newsfirstkannada.com

ನಡುರಸ್ತೆಯಲ್ಲೇ ಬರ್ಬರ ಹತ್ಯೆ.. ಯುವಕನನ್ನು ಕೊಚ್ಚಿ ಕೊಚ್ಚಿ ಕೊಂದ ಹಂತಕರು..!

Share :

09-11-2023

  ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಅಟ್ಟಹಾಸ

  ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆ

  ಹೆಲ್ಮೆಟ್​​ನಲ್ಲೇ ಕೊಚ್ಚಿ ಕೊಚ್ಚಿ ಕೊಂದ ಕೊಲೆಗಡುಕರು!

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹಂತಕರ ಅಟ್ಟಹಾಸ ಹೆಚ್ಚಾಗುತ್ತಿದೆ. ದಿನ ಬಿಟ್ಟು ದಿನ ಒಂದರಂತೆ ಕೊಲೆ, ಸುಲಿಗೆ ಪ್ರಕರಣಗಳು ಕೇಳಿ ಬರುತ್ತಿವೆ. ಬೆಂಗಳೂರಿನಲ್ಲಿ ಕೇಳಿ ಬರುತ್ತಿರುವ ಪ್ರಕರಣಗಳಿಂದ ಜನರ ನೆಮ್ಮದಿ ಇಲ್ಲದಂತಾಗಿದೆ. ಅಂಥದ್ದೇ ಒಂದು ಘಟನೆ ಬೆಂಗಳೂರಿನ ಲಿಂಗರಾಜಪುರ ಬಳಿ ನಡೆದಿದೆ.

ಹಾಡಹಗಲೇ ನಡುರಸ್ತೆಯಲ್ಲೇ ಇಬ್ಬರು ಯುವಕರು ಸೇರಿ ಒಬ್ಬ ಯುವಕನನ್ನು ಹೆಲ್ಮೆಟ್​​ನಿಂದ ಕೊಚ್ಚಿ ಕೊಚ್ಚಿ ಹೊಡೆದು ಕೊಲೆ ಮಾಡಿದ್ದಾರೆ. ಅಲ್ಲೇ ಇದ್ದ ಜನ ಬೇಡ ಬೇಡ ಅಂತ ಮನವಿ ಮಾಡಿದ್ರೂ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಹಲ್ಲೆಗೆ ಒಳಗಾದ ಪ್ರವೀಣ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಊರ ಜಾತ್ರೆಗೆ ಸಿದ್ಧತೆ ನಡೆಸುವ ವೇಳೆ ಪ್ರವೀಣ್, ಸುಂದರ್ ಮಧ್ಯೆ ಗಲಾಟೆ ಗಲಾಟೆಯಾಗಿತ್ತು. ಇದರಿಂದ ಕೋಪಗೊಂಡ ಸುಂದರ್ ಕೂಡ ಹೆಲ್ಮೆಟ್ನಿಂದ ಪ್ರವೀಣ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ತೀವ್ರ ಗಾಯಗೊಂಡಿದ್ದ ಪ್ರವೀಣ್​ ಸಾವನ್ನಪ್ಪಿದ್ದಾನೆ. ಈ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಡುರಸ್ತೆಯಲ್ಲೇ ಬರ್ಬರ ಹತ್ಯೆ.. ಯುವಕನನ್ನು ಕೊಚ್ಚಿ ಕೊಚ್ಚಿ ಕೊಂದ ಹಂತಕರು..!

https://newsfirstlive.com/wp-content/uploads/2023/11/Murder_234.jpg

Load More