newsfirstkannada.com

ಒಂಟಿ ಮಹಿಳೆಯರೇ ಈತನ ಟಾರ್ಗೆಟ್.. ಒಬ್ಬೊಬ್ಬರೇ ಓಡಾಡೋ ಮುನ್ನ ಹುಷಾರ್​​!

Share :

29-08-2023

    ಒಂಟಿಯಾಗಿ ಓಡಾಡೋ ಮಹಿಳೆಯರೇ ಈತನ ಟಾರ್ಗೆಟ್

    ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಒಬ್ಬರೇ ಓಡಾಡಬೇಡಿ

    ಎಲ್ಲರೂ ಓದಲೇಬೇಕಾದ ಖತರ್ನಾಕ್​ ಕಳ್ಳನ ಸ್ಟೋರಿ ಇದು..!

ಬೆಂಗಳೂರು: ಸಮಯ ಬೆಳ್ಳಗ್ಗೆ 11 ಗಂಟೆ 33 ನಿಮಿಷ, 36 ಸೆಕೆಂಡ್​​. ರಸ್ತೆ ಬದಿಯಲ್ಲಿ ಮಾಸ್ಕ್​ ಹಾಕಿಕೊಂಡು ಓಡಾಡ್ತಿರೋ ವ್ಯಕ್ತಿ. ವಾಪಾಸ್​​ ಬರುವಾಗ 7 ನಿಮಿಷ ತಡ. ಹೀಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡ ವ್ಯಕ್ತಿ ಹೆಸರು ಜೋಶ್ವಾ. ಈತನ ವೃತ್ತಿ ಕಳ್ಳತನ. ಅದರಲ್ಲೂ ಮಹಿಳೆಯರೇ ಈತನ ಟಾರ್ಗೆಟ್​​. ಇವನ ಕಳ್ಳತನ ಸ್ಟೈಲ್ ಮಾತ್ರ ಸ್ವಲ್ಪ ಡಿಫರೆಂಟ್. ಡಿಫರೆಂಟ್​​ ಆಗಿ ಕಳ್ಳತನ ಮಾಡಿ ಪೊಲೀಸರ ಕೈಯಲ್ಲಿ ಲಾಕ್​ ಆಗಿದ್ದಾನೆ.

ಮಹಿಳೆಯರೇ ಈತನ ಟಾರ್ಗೆಟ್​​

ಆರೋಪಿ ಜೋಶ್ವಾ ಒಂಟಿ ಮಹಿಳೆಯರನ್ನೇ ಟಾರ್ಗೆಟ್​​ ಮಾಡ್ತಿದ್ದ. ಮಹಿಳೆಯರು ಮಗುವನ್ನ ಶಾಲೆಗೆ ಬಿಟ್ಟು ಮನೆ ಕಡೆ ಹೊರಟಾಗ ಅವರನ್ನೇ ಫಾಲೋ ಮಾಡ್ತಿದ್ದ. ಅವರ ಅಪಾರ್ಟ್​ಮೆಂಟ್​​, ಮನೆ ಮತ್ತು ಅಕ್ಕಪಕ್ಕದ ಎಲ್ಲಾ ವಾತಾವರಣ ಅಬ್ಸರ್ವ್ ಮಾಡಿ ಅನಂತರ ಕಳ್ಳತನದ ಪ್ಲಾನ್ ಮಾಡ್ತಿದ್ದ.

ಹೀಗೆ ಎಲ್ಲವನ್ನ ಅಬ್ಸರ್ವ್ ಮಾಡಿದವನು ಮನೆಯವರೆಲ್ಲ ಹೊರಹೋಗುವ ಸಮಯವನ್ನ ನೋಡಿಕೊಂಡು ಎಚ್​​ಎಸ್​ಆರ್​ ಲೇಔಟ್​​ ಠಾಣಾ ವ್ಯಾಪ್ತಿಯ ಒಂದು ಮನೆಗೆ ಎಂಟ್ರಿ ಕೊಟ್ಟಿದ್ದ. ಮಹಿಳೆ ಒಳ ಹೋದ ತಕ್ಷಣ ಬಾಗಿಲು ಹಾಕಿಕೊಂಡಿದ್ರು. ಆತ ಬಂದವನು ಬಾಗಿಲು ಬಡಿದಿದ್ದ. ಮಹಿಳೆ ಯಾರೋ ಕೋರಿಯರ್​​ನವರು ಇರಬೇಕು ಅಂತಾ ಬಾಗಿಲು ತೆಗೆದಿದ್ರು. ತಕ್ಷಣ ಆಕೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಕೈ ಕೊಯ್ದು ಚಿನ್ನವನ್ನ ಕಳ್ಳತನ ಮಾಡಿದ್ದ.

ಕೊನೆಗೂ ಮಹಿಳೆ ಎಚ್​​ಎಸ್​ಆರ್​ ಲೇಔಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು. ಪೊಲೀಸರು ತನಿಖೆ ಆರಂಭಿಸಿ ಸಿಸಿಟಿವಿ ಮತ್ತು ಗೂಗಲ್​ ಪೇ ಆಧಾರದಲ್ಲಿ ಆರೋಪಿಯನ್ನ ಜೈಲಿಗಟ್ಟಿದ್ದಾರೆ. ಅದೇನೆ ಇರ್ಲಿ ಮಹಿಳೆಯರು ಒಂಟಿಯಾಗಿ ಓಡಾಡುವ ಮುನ್ನ ಎಚ್ಚರ ವಹಿಸಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂಟಿ ಮಹಿಳೆಯರೇ ಈತನ ಟಾರ್ಗೆಟ್.. ಒಬ್ಬೊಬ್ಬರೇ ಓಡಾಡೋ ಮುನ್ನ ಹುಷಾರ್​​!

https://newsfirstlive.com/wp-content/uploads/2023/08/Crime-news1.jpg

Load More