ಟಗರಿಗೆ 1 ಕೋಟಿ ರೂ.ಗಳನ್ನು ಕೊಡುವುದರ ಹಿಂದೆ ಇದೇ ಕಾರಣ
1 ಕೋಟಿ ರೂ.ಗಳನ್ನು ಕೊಟ್ಟರು ನಮಗೆ ಲಾಸ್ ಇಲ್ಲ ಎನ್ನುತ್ತಿದ್ದಾರೆ
ಕಳೆದ ಈದ್ ಹಬ್ಬಕ್ಕೆ ಈ ಟಗರಿಗೆ ಎಷ್ಟು ಲಕ್ಷಕ್ಕೆ ಕೇಳಿದ್ದರು ಗೊತ್ತಾ..?
ಜೈಪುರ್: ಈದ್ ಮುಬಾರಕ್ ಆಚರಣೆ ಹಿನ್ನೆಲೆಯಲ್ಲಿ ಒಂದು ಟಗರಿಗೆ ಬರೋಬ್ಬರಿ 1 ಕೋಟಿ ರೂಪಾಯಿ ನೀಡುತ್ತೇವೆ ಎಂದರೂ ಕುರಿಗಾಹಿಯೊಬ್ಬರು ಅಂತಹ ಆಫರ್ ಅನ್ನು ನಿರಾಕರಣೆ ಮಾಡಿದ್ದಾರೆ. ಅಷ್ಟಕ್ಕೂ ಆ ಟಗರಿಗೆ 1 ಕೋಟಿ ರೂ.ಗಳನ್ನು ನೀಡುವುದಕ್ಕೆ ಬಲವಾದ ಕಾರಣವೂ ಇದೆ. ಹೀಗಾಗಿಯೇ 1 ಕೋಟಿ ರೂಪಾಯಿ ಆಫರ್ ಮಾಡಿದರು ಕುರಿಗಾಹಿ ವ್ಯಕ್ತಿ ಮಾತ್ರ ತನ್ನ ನಿರ್ಧಾರ ಬದಲಿಸಿಲ್ಲ.
ರಾಜಸ್ಥಾನದ ಚುರು ಜಿಲ್ಲೆಯ ಕುರಿಗಾಹಿ ರಾಜು ಸಿಂಗ್ ಎನ್ನುವರು ಸಾಕಷ್ಟು ಕುರಿಗಳನ್ನು ಮೇಯಿಸುತ್ತಾ ಅವುಗಳಿಂದ ಜೀವನ ಸಾಗಿಸುತ್ತಿದ್ದಾರೆ. ಅವರ ಕುರಿಗಳಲ್ಲಿನ ಒಂದು ಟಗರಿನ ಮೈ ಮೇಲೆ 786 ಎಂದು ಅದು ಹುಟ್ಟುವಾಗಲೇ ಬಂದು ಬಿಟ್ಟಿದೆ. ಹೀಗಾಗಿ ಅದನ್ನು ಖರೀದಿ ಮಾಡಿದರೆ ನಮಗೆ ಒಳ್ಳೆಯದಾಗುತ್ತೆ ಎಂದು ಮುಸ್ಲಿಂ ಸಮುದಾಯದವರು ಮುಗಿಬಿದ್ದಿದ್ದಾರೆ. ಈ ವೇಳೆ ಆ ಟಗರಿನ ಮೇಲೆ ಹರಾಜು ಕೂಗಿದ್ದು ಬರೋಬ್ಬರಿ 1 ಕೋಟಿ ರೂಪಾಯಿ ಕೊಡುತ್ತೇವೆ ಎಂದು ರಾಜು ಸಿಂಗ್ಗೆ ಹೇಳಿದ್ದಾರೆ. ಆದರೆ ಆತನು ಟಗರನ್ನು ಕೊಡುವುದಿಲ್ಲ. ಅದನ್ನು ನಾನು ಪ್ರೀತಿಯಿಂದ ಬೆಳೆಸಿದ್ದೇನೆ ಎಂದು ಹೇಳಿ ಅವರ ಮಾತನ್ನು ನಿರಾಕರಣೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಭಾರತದಲ್ಲಿ ವಾಸಿಸುವ ಮುಸ್ಲಿಂ ಸಮುದಾಯ 786 ನಂಬರ್ ಎಂದರೆ ಹೆಚ್ಚಾಗಿ ನಂಬುತ್ತಾರೆ. ಮಸೀದಿಯಲ್ಲೂ ಈ ನಂಬರ್ ಅನ್ನು ಬರೆದಿರುತ್ತಾರೆ. 786 ಎಂದರೆ ಬಿಸ್ಮಿಲ್ಲಾ ಇರ್- ರಹಮಾನ್ ಇರ್ -ರಹೀಮ್ ಎಂಬ ಅರ್ಥ ಬರುತ್ತದೆ. ಹೀಗಾಗಿಯೇ ಅವರು ಈ ನಂಬರ್ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಎಂದು ಹೇಳಲಾಗುತ್ತದೆ.
ಮೊದ ಮೊದಲು ರಾಜು ಸಿಂಗ್ಗೆ ನನ್ನ ಟಗರಿಗೆ ಯಾಕೆ ಇಷ್ಟು ಬೆಲೆ ಕಟ್ಟುತ್ತಾರೆಂದು ತಿಳಿದಿರಲಿಲ್ಲ. ಆ ಮೇಲೆ ಕೆಲವರನ್ನು ವಿಚಾರಿಸಿದಾಗ ಆ ನಂಬರ್ ಬಗ್ಗೆ ಅಸಲಿ ಕಥೆ ತಿಳಿದುಕೊಂಡಿದ್ದಾರೆ. ಇನ್ನು ಕಳೆದ ವರ್ಷವು ಇದೇ ಟಗರಿಗೆ 70 ಲಕ್ಷ ರೂ.ಗಳನ್ನು ಬಿಡ್ ಮಾಡಲಾಗಿತ್ತು. ಆದರೆ ಈ ಬಾರಿ ಬರೋಬ್ಬರಿ 1 ಕೋಟಿ ರೂಪಾಯಿಗಳ ಆಫರ್ ಮಾಡಿದರೂ ರಾಜು ಸಿಂಗ್ ಆ ಆಫರ್ ಅನ್ನು ನಿರಾಕರಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ