newsfirstkannada.com

ಮಗಳ ಹಿಂದೆ ಬೀಳಬೇಡ ಅಂದಿದ್ದೇ ತಪ್ಪಾಯ್ತ..? ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಂದ ಹಂತಕ

Share :

04-09-2023

    ಓದೋದು ಬಿಟ್ಟು ಅಪ್ತಾಪ ಹುಡುಗಿ ಹಿಂದೆ ಬಿದ್ದಿದ್ದ ಕಾಮುಕ

    ಮಗಳ ಹಿಂದೆ ಬೇಳಬೇಡ ಎಂದು ಸಲಹೆ ನೀಡಿದ್ದ ತಂದೆ..!

    ಇಷ್ಟಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಕೊಂದು ಹಾಕಿದ ಹಂತಕ

ಬೆಂಗಳೂರು: ಹೆಸರು ಝಹೀದ್, ಈತ ಕೇವಲ ಲವರ್​ ಬಾಯ್​ ಅಲ್ಲ. ಗಾಂಜಾ ಪೆಡ್ಲರ್ ಅನ್ನೋ ಬಿರುದು​ ಕೂಡಾ ಪಡ್ಕೊಂಡಿದ್ದಾನೆ ಅನ್ನೋ ಆರೋಪವಿದೆ. ವಯಸ್ಸು ಜಸ್ಟ್​​ 20. ಇಪ್ಪತ್ತನೇ ವಯಸ್ಸಿಗೇ ಇಂಥಾ ಬಿರುದು ಹೊಂದಿರೋ ಈತ ಮೊನ್ನೆ ರಾತ್ರಿ ಮಾಡಿರೋ ಕೆಲಸಕ್ಕೆ ಹೆಸರಿನ ಹಿಂದೆ ಮತ್ತೊಂದು ಟೈಟಲ್​ ಸೇರ್ಕೊಂಡಿದೆ. ಅದುವೇ ಕೊಲೆಗಾರ ಅನ್ನೋದು.

ಇವರು ಅನ್ವರ್ ಹುಸೇನ್. ವಯಸ್ಸು 40. ಅಶೋಕನಗರ​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲೇ ವಾಸಿಸೋ ಇವರನ್ನೇ ಝಹೀದ್ ಕೊಲೆ ಮಾಡಿರೋದು. ಅಷ್ಟಕ್ಕೂ ಝಹೀದ್​ ಕೊಲೆ ಮಾಡೋಕೆ ಕಾರಣವೇನು ಗೊತ್ತಾ..? 15 ವರ್ಷದ ಅಪ್ರಾಪ್ತೆ.

ಕಳೆದ ಮೂರು ತಿಂಗಳಿನಿಂದ ಅನ್ವರ್​ ಮಗಳ ಹಿಂದೆ ಬಿದ್ದಿದ್ದ ಝಹೀದ್​​ ಪ್ರೀತಿಸುವಂತೆ ಕಾಟ ಕೊಡ್ತಿದ್ದ. ಹೀಗೆ ಮಾಡಬೇಡಪ್ಪಾ ಅಂತ ಬುದ್ದಿ ಹೇಳೋಕೆ ಹೋಗಿದ್ದೇ ತಪ್ಪು ಅನ್ನುವಂತೆ ಮೊನ್ನೆ ಅಪ್ರಾಪ್ತೆಯ ತಂದೆಯ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿ ಕೊಲೆಗೈದಿದ್ದಾನೆ.

ಇನ್ನು ಕೊಲೆಗೈದು ಎಸ್ಕೇಪ್​ ಆಗಿದ್ದ ಝಹೀದ್​ನನ್ನ ಅಶೋಕನಗರ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ವಿಚಾರಣೆ ಮುಂದುವರೆಸಿದ್ದಾರೆ. ಅದೇನೇ ಇರ್ಲಿ ವಿದ್ಯೆಗೆ ನೈವೇದ್ಯ ಇಟ್ಟು ಮಾದಕ ವಸ್ತುಗಳ ಜೊತೆ ನಂಟು ಬೆಸೆದಿದ್ದವ ಒಂದು ಜೀವವನ್ನೇ ತೆಗೆದಿದ್ದಾನೆ. ಇತ್ತ ಮಗಳ ಜೀವನದ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ತಂದೆಯ ಜೀವ ಕನಸನ್ನ ನನಸು ಮಾಡುವ ಮುನ್ನವೇ ಹೋಗಿದ್ದು ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗಳ ಹಿಂದೆ ಬೀಳಬೇಡ ಅಂದಿದ್ದೇ ತಪ್ಪಾಯ್ತ..? ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಂದ ಹಂತಕ

https://newsfirstlive.com/wp-content/uploads/2023/09/Crime_123.jpg

Load More