗೆ ಹೋದ. ಹಂತಕರ ಗ್ಯಾಂಗ್ ಮತ್ತೆ ಕಾಲ್ ಮಾಡಿ ಸ್ಥಳಕ್ಕೆ ಕರೆಸಿಕೊಂಡ್ರು. ಬಳಿಕ ಲಗ್ಗೆರೆಯ ಹಳ್ಳಿರುಚಿಯ ಹೋಟೆಲ್ ಮುಂದೆ ಏಳು ಜನ ಆತನನ್ನ ಅಟ್ಟಾಡಿಸಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದೇ ಬಿಟ್ರು.
ಇನ್ನು, ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರು ಇಂದು ಕಿರಾತಕರನ್ನ ಹೆಡೆಮುರಿ ಕಟ್ಟಿದ್ದಾರೆ. ಆ ಕಿರಾತಕರ ಫೋಟೋಗಳನ್ನ ತೋರಿಸ್ತೀವಿ ನೋಡಿ ಮಂಜುನಾಥ್, ನಾಗರಾಜ್ ಅಲಿಯಾಸ್ ಸ್ಪಾಟ್ ನಾಗ, ಬಿ.ಸಿ ಗೋಪಾಲ್, ಕಿರಣ್ ಕುಮಾರ್, ಮಣಿಕಂಠಣ್ ಮತ್ತು ಬಾಬು. ಇವರೆಲ್ಲರೂ ಇದೀಗ ಕಂಬಿ ಹಿಂದೆ ಸೇರಿದ್ದಾರೆ. ಒಟ್ನಲ್ಲಿ ಪದೇ ಪದೇ ಹೆಚ್ಚಾಗ್ತಿರೋ ಈ ಕ್ರೈಮ್ ಆಕ್ಟಿವಿಟೀಸ್ ಬೆಂಗಳೂರಿನ ಸ್ವಾಸ್ಥ್ಯ ಹಾಳು ಮಾಡ್ತಿದೆ. ಈ ಬಗ್ಗೆ ಕಠಿಣ ಕ್ರಮ ಆಗ್ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ