ಸುಗಂಧ ದ್ರವ್ಯ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಜಗಳ
ಪರ್ಫ್ಯೂಮ್ ಜಾಸ್ತಿ ಸಿಂಪಡಿಸಿದ್ದಕ್ಕೆ ಶುರುವಾಯ್ತು ವಾಗ್ವಾದ
ಗನ್ ತೆಗೆದು ಹೆಂಡತಿಗೆ ಶೂಟ್ ಮಾಡಿದ ಪತಿ.. ಮುಂದೇನಾಯ್ತು?
ಮಧ್ಯ ಪ್ರದೇಶ: ಮನೆಯಿಂದ ಹೊರಗೆ ಹೋಗುವ ವೇಳೆ ಸುಗಂಧ ದ್ರವ್ಯ ಜಾಸ್ತಿ ಹಾಕಿದ್ದಕ್ಕೆ ಗಂಡನೇ ಹೆಂಡತಿಯನ್ನ ಶೂಟ್ ಮಾಡಿದ ಘಟನೆ ಗ್ವಾಲಿಯರ್ನಲ್ಲಿ ನಡೆದಿದೆ. ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅತ್ತ ಪತಿ ಮಾತ್ರ ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗಿದ್ದಾನೆ.
ಗಣೇಶಪುರದ ನಿವಾಸಿ ನೀಲಂ ಜಾತವ್ ಎಂಬ ಮಹಿಳೆ ಎಂಟು ವರ್ಷದ ಹಿಂದೆ ಮಹೇಂದ್ರ ಜಾತವ್ ಎಂಬಾತನನ್ನು ವಿವಾಹವಾಗಿದ್ದಳು. ಮಹೇಂದ್ರ ಮಾತ್ರ ಕ್ರಿಮಿನಲ್ ಹಿನ್ನಲೆಯಿದ್ದವನಾಗಿದ್ದು, ಆತನ ಮೇಲೆ ಕಳ್ಳತನದ ಆರೋಪಗಳು ಇದ್ದವು. ಹೀಗಾಗಿ ಜೈಲು ಕೂಡ ಸೇರಿದ್ದನು. 4 ವರ್ಷ ಬಳಿಕ ಜೈಲಿನಿಂದ ಬಂದ ಮಹೇಂದ್ರ ಪತ್ನಿ ನೀಲಂ ಜೊತೆ ವಾಸಿಸುತ್ತಿದ್ದನು.
ಶನಿವಾರದಂದು ನೀಲಂ ಮನೆಯಿಂದ ಹೊರಗಡೆ ಹೋಗಿ ಬರಲು ಮುಂದಾಗಿದ್ದಾಳೆ. ಈ ವೇಳೆ ಆಕೆ ಸುಗಂಧ ದ್ರವ್ಯ ಮೈಗೆ ಸಿಂಪಡಿಸಿಕೊಳ್ಳುತ್ತಾಳೆ. ಆದರೆ ಅತಿಯಾಗಿ ಸುಗಂಧ ದ್ರವ್ಯ ಸಿಂಪಡಿಸಿದ್ದೀಯಾ ಎಂಬ ಕಾರಣಕ್ಕೆ ಗಂಡ ಮಹೇಂದ್ರ ಮತ್ತು ನೀಲಂಗೆ ಜಗಳವಾಗುತ್ತದೆ. ಬಳಿಕ ಇಬ್ಬರ ಜಗಳ ತಾರಕಕ್ಕೇರುತ್ತದೆ. ಕೊನೆಗೆ ಮಹೇಂದ್ರ ತನ್ನ ಬಳಿಯಿದ್ದ ಗನ್ ತೆಗೆದು ಆಕೆಗೆ ಶೂಟ್ ಮಾಡುತ್ತಾನೆ. ಬಳಿಕ ಸ್ಥಳದಿಂದ ಆತನ ಕಾಲ್ಕಿತ್ತಿದ್ದಾನೆ.
ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ನೀಲಂ ತಕ್ಷಣ ತನ್ನ ಸಹೋದರ ದಿನೇಶ್ಗೆ ಕರೆ ಮಾಡುತ್ತಾಳೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆತ ಆಕೆಯನ್ನ ಆಸ್ಪತ್ರೆಗೆ ಸೇರಿಸಿದ್ದಾನೆ.
ಸದ್ಯ ನೀಲಂ ಕುಟುಂಬ ಮಹೇಂದ್ರನ ಮೇಲೆ ಬಿಜೋಯಿಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೊಲೆ ಯತ್ನ ಪ್ರಕರಣದ ಮೇಲೆ ಕೇಸ್ ದಾಖಲಾಗಿದೆ. ಪೊಲೀಸರು ಆತನಿಗಾಗಿ ಹುಡುಕಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ