newsfirstkannada.com

ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು100 ಕೋಟಿ ರೂಪಾಯಿಯ ಚೆಕ್; ಆಮೇಲೇನಾಯ್ತು..?

Share :

24-08-2023

    ವರಾಹ ಲಕ್ಷ್ಮೀನರಸಿಂಹ ದೇವಸ್ಥಾನದ ಹುಂಡಿಯಲ್ಲಿ ಚೆಕ್​ ಪತ್ತೆ

    100 ಕೋಟಿ ರೂಪಾಯಿ ಮೊತ್ತದ ಚೆಕ್ ನೋಡಿ ಸಿಬ್ಬಂದಿ ಶಾಕ್​

    ದೇವಸ್ಥಾನಕ್ಕೆ ಯಾಮಾರಿಸಿದ ವ್ಯಕ್ತಿಯ ಪತ್ತೆಗೆ ಮುಂದಾದ ಅಧಿಕಾರಿ

ಅಮರಾವತಿ: ವಿಶಾಖಪಟ್ಟಣದ ಸಿಂಹಾಚಲಂನಲ್ಲಿರುವ ಪ್ರಸಿದ್ಧ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನದ ಹುಂಡಿಗೆ ಭಕ್ತರೊಬ್ಬರು ಬರೋಬ್ಬರಿ 100 ಕೋಟಿ ರೂಪಾಯಿ ಮೊತ್ತದ ಚೆಕ್ ಬರೆದು ಹಾಕಿದ್ದಾರೆ. ದೇವಸ್ಥಾನದ ಹುಂಡಿ ಎಣಿಕೆ ವೇಳೆ ಈ ಚೆಕ್​ ಪತ್ತೆಯಾಗಿದೆ. ಚೆಕ್ ನೋಡಿ ಸಿಬ್ಬಂದಿಗಳು ಶಾಕ್ ಆಗಿದ್ದಾರೆ.

ಪ್ರತಿ 15 ದಿನಗಳಿಗೊಮ್ಮೆ ಈ ಪ್ರಸಿದ್ಧ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ. ಪ್ರತಿ ಬಾರಿಯಂತೆ ಈ ಬಾರಿಯೂ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿತ್ತು. ಹೀಗೆ ದೇವಸ್ಥಾನದ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯ ಮಾಡುತ್ತಿದ್ದರು. ಈ ವೇಳೆ ಅವರಿಗೆ ಬರೋಬ್ಬರಿ 100 ಕೋಟಿ ರೂಪಾಯಿ ಮೊತ್ತದ ಚೆಕ್ ಸಿಕ್ಕಿದೆ. ಯಾರೋ ಅನಾಮಿಕ ಭಕ್ತರು 100 ಕೋಟಿ ರೂಪಾಯಿ ಮೊತ್ತದ ಚೆಕ್ ಅನ್ನು ಹುಂಡಿಗೆ ಹಾಕಿದ್ದಾರೆ. ಇದನ್ನು ನೋಡಿದ ದೇವಸ್ಥಾನದ ಸಿಬ್ಬಂದಿ ಚೆಕ್ ದೇವಸ್ಥಾನದ ಅಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಿದ್ದಾರೆ.

ಬ್ಯಾಂಕ್​ ಖಾತೆಯಲ್ಲಿ ಎಷ್ಟಿತ್ತು ಗೊತ್ತಾ? 

ಹುಂಡಿಯಲ್ಲಿ ಪತ್ತೆಯಾದ ಈ ಚೆಕ್‍ನಲ್ಲಿ ಮೊದಲಿಗೆ 10 ರೂಪಾಯಿ ಎಂದು ಬರೆದು, ಮತ್ತೆ 100 ಕೋಟಿ ರೂ. ಎಂದು ಬರೆದಿರುವುದು ಕಂಡುಬಂದಿದೆ. ಅಧಿಕಾರಿಗಳು ಚೆಕ್ ಮೇಲಿನ ವಿವರಗಳನ್ನು ಪರಿಶೀಲಿಸಿದ್ದಾರೆ. ಈ ಚೆಕ್ ರಾಧಾಕೃಷ್ಣ ಎಂಬುವರ ಉಳಿತಾಯ ಖಾತೆಗೆ ಸೇರಿದ್ದು ಎಂಬುದು ಗೊತ್ತಾಗಿದೆ. ಅನುಮಾನ ವ್ಯಕ್ತಪಡಿಸಿದ ಅಧಿಕಾರಿಗಳು ಸಂಬಂಧಿಸಿದ ಬ್ಯಾಂಕ್‍ಗೆ ಹೋಗಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಬ್ಯಾಂಕ್ ಖಾತೆ ಪರಿಶೀಲಿಸಿದ ಸಿಬ್ಬಂದಿಗೆ ಶಾಕ್ ಆಗಿದೆ. ಯಾಕೆಂದರೆ 100 ಕೋಟಿ ರೂ. ಮೊತ್ತದ ಚೆಕ್ ಬರೆದಿರುವ ಉಳಿತಾಯ ಖಾತೆಯಲ್ಲಿ ಕೇವಲ 17 ರೂ. ಇರುವುದು ಕಂಡುಬಂದಿದೆ. ಇದೀಗ ದೇವಸ್ಥಾನದ ಅಧಿಕಾರಿಗಳು ಚೆಕ್ ಹಾಕಿರುವ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು100 ಕೋಟಿ ರೂಪಾಯಿಯ ಚೆಕ್; ಆಮೇಲೇನಾಯ್ತು..?

https://newsfirstlive.com/wp-content/uploads/2023/08/temple-2.jpg

Load More