newsfirstkannada.com

ಅಯೋಧ್ಯೆ ರಾಮಮಂದಿರಕ್ಕೆ ಬರೋಬ್ಬರಿ 400 ಕೆಜಿ ತೂಕದ ಬೀಗ; ಏನಿದರ ವಿಶೇಷ? ಇದನ್ನು ತಯಾರಿಸಿದ ಕುಶಲಕರ್ಮಿ ಯಾರು?

Share :

06-08-2023

    ಅಲಿಘರ್ ಮೂಲದ ಕುಶಲಕರ್ಮಿ ತಯಾರಿಸಿದ ಬೀಗ

    400 ಕೆಜಿ ಬೀಗಕ್ಕೆ ತಿಂಗಳು ಗಟ್ಟಲೇ ರಾಮ ಭಕ್ತನ ಶ್ರಮ

    2 ಲಕ್ಷ ರೂಪಾಯಿ ಖರ್ಚು ಮಾಡಿ ತಯಾರಿಸಿದ ಬೀಗ

ಕುಶಲಕರ್ಮಿಯೊಬ್ಬರು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ  400 ಕೆ.ಜಿ ತೂಕದ ಬೀಗವನ್ನು ತಯಾರಿಸಿದ್ದಾರೆ. ಅಲಿಘರ್​ ಮೂಲಕ ಸತ್ಯ ಪ್ರಕಾಶ್​ ಶರ್ಮಾ ಈ ಬೀಗವನ್ನು ತಯಾರಿಸಿದ್ದಾರೆ. ಕುಶಲಕರ್ಮಿ ಸತ್ಯ ಪ್ರಕಾಶ್​ ಶರ್ಮಾ ರಾಮನ ಭಕ್ತನಾಗಿದ್ದು, ಅವರು ತಯಾರಿಸಿರುವ ಬೀಗ ಬರೋಬ್ಬರಿ 10 ಅಡಿ ಎತ್ತರ, 4.5 ಅಡಿ ಅಗಲ ಮತ್ತು 9.5 ಇಂಚು ದಪ್ಪವನ್ನು ಹೊಂದಿದೆ. ಇದಕ್ಕಾಗಿ 4 ಅಡಿ ಉದ್ದದ ಕೀಯನ್ನು ರಚಿಸಿದ್ದಾರೆ.

ಸತ್ಯ ಪ್ರಕಾಶ್​​ ಶರ್ಮಾ ಕುಟುಂಬವು ಅಲಿಘರದಲ್ಲಿ ನೆಲೆಸಿದ್ದು ಅನೇಕ ವರ್ಷಗಳಿಂದ ಕೈಯಾರೆ ಬೀಗಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಅಯೋಧ್ಯೆ ರಾಮಮಂದಿರಕ್ಕಾಗಿ ತಯಾರಿಸಿರುವ 400 ಕೆ.ಜಿ ತೂಕದ ಬೀಗದ ಮೇಲೆ ತಿಂಗಳಾನುಗಟ್ಟಲೆ ಅವರು ಕೆಲಸ ಮಾಡಿದ್ದಾರೆ.

ಅಂದಹಾಗೆಯೇ ಸಮಾರು 2 ಲಕ್ಷ ರೂಪಾಯಿ ಈ ಬೀಗಕ್ಕಾಗಿ ಖರ್ಚು ಮಾಡಿದ್ದಾರೆ. ಸದ್ಯ ಈ ಬೀಗದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಮುಂದಿನ ವರ್ಷ ಜನವರಿ ತಿಂಗಳಿನಲ್ಲಿ ಭಕ್ತರಿಗಾಗಿ ರಾಮ ಮಂದಿರದ ಬಾಗಿಲು ತೆರೆಯಲು ನಿರ್ಧರಿಸಲಾಗಿದೆ. ಹೀಗಾಗಿ ಮಂದಿರಕ್ಕೆ ಸಾಕಷ್ಟು ಉಡುಗೊರೆಗಳು ಬರುತ್ತಿವೆ. ಮತ್ತೊಂದೆಡೆ ರಾಮಮಂದಿರದ ಮಹಾಮಸ್ತಕಾಭಿಷೇಕಕ್ಕೆ  ಸಿದ್ಧತೆ ನಡೆಯುತ್ತಿದ್ದು, ಜನವರಿ 21, 22, 23 ರಂದು ಶಂಕು ಸ್ಥಾಪನೆ ಸಮಾರಂಭವನ್ನು ಆಯೋಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆ ರಾಮಮಂದಿರಕ್ಕೆ ಬರೋಬ್ಬರಿ 400 ಕೆಜಿ ತೂಕದ ಬೀಗ; ಏನಿದರ ವಿಶೇಷ? ಇದನ್ನು ತಯಾರಿಸಿದ ಕುಶಲಕರ್ಮಿ ಯಾರು?

https://newsfirstlive.com/wp-content/uploads/2023/08/temple.jpg

Load More