newsfirstkannada.com

Video: ಅಯ್ಯೋ.. ಹುಲಿ ಕಣೋ ಅದು; ನಡು ರಸ್ತೆಯಲ್ಲಿ ವ್ಯಾಘ್ರನ ಜೊತೆ ವಾಕಿಂಗ್‌ ಮಾಡಿದ ಭೂಪ

Share :

Published October 30, 2023 at 6:18pm

Update October 30, 2023 at 6:32pm

    ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳ ಮೇಲೆ ಹಾರಲು ಹೋದ ಹುಲಿರಾಯ

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ವ್ಯಾಘ್ರನ ವಾಕಿಂಗ್ ವಿಡಿಯೋ

    ಜನ ಸಾಮಾನ್ಯರು ಇರೋ ರಸ್ತೆಯಲ್ಲಿ ಹುಲಿ ಜೊತೆ ಯುವಕ ವಾಕಿಂಗ್​

ಇಸ್ಲಾಮಾಬಾದ್: ಹುಲಿ, ಸಿಂಹ ಅಂದ್ರೆ ಯಾರಿಗೆ ಭಯ ಇಲ್ಲ ಹೇಳಿ. ಯಾಮಾರಿದ್ರೆ ಮನುಷ್ಯನನ್ನೇ ತಿನ್ನುವ ಈ ಮಾಂಸಹಾರಿಗಳು ಏನಾದರೂ ಸಿಕ್ಕರೆ ಸುಮ್ಮನೆ ಬಿಡುತ್ತವೆಯೇ? ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರೀ ವೈರಲ್​ ಆಗಿ ಚರ್ಚೆಗೆ ಗ್ರಾಸವಾಗಿದೆ. ಹೌದು, ಇಲ್ಲೊಬ್ಬ ವ್ಯಕ್ತಿಯು ಹುಲಿಯನ್ನು ನಾಯಿಯಂತೆ ವಾಕಿಂಗ್​ ಕರೆದುಕೊಂಡು ಹೋಗಿದ್ದಾನೆ. ಅದು ಕೂಡ ಜನ ಸಾಮಾನ್ಯರು ಇರೋ ರಸ್ತೆಯಲ್ಲಿ ವಾಕಿಂಗ್​​​​ ಮಾಡಿಸಿದ್ದಾನೆ. ಈ ದೃಶ್ಯ ಕಂಡು ಬಂದಿದ್ದು ಪಾಕಿಸ್ತಾನದ್ದು ಎಂದು ಹೇಳಲಾಗಿದೆ.

ಇದನ್ನು ಓದಿ: ಎಲ್ಲೇ ಹೋದರೂ ಜೊತೆಯಾಗಿ.. ಸಿರಿ, ಭಾಗ್ಯಶ್ರೀ ಮಧ್ಯೆ ಲಾಕ್ ಆದ ತುಕಾಲಿ; ಬಿಗ್‌ಬಾಸ್‌ ಮನೆಯಲ್ಲಿ ಹೊಸ ಆಟ

View this post on Instagram

A post shared by Tip Top Yatra (@tiptopyatra)

ವಿಡಿಯೋದಲ್ಲಿ ಏನಿದೆ?

ಜನನಿಬಿಡ ಪ್ರದೇಶದಲ್ಲಿ ಯುವಕನೊಬ್ಬ ಹುಲಿಯನ್ನು ವಾಕಿಂಗ್‌ಗೆ ಕರೆದುಕೊಂಡು ಬಂದಿದೆ. ಹುಲಿಯ ಕೊರಳಿಗೆ ಬೆಲ್ಟ್ ಕಟ್ಟಿ ಅದಕ್ಕೊಂದು ಹಗ್ಗ ಕಟ್ಟಿ ಹುಲಿಯೊಂದಿಗೆ ಯುವಕ ವಾಕಿಂಗ್​ ಮಾಡಿದ್ದಾನೆ. ಇನ್ನೂ ಹುಲಿ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳ ಮೇಲೆ ಹಾರಲು ಪ್ರಯತ್ನಿಸಿತು. ಆದರೆ ಕೂಡಲೇ ಯುವಕ ಹಗ್ಗವನ್ನು ಬಿಗಿಯಾಗಿ ಹಿಡಿದುಕೊಂಡು ಹುಲಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾನೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​​ ಆಗಿದೆ. ಈ ವಿಡಿಯೋ ಸುಮಾರು ಒಂದು ಮಿಲಿಯನ್​​ಗಿಂತಲೂ ಹೆಚ್ಚು ವೀವ್ಸ್​ ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರಿ ಭಿನ್ನ ವಿಭಿನ್ನವಾಗಿ ಕಾಮೆಂಟ್​​ ಮಾಡಿದ್ದಾರೆ.

ಇನ್ನೂ, ಹುಲಿ ಉಗುರು ಪೆಂಡೆಂಡ್​ ಧರಿಸದ ಆರೋಪ ಮೇಲೆ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ವರ್ತೂರು ಸಂತೋಷ್​ ಅವರನ್ನು ಬಿಗ್​ಬಾಸ್​ ಮನೆಯಿಂದಲೇ ನೇರವಾಗಿ ಅರಣ್ಯಾಧಿಕಾರಿಗಳು ಅರೆಸ್ಟ್​​ ಮಾಡಿದ್ದರು. ಬಳಿಕ ಹುಲಿಯ ಬಗ್ಗೆ ಕರ್ನಾಟಕ ಸೇರಿ ಇಡೀ ದೇಶದಲ್ಲಿ ಬಹಳ ಚರ್ಚೆಯಾಗುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಪ್ರಾಣಿಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳುವುದು ಅಪರಾಧ. ಹೀಗಾಗಿಯೇ ಹುಲಿ ಉಗುರು ಧರಿಸಿದ ಸೆಲೆಬ್ರಿಟಿ ಮನೆಗಳನ್ನು ಅರಣ್ಯಾಧಿಕಾರಿಗಳು ಜಾಲಾಡಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದ್ದು, ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ ಈ ವಿಡಿಯೋ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಅಯ್ಯೋ.. ಹುಲಿ ಕಣೋ ಅದು; ನಡು ರಸ್ತೆಯಲ್ಲಿ ವ್ಯಾಘ್ರನ ಜೊತೆ ವಾಕಿಂಗ್‌ ಮಾಡಿದ ಭೂಪ

https://newsfirstlive.com/wp-content/uploads/2023/10/tiger-1-1.jpg

Load More