ಮಕ್ಕಳ ಎದುರೇ ಪತ್ನಿಗೆ ಚಾಕುವಿನಿಂದ ಇರಿದು ಕೊಂದ ಪತಿ
ಬಳಿಕ ತಾನೂ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ
ಹೆಂಡತಿಯನ್ನು ಬರ್ಬರವಾಗಿ ಕೊಲ್ಲಲು ಕಾರಣವೇನು ಗೊತ್ತಾ?
ಲಕ್ನೋ: ಪಾಪಿ ಪತಿ ತನ್ನ ಮಕ್ಕಳ ಎದುರೇ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಂದಿರೋ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಬಳಿಕ ತಾನು ಕೂಡ ಅಪಾರ್ಟ್ಮೆಂಟ್ ಫಸ್ಟ್ ಫ್ಲೋರ್ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಶಿವಾನಿ ಕಪೂರ್ (43) ಎಂಬಾಕೆ ಕೊಲೆಯಾದ ಮಹಿಳೆ. ಮಕ್ಕಳ ಎದುರೇ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಂದ ಹಂತಕ ಆದಿತ್ಯ ಕಪೂರ್. ಸದ್ಯ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಆದಿತ್ಯ ಕಪೂರ್ ಸ್ಥಿತಿ ಗಂಭೀರವಾಗಿದ್ದು, ಪೊಲೀಸ್ ಕಸ್ಟಡಿಯಲ್ಲೇ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
ಅಸಲಿಗೆ ಆಗಿದ್ದೇನು..?
ಶಿವಾನಿ ಕಪೂರ್, ಆದಿತ್ಯ ಕಪೂರ್ 14 ವರ್ಷಗಳ ಹಿಂದೆಯೇ ಮದುವೆ ಆಗಿದ್ದರು. ಇತ್ತೀಚೆಗೆ ಇವರ ಸಂಬಂಧದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ಇಬ್ಬರು ಸೆಪರೇಟ್ ಆಗಿ ವಾಸಿಸುತ್ತಿದ್ದರು. ಕುಡಿದ ಮತ್ತಿನಲ್ಲೇ ಮಕ್ಕಳನ್ನು ನೋಡಲು ಹೆಂಡತಿಗೆ ಫ್ಲಾಟ್ಗೆ ಆದಿತ್ಯ ಹೋಗಿದ್ದ.
ಇನ್ನು, ಈ ವೇಳೆ ಶಿವಾನಿ ಬಾಗಿಲು ತೆಗೆಯಲು ಹಿಂದೇಟು ಹಾಕಿದ್ದಳು. ಕೊನೆಗೆ ಕಿರುಚಿದಾಗ ಬಾಗಿಲು ತೆಗೆದಳು. ಇದೇ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಆದಿತ್ಯ ಮಕ್ಕಳ ಮುಂದೆಯೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ಕೊನೆಗೆ ತಾನು ಬಾಲ್ಕನಿಯಿಂದ ಜಿಗಿದು ಸೂಸೈಡ್ ಆಗಿ ಯತ್ನಿಸಿದ್ದಾನೆ. ಈ ಘಟನೆ ನೋಡಿ ಮಕ್ಕಳು ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ