newsfirstkannada.com

Vande Bharat ಟ್ರೈನ್​ ಟಾಯ್ಲೆಟ್​ನಲ್ಲಿ ಕೂತು ಬೀಡಿ ಸೇದಿದ ಪುಣ್ಯಾತ್ಮ.. ದಟ್ಟ ಹೊಗೆಗೆ ಫೈರ್ ಅಲರ್ಟ್​ ಆನ್​.. ಮುಂದೇನಾಯ್ತು?

Share :

10-08-2023

    ತಿರುಪತಿಯಿಂದ ಟಿಕೆಟ್​ ಇಲ್ಲದ ಪ್ರಯಾಣ ಬೆಳೆಸಿದ ವ್ಯಕ್ತಿ

    ಯಾರಿಗೂ ಸಿಕ್ಕಿಬೀಳದಂತೆ ಟಾಯ್ಲೆಟ್​ನಲ್ಲಿ ಅಡಗಿ ಕುಳಿತ

    ಆತನ ಬೀಡಿ ಹೊಗೆಯಿಂದ ಬಂತು ಎಚ್ಚರಿಕೆಯ ಘಂಟೆ

ವ್ಯಕ್ತಿಯೋರ್ವನ ಯಡವಟ್ಟಿನಿಂದಾಗಿ ನೂರಾರು ಜನರು ಆತಂಕಕ್ಕೆ ಒಳಗಾದ ಘಟನೆ ತಿರುಪತಿ-ಸಿಕಂದರಾಬಾದ್ ವಂದೇ ಭಾರತ್​ ಟ್ರೈನ್​ನಲ್ಲಿ ನಡೆದಿದೆ. ರೈಲಿನಲ್ಲಿ ಪ್ರಯಾಣಿಸ್ತಿದ್ದ ವ್ಯಕ್ತಿ ಬೋರ್ ಆಗ್ತಿದೆ ಎಂದು ಟಾಯ್ಲೆಟ್​ಗೆ ಹೋಗಿ ಬೀಡಿ ಹಚ್ಚಿರುವುದೇ ಇದಕ್ಕೆ ಕಾರಣವಾಗಿದೆ.

ವ್ಯಕ್ತಿ ಅದೆಷ್ಟು ಬೀಡಿ ಸೇದಿದ್ದನೋ ಗೊತ್ತಿಲ್ಲ. ಏನೋ ಭಾರೀ ಪ್ರಮಾಣದ ಹೊಗೆ ಶೌಚಾಲಯದಿಂದ ಹೊರಬರೋಕೆ ಶುರುವಾಗಿದೆ. ಹೀಗೆ ಹೊಗೆ ಹೆಚ್ಚಾದಂತೆ ಫೈರ್ ಅಲರ್ಟ್​ ತಾನಾಗಿಯೇ ಆನ್​ ಆಗಿದೆ.

ವಿಚಾರಣೆಯ ವೇಳೆ ಈತ ಟ್ರೈನ್​ ಟಿಕೆಟ್ ಕೂಡ ಪಡೆದಿರಲಿಲ್ಲ ಅನ್ನೋದು ಗೊತ್ತಾಗಿದೆ. ತಿರುಪತಿಯಿಂದ ಈತ ಟ್ರೈನ್​ ಹತ್ತಿದ್ದು, ಟಿಕೆಟ್​ ಇಲ್ಲದ ಕಾರಣ ಅಡಗಿ ಕೂರಲು ಶೌಚಾಲಯವನ್ನ ಆರಿಸಿಕೊಂಡಿದ್ದ. ಹಾಗಾಗಿ ಸಮಯ ಕಳೆಯಲೆಂದು ಟಾಯ್ಲೆಟ್​ನಲ್ಲಿ ಬೀಡಿ ಸೇದಿದ್ದಾನೆ. ಸದ್ಯ ಈ ವ್ಯಕ್ತಿಯನ್ನ ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Vande Bharat ಟ್ರೈನ್​ ಟಾಯ್ಲೆಟ್​ನಲ್ಲಿ ಕೂತು ಬೀಡಿ ಸೇದಿದ ಪುಣ್ಯಾತ್ಮ.. ದಟ್ಟ ಹೊಗೆಗೆ ಫೈರ್ ಅಲರ್ಟ್​ ಆನ್​.. ಮುಂದೇನಾಯ್ತು?

https://newsfirstlive.com/wp-content/uploads/2023/08/Train-Fire-alert-On.jpg

Load More