newsfirstkannada.com

WATCH: ಸತ್ತು ಹೋದ ಆಸಾಮಿ ಹೆಲಿಕಾಪ್ಟರ್‌ನಲ್ಲಿ ಹಾರಿ ಬಂದು ಬದುಕಿದ್ದೀನಿ ಅನ್ನೋದಾ.. ಅಸಲಿಗೆ ಆಗಿದ್ದೇನು?

Share :

16-06-2023

    ಸತ್ತೇ ಹೋದ ಅಂದುಕೊಂಡಿದ್ದ ವ್ಯಕ್ತಿ ಬದುಕಿ ಬಂದ್ರೆ ಹೇಗಿರುತ್ತೆ?

    45 ವರ್ಷದ ಆಸಾಮಿ ಇನ್ನಿಲ್ಲ ಅಂತಾ ಆತನ ಮಗಳೇ ಹೇಳಿದ್ಳು

    ಅಂತ್ಯಸಂಸ್ಕಾರಕ್ಕೆ ನಿಂತಿದ್ದವರ ಮುಂದೆ ಹೆಲಿಕಾಪ್ಟರ್‌ ಲ್ಯಾಂಡ್

ಚಟ್ಟದ ಮೇಲೆ ಮಲಗಿದ್ದ ಶವ ಇನ್ನೇನು ಅಂತ್ಯ ಸಂಸ್ಕಾರ ಮಾಡಿ ಮುಗಿಸುವಷ್ಟರಲ್ಲಿ ಅಲ್ಲಾಡಿದ್ದು, ಸತ್ತೇ ಹೋದ ಅಂದುಕೊಂಡಿದ್ದ ವ್ಯಕ್ತಿ ಮತ್ತೆ ಬದುಕಿ ಬಂದ ಅದೆಷ್ಟೋ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ನಿಜಕ್ಕೂ ಇದು ಅದಕ್ಕಿಂತಲೂ ಅಚ್ಚರಿಯ ಘಟನೆ. ಅಲ್ಲಿ ಎಲ್ಲರೂ ಶವಪೆಟ್ಟಿಗೆಯಲ್ಲಿ ಶವ ಮಲಗಿದೆ ಅಂತಾ ನಂಬಿದ್ರು. ಆದರೆ ಸತ್ತು ಹೋಗಿದ್ದಾನೆ ಎಂದು ಭಾವಿಸಿದ್ದ ಆಸಾಮಿ ಹೆಲಿಕಾಪ್ಟರ್‌ನಲ್ಲಿ ಹಾರಿ ಕೊಂಡು ಬಂದು ಲ್ಯಾಂಡ್ ಆಗಿಬಿಟ್ಟ. ಇಂತಹ ಒಂದು ವಿಚಿತ್ರ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.

ಬೆಲ್ಜಿಯಂನ 45 ವರ್ಷದ ಡೇವಿಡ್ ಬೇರ್ಟೆನ್ ಸತ್ತಿದ್ದಾನೆ ಎಂದು ಎಲ್ಲರಿಗೂ ಹೇಳಲಾಗಿತ್ತು. ಬೇರ್ಟನ್ ಮಗಳು ನನ್ನ ತಂದೆ ಸತ್ತಿದ್ದಾನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದಳು. ಮೃತದೇಹವನ್ನು ಶವಪೆಟ್ಟಿಗೆಯಲ್ಲಿ ಹಾಕಿ ರುದ್ರಭೂಮಿಗೆ ಹೊತ್ತು ತರಲಾಗಿತ್ತು. ಸಂಬಂಧಿಕರು, ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತಾ ಅಂತಿಮ ನಮನ ಸಲ್ಲಿಸುತ್ತಾ ನಿಂತಿದ್ದರು. ಇನ್ನೇನು ಅಂತ್ಯ ಸಂಸ್ಕಾರಕ್ಕೆ ಸಜ್ಜಾಗಬೇಕು ಅನ್ನುವಷ್ಟರಲ್ಲಿ ಮೌನವಾಗಿ ನಿಂತಿದ್ದವರ ಕಿವಿಗೆ ಹೆಲಿಕಾಪ್ಟರ್‌ನ ಸದ್ದು ಕೇಳಿ ಬಂದಿದೆ.

ಆ ಹೆಲಿಕಾಪ್ಟರ್‌ನಲ್ಲಿ ಎಲ್ಲರೂ ಸತ್ತಿದ್ದಾನೆ ಅಂದುಕೊಂಡಿದ್ದ ಡೇವಿಡ್ ಬೇರ್ಟೆನ್ ಇಳಿದು ಬರ್ತಾನೆ. ಎಲ್ಲರಿಗೂ ಪರಮಾಶ್ಚರ್ಯವಾಗುತ್ತೆ. ಕೊನೆಗೆ ಡೇವಿಡ್ ಬೇರ್ಟೆನ್ ನಾನು ಸತ್ತೇ ಇರಲಿಲ್ಲ. ನಾನು ನಿಮ್ಮನ್ನೆಲ್ಲಾ ಪರೀಕ್ಷೆ ಮಾಡಿದೆ. ಒಬ್ಬರಿಗೊಬ್ಬರು ಯಾವಾಗಲೂ ದೂರ ಇರದೆ. ಬಹಳಷ್ಟು ಹತ್ತಿರದಲ್ಲಿ ಅನೋನ್ಯವಾಗಿರಬೇಕು. ಈ ಪಾಠವನ್ನು ನಿಮ್ಮೆಲ್ಲರಿಗೂ ಕಲಿಸಲು ನಾನು ಈ ರೀತಿ ಮಾಡಿದೆ ಎಂದಿದ್ದಾನೆ. ಎಲ್ಲರೂ ಸತ್ತಿರುವ ವ್ಯಕ್ತಿ ಬದುಕಿದ್ದಾನೆ ಅನ್ನೋ ಖುಷಿಯಲ್ಲಿ ತಬ್ಬಿ ಮುದ್ದಾಡಿದ್ದಾರೆ. ತನ್ನ ಮನೆಯವರಿಗೆ ಬುದ್ಧಿ ಕಲಿಸಲು ಸುಳ್ಳು ಹೇಳಿದ ವ್ಯಕ್ತಿ ಹೆಲಿಕಾಪ್ಟರ್‌ನಲ್ಲಿ ಬಂದು ಆಶ್ಚರ್ಯ ಮೂಡಿಸಿದ್ದು ನಿಜಕ್ಕೂ ಅಚ್ಚರಿ ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಸತ್ತು ಹೋದ ಆಸಾಮಿ ಹೆಲಿಕಾಪ್ಟರ್‌ನಲ್ಲಿ ಹಾರಿ ಬಂದು ಬದುಕಿದ್ದೀನಿ ಅನ್ನೋದಾ.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2023/06/Brazil-Helicapter.jpg

Load More