newsfirstkannada.com

ಒಂದು ವರ್ಷದ ಪ್ರೀತಿ.. ತೃತೀಯ ಲಿಂಗಿಗೆ ಮನಸೋತು ತಾಳಿ ಕಟ್ಟಿದ ಆಂಧ್ರದ ಯವಕ

Share :

07-11-2023

    ಪ್ರೀತಿಯೆ ನನ್ನುಸಿರು ಎಂದ ಆಂಧ್ರದ ಯುವಕ

    ತೃತೀಯ ಲಿಂಗಿಗೆ ಮನಸೋತು ಮದುವೆಯಾದ

    ರಕ್ಷಣೆ ಕೋರಿ ಪೊಲೀಸ್​​ ಠಾಣೆ ಮೆಟ್ಟಿಲೇರಿದ ಜೋಡಿ

ಆಂಧ್ರಪ್ರದೇಶ: ಪ್ರೀತಿಗೆ ಮನಸೋಲದವರು ಯಾರು ಇಲ್ಲ. ಅದರಂತೆಯೇ ಇಲ್ಲೊಬ್ಬ ಯುವಕ ತೃತಿಯಲಿಂಗಿಯ ಪ್ರೀತಿಗೆ ಬಿದ್ದು ಆಕೆಯನ್ನು ವರಿಸಿದ ಘಟನೆ ಆಂಧ್ರಪ್ರದೇಶದ ಖಮ್ಮಂ ನಡೆದಿದೆ. ಆದರೆ ಈ ಇಬ್ಬರಿಗೆ ಯುವಕನ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ.

ಗಣೇಶ್​ ಎಂಬ ಯುವಕ ಆಂಧ್ರಪ್ರದೇಶದ ನಂದಿಪಟ್ಟಣದ ತೃತೀಯ ಲಿಂಗಿ ದೀಪು ಎಂಬಾಕೆಯ ಪ್ರೀತಿಗೆ ಮನಸೋತು ಆಕೆಯನ್ನು ವಿವಾಹವಾಗಿದ್ದಾನೆ. ಅಂದಹಾಗೆಯೇ ಗಣೇಶ್​ ಒಂದು ವರ್ಷ ಹಿಂದೆ ದೀಪುವನ್ನು ಭೇಟಿ ಮಾಡಿದ್ದನು. ಭೇಟಿ ಪ್ರೀತಿಗೆ ತಿರುಗಿ ಸದ್ಯ ಈ ಜೋಡಿ ವಿವಾಹವಾಗಿದ್ದಾರೆ.

ಗಣೇಶ್​​ ಮತ್ತು ದೀಪು ವಿವಾಹದ ಸಂಗತಿಯನ್ನು ಪತ್ರಕರ್ತರೊಬ್ಬರು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಚಾರ ಬೆಳಕಿಗೆ ಬಂದಂತೆ ಇಬ್ಬರ ಫೋಟೋ, ವಿಡಿಯೋ ವೈರಲ್​ ಆಗಿದೆ. ಬಳಿಕ ಗಣೇಶ್​ ಮತ್ತು ದೀಪು ಪೊಲೀಸರ ಜೊತೆ ರಕ್ಷಣೆ ಕೇಳಿದ್ದಾರೆ. ಕುಟುಂಬದವರು ಇಬ್ಬರ ವಿವಾಹವನ್ನು ವಿರೋಧಿಸಿದ್ದಾರೆ ಎಂದು ಹೇಳಿದ್ದಾರೆ.

ಉಮಾ ಸುದೀರ್​ ಎಂಬ ಪತ್ರಕರ್ತೆ, ‘‘ಪ್ರೀತಿಗೆ ಯಾವುದೇ ಲಿಂಗ ಅಥವಾ ಧರ್ಮವಿಲ್ಲ: ನವವಿವಾಹಿತ ದಂಪತಿಗಳು #ಖಮ್ಮಂ # ತೆಲಂಗಾಣ ಮತ್ತು ದೀಪು, #ನಂದಿಗಾಮ #ಆಂಧ್ರಪ್ರದೇಶದ ಟ್ರಾನ್ಸ್​​​ಜೆಂಡರ್ , #ಹೈದರಾಬಾದ್​ನಲ್ಲಿ ಭೇಟಿಯಾದರು ಮತ್ತು ಒಂದು ವರ್ಷದ ಹಿಂದೆ ಪ್ರೀತಿಸುತ್ತಿದ್ದರು; ಅವರು ಒಂದು ವಾರದ ಹಿಂದೆ ವಿವಾಹವಾದರು ಮತ್ತು ಕುಟುಂಬಗಳು ವಿರೋಧಿಸಿದ್ದರಿಂದ ರಕ್ಷಣೆಗಾಗಿ ಪೊಲೀಸ್​ ಠಾಣೆಗೆ ಬಂದರು’’ ಎಮದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ವರ್ಷದ ಪ್ರೀತಿ.. ತೃತೀಯ ಲಿಂಗಿಗೆ ಮನಸೋತು ತಾಳಿ ಕಟ್ಟಿದ ಆಂಧ್ರದ ಯವಕ

https://newsfirstlive.com/wp-content/uploads/2023/11/Andra.jpg

Load More