newsfirstkannada.com

ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದು ಹಾಕಿದ್ದ ಕೇಸ್​​.. ಕಾಮುಕನಿಗೆ ಮರಣದಂಡನೆ!

Share :

14-11-2023

  ಅಪ್ರಾಪ್ತ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ ಆರೋಪಿ

  ಪೋಕ್ಸೋ ಕೋರ್ಟ್​ನ ನ್ಯಾಯಾಧೀಶ ಕೆ. ಸೋಮನ್ ಆದೇಶ

  ಮನೆಯಲ್ಲಿದ್ದ ಬಾಲಕಿಯನ್ನ ಪುಸಲಾಯಿಸಿ ಕರೆದೊಯ್ದಿದ್ದ ಕಿರಾತಕ

ಕೊಚ್ಚಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿ ಬಳಿಕ ಕೊಲೆ ಮಾಡಿದ್ದ ಆರೋಪಿಗೆ ಕೇರಳ ಕೋರ್ಟ್​ ಮರಣ ದಂಡನೆ ವಿಧಿಸಿದೆ. ಬಿಹಾರ ಮೂಲದ ಕಾರ್ಮಿಕ ಅಶ್ವಕ್ ಆಲಂ ಮರಣ ದಂಡನೆಗೆ ಗುರಿಯಾದ ವ್ಯಕ್ತಿ.

ಜುಲೈ 28 ಕೇರಳದ ಅಲುವಾ ಎನ್ನುವ ನಗರದ ಮನೆಯೊಂದರಲ್ಲಿದ್ದ 5 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳನ್ನ ಪುಸಲಾಯಿಸಿ ಆರೋಪಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಯಾರಿಗೂ ಗೊತ್ತಾಗಬಾರದು ಎಂದು ಕತ್ತು ಹಿಸುಕಿ ಕೊಲೆ ಮಾಡಿದ್ದನು. ನಂತರ ಬಾಲಕಿಯ ಮೃತ ದೇಹವನ್ನು ಮಾರ್ಕೆಟ್ ಪಕ್ಕದಲ್ಲಿ ಬಿಸಾಡಿ ಹೋಗಿದ್ದನು ಎನ್ನಲಾಗಿದೆ.

ಆರೋಪಿಯನ್ನು ಹಿಡಿದುಕೊಂಡು ಹೋಗುತ್ತಿರುವ ಪೊಲೀಸರು

ಈ ಎಲ್ಲ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಲ್ಲದೇ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವುದನ್ನು ಪ್ರತ್ಯಕ್ಷದರ್ಶಿಯೊಬ್ಬರು ಕೋರ್ಟ್​ ಮುಂದೆ ಸಾಕ್ಷಿ ಹೇಳಿದ್ದರು. ಹೀಗಾಗಿ ಈ ಎಲ್ಲವನ್ನು ಗಮನಿಸಿ ಕೇರಳದ ಪೋಕ್ಸೋ ಕೋರ್ಟ್​ನ ನ್ಯಾಯಾಧೀಶ ಕೆ.ಸೋಮನ್ ಅವರು ಆರೋಪಿಗೆ 6 ಲಕ್ಷ ರೂಪಾಯಿ ದಂಡ ಹಾಗೂ ಮರಣ ದಂಡನೆ ನೀಡಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಸಿಎಂ ಪಿಣಾರಾಯಿ ವಿಜಯನ್ ಕೂಡ ಅಧಿಕಾರಿಗಳು ಸೂಕ್ತ ಕೆಲಸ ಮಾಡಿ, ಆರೋಪಿಗೆ ಶಿಕ್ಷೆ ಬೀಳುವಂತೆ ಮಾಡಿದ್ದಾರೆ. ಮಕ್ಕಳ ದಿನಾಚರಣೆಯೆಂದೇ ಆರೋಪಿಗೆ ಶಿಕ್ಷೆಯಾಗಿರುವುದು ಎಲ್ಲರಿಗೂ ಪಾಠವಾಗಲಿದೆ. ಘಟನೆಯಲ್ಲಿ ಪೋಷಕರು ಅನುಭವಿಸಿದ ಕಷ್ಟ ಹೇಳತೀರದು. ಆದರೆ ಸರ್ಕಾರ ಅವರಿಗೆ ಎಲ್ಲ ರೀತಿಯ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದು ಹಾಕಿದ್ದ ಕೇಸ್​​.. ಕಾಮುಕನಿಗೆ ಮರಣದಂಡನೆ!

https://newsfirstlive.com/wp-content/uploads/2023/11/KEARALA_RAPE.jpg

Load More