newsfirstkannada.com

ಬ್ಲೇಡ್​​ನಿಂದ ಕತ್ತು ಕೊಯ್ದು ಕೊಂದು ಹಾಕಿದ ಹಂತಕ.. ಕೊಲೆಗೆ ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Share :

12-11-2023

    ಹಣಕ್ಕಾಗಿ ನಡೆದ ಜಗಳ ಭೀಕರ ಕೊಲೆಯಲ್ಲಿ ಅಂತ್ಯ..!

    ನನ್ನ ಜೇಬಿಂದ ಯಾಕೆ ಹಣ ತೆಗೆದೆ? ಎಂದಿದ್ದ ಸುಧಾರಣ್​

    ಇಷ್ಟಕ್ಕೆ ಸುಧಾರಣ್​​ನನ್ನು ಕೊಂದು ಹಾಕಿದ ಹಂತಕ ವಿಜಯ್​

ಬೆಂಗಳೂರು: ಹಣಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬ್ಲೇಡ್​​ನಿಂದ ಕತ್ತು ಕೊಯ್ದು ಕೊಲೆ ಮಾಡಿ ನಂತ ಚೀಲದಲ್ಲಿ ತುಂಬಿ ಸುಟ್ಟು ಹಾಕಿರೋ ಘಟನೆ ಕಲಾಸಿಪಾಳ್ಯ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇನ್ನು, ಶನಿವಾರ ರಾತ್ರಿ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ. ಸುಧಾರಣ್​​ ಎಂಬಾತ ಕೊಲೆಯಾದವ. ವಿಜಯ್​​ ಕುಮಾರ್​​ ಎಂಬ ಹಂತಕ ಕೊಂದವನು.

ಕೊಲೆಗೆ ಕಾರಣವೇನು..?

ವಿಜಯ್, ಸುಧಾರಣ್​​​ ಇಬ್ಬರೂ ತರಕಾರಿ ಮಂಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ತಮಿಳುನಾಡು ಮೂಲದ ಈ ಇಬ್ಬರ ಮಧ್ಯೆ ಹಣಕ್ಕಾಗಿ ಜಗಳ ಶುರುವಾಗಿದೆ. ವಿಜಯ್​ಗೆ ನನ್ನ ಜೇಬಿನಿಂದ ಹಣ ಯಾಕೆ ತೆಗೆದುಕೊಂಡೆ? ಎಂದು ಗಲಾಟೆ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದ ವಿಜಯ್​, ಸುಧಾರಣ್ ಎಂಬಾತನನ್ನು​ ಕೊಲೆ ಮಾಡಿದ್ದಾನೆ.

ಈ ಸಂಬಂಧ ಕಲಾಸಿಪಾಳ್ಯ ಪೊಲೀಸರು ಕೇಸ್​ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ನಿಜವಾಗಲೂ ಕೊಲೆಗೆ ಕಾರಣವೇನು? ಎಂಬುದು ತನಿಖೆಯಲ್ಲಿ ಬಯಲಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬ್ಲೇಡ್​​ನಿಂದ ಕತ್ತು ಕೊಯ್ದು ಕೊಂದು ಹಾಕಿದ ಹಂತಕ.. ಕೊಲೆಗೆ ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2023/11/Murder-1.jpg

Load More