ಚಿಕ್ಕಮಗಳೂರು ಜಿಲ್ಲೆ ಕಳಸದಿಂದ ಹೋಗಿದ್ದ ಯಾತ್ರಿಕ
ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೆಷನ್ನಲ್ಲಿ ಘಟನೆ
ಸುದ್ದಿ ತಿಳಿದು ಆಘಾತಕ್ಕೆ ಒಳಗಾಗಿ ಕಣ್ಣೀರಿಡ್ತಿರುವ ಕುಟುಂಬ
ಚಿಕ್ಕಮಗಳೂರು: ಒಡಿಶಾ ತ್ರಿವಳಿ ರೈಲು ದುರಂತದಲ್ಲಿ ಬದುಕುಳಿದಿದ್ದ ರಾಜ್ಯದ ಯಾತ್ರಿಕ ಹೃದಯಾಘಾತದಿಂದ ಮೃತಪಟ್ಟಿರೋ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೆಷನ್ನಲ್ಲಿ ನಡೆದಿದೆ. ಧರ್ಮಪಾಲಯ್ಯ (61) ಮೃತ ದುರ್ದೈವಿ.
ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಸುಮೇದ್ ಶಿಖರ್ಜಿ ಯಾತ್ರೆಗೆ 110 ಜನರು ತೆರಳಿದ್ದರು. ಜೂನ್ 2 ರಂದು ಒಡಿಶಾದ ಬಾಲಸೋರ್ನಲ್ಲಿ ತ್ರಿವಳಿ ರೈಲುಗಳ ಸರಣಿ ಅಪಘಾತ ಸಂಭವಿಸಿತ್ತು. ಈ ದುರಂತ ಪ್ರಕರಣದಲ್ಲಿ 275ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು. ಅದೃಷ್ಟವಶಾತ್ ಕಳಸದಿಂದ ಹೋಗಿದ್ದ 110 ಪ್ರಯಾಣಿಕರು ಸೇಫ್ ಆಗಿದ್ದರು. ಅವರಲ್ಲಿ ಧರ್ಮಪಾಲಯ್ಯ ಕೂಡ ಒಬ್ಬರಾಗಿದ್ದರು.
ದುರಾದೃಷ್ಟ ಅಂದರೆ ಸುಮೇದ್ ಶಿಖರ್ಜಿಯಿಂದ ಹಿಂದಿರುಗುವಾಗ ಧರ್ಮಪಾಲಯ್ಯಗೆ ಹೃದಯಾಘಾತವಾಗಿದೆ. ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಬಳಿ ಶವ ಪರೀಕ್ಷೆಗಾಗಿ ಸಂಬಂಧಿಕರು ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ