newsfirstkannada.com

ಮೆಟ್ರೋದಲ್ಲಿ ಮಾರಾಮಾರಿ; ಕಾಲು ತುಳಿದ ವೃದ್ಧನನ್ನು ಮನಸೋ ಇಚ್ಛೆ ಥಳಿಸಿದ ಯುವಕ..!

Share :

27-10-2023

  ನೋಡ ನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿದ ಇಬ್ಬರ ಜಗಳ

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಗಲಾಟೆ ವಿಡಿಯೋ!

  ನೆಟ್ಟಿಗರು ಆಕ್ರೋಶಕ್ಕೆ ಗುರಿಯಾದ ಕ್ಯಾಪ್ ಧರಿಸಿಕೊಂಡಿದ್ದ ಯುವಕ

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರೀ ವೈರಲ್​​ ಆಗುತ್ತಿದೆ. ದೆಹಲಿ ಮೆಟ್ರೋದಲ್ಲಿ ವಯಸ್ಸಾದ ಪ್ರಯಾಣಿಕರೊಬ್ಬರ ಮೇಲೆ ಯುವಕನೋರ್ವ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ಹೌದು, ವೃದ್ಧನೊಬ್ಬ ಯುವಕನ ಕಾಲನ್ನು ತುಳಿದಿದ್ದಕ್ಕೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ಇದೇ ವಿಚಾರಕ್ಕೆ ವಯಸ್ಸಾದ ವೃದ್ಧನ ಮೇಲೆ ಕ್ಯಾಪ್ ಧರಿಸಿಕೊಂಡಿದ್ದ ಯುವಕ ಹಲ್ಲೆ ಮಾಡಿದ್ದಾನೆ. ನೋಡ ನೋಡುತ್ತಿದ್ದಂತೆ ಈ ಜಗಳ ವಿಕೋಪಕ್ಕೆ ತಿರುಗಿದೆ. ಇದನ್ನು ನೋಡಿದ ಕೂಡಲೇ ಸಹ ಪ್ರಯಾಣಿಕರು ಮಧ್ಯಪ್ರವೇಶಿಸಿದ್ದಾರೆ. ನಂತರ ವೃದ್ಧನನ್ನು ರಕ್ಷಣೆ ಮಾಡಿ ಗಲಾಟೆಯಲ್ಲಿ ಭಾಗಿಯಾಗಿದ್ದ ಯುವಕನ್ನು ಹಿಡಿದುಕೊಂಡು ದೂರ ತಳ್ಳಿದ್ದಾರೆ.

ಇದನ್ನು ಓದಿ: VIDEO: ಬುರ್ಖಾ ಧರಿಸಿ ಪ್ರಯಾಣ ಮಾಡು.. ಹಿಂದೂ ಮಹಿಳೆಗೆ ಮುಸ್ಲಿಂ ಮಹಿಳೆಯರು ಆವಾಜ್​​

ಬಳಿಕ ಯುವಕನನ್ನು ಪೊಲೀಸ್​ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿದ ಅದೆಷ್ಟೋ ನೆಟ್ಟಿಗರು ಯುವಕ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ವಿಡಿಯೋ ಭಯಾನಕವಾಗಿದೆ, ವಯಸ್ಸಾದವರಿಗೆ ಹೀಗೆ ಮಾಡಬಾರದಿತ್ತು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಟ್ರೋದಲ್ಲಿ ಮಾರಾಮಾರಿ; ಕಾಲು ತುಳಿದ ವೃದ್ಧನನ್ನು ಮನಸೋ ಇಚ್ಛೆ ಥಳಿಸಿದ ಯುವಕ..!

https://newsfirstlive.com/wp-content/uploads/2023/10/tamil-nadu-1.jpg

Load More