newsfirstkannada.com

ಬೆಂಗಳೂರು PG ಹುಡುಗಿಯರೇ ಎಚ್ಚರ.. ಮ್ಯಾನೇಜರ್ ದುಷ್ಕೃತ್ಯಕ್ಕೆ ಬೆಚ್ಚಿ ಬಿದ್ದ ಯುವತಿ; ಆಗಿದ್ದೇನು?

Share :

Published July 9, 2024 at 3:44pm

  ದೂರದ‌ ಊರಿನಿಂದ ನಗರಕ್ಕೆ ಬರುವ ಹೆಣ್ಣುಮಕ್ಕಳೇ ಎಚ್ಚರ ಎಚ್ಚರ!

  ಹಿಂದೆ ಮುಂದೆ ನೋಡದೆ PG ಮಾಡಿದ್ರೆ ನಿಮ್ಮ ಮಾನಕ್ಕೆ ಕುತ್ತು ಗ್ಯಾರಂಟಿ

  ಪಿಜಿ ಮ್ಯಾನೇಜರ್ ಆನಂದ್ ಶರ್ಮಾನನ್ನು ಬಂಧಿಸಿದ ಪೊಲೀಸರು; ಯಾಕೆ?

ಬೆಂಗಳೂರು: ಹತ್ತಾರು ಕನಸು ಕಟ್ಕೊಂಡು ದೂರದ ಊರುಗಳಿಂದ ಕೆಲಸಕ್ಕಾಗಿ ಅದೆಷ್ಟೋ ಜನ ಬೆಂಗಳೂರಿಗೆ ಬರ್ತಾರೆ. ಹೀಗೆ ಬರೋರಲ್ಲಿ ಸಾಮಾನ್ಯವಾಗಿ ಪಿಜಿಯಲ್ಲಿ ಉಳ್ಕೋಳ್ಳೋರೆ ಹೆಚ್ಚು. ಆದ್ರೆ ಹೀಗೆ ಸಿಲಿಕಾನ್ ಸಿಟಿಯಲ್ಲಿ ಪಿಜಿ ಸೇರುವ ಹೆಣ್ಣು ಮಕ್ಕಳೇ ಎಚ್ಚರ! ಕಡಿಮೆ ಹಣಕ್ಕೆ ಪಿಜಿ ಸಿಗುತ್ತೆ ಅಂತ ಹೋದ್ರೆ ನಿಮ್ಮ ಕಥೆ ವ್ಯಥೆಯಾಗುತ್ತೆ.

ಇದನ್ನೂ ಓದಿ: ಶ್ರೀರಾಂಪುರದಲ್ಲಿ ಹರಿದ ನೆತ್ತರು.. ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ; ಕಾರಣವೇನು?

ಹೌದು, ಹೀಗೆ ಯುವತಿಯೊಬ್ಬಳು ಪಿಜಿ ಬೇಡ ಅಂತ ಅಂದಿದ್ದಕ್ಕೆ ಮ್ಯಾನೇಜರ್ ಆನಂದ್ ಶರ್ಮಾ ಆಕೆಯ ಫೋನ್ ನಂಬರ್​​ನ ಕಾಲ್ ಗರ್ಲ್ ವೆಬ್ ಸೈಟ್​ನಲ್ಲಿ ಹರಿಬಿಟ್ಟಿದ್ದಾನೆ. ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ವಿ ಸ್ಟೇಜ್ ಲೇಡಿಸ್ ಪಿಜಿಯಲ್ಲಿ ಈ ಘಟನೆ ನಡೆದಿದೆ. ಮೊದಲು ಯುವತಿಯೊಬ್ಬಳು ವಿ ಸ್ಟೇಜ್ ಪಿಜಿಗೆ ಅಡ್ಮಿಷನ್ ಆಗಿದ್ದಳು. ಬಳಿಕ ಪಿಜಿ ಇಷ್ಟ ಆಗಿಲ್ಲ ಎಂದು ಅಡ್ಮಿಷನ್ ಕ್ಯಾನ್ಸಲ್ ಮಾಡಿದ್ದಾಳೆ. ಜೊತೆಗೆ ಗೂಗಲ್ ರಿವ್ಯೂನಲ್ಲಿ ಪಿಜಿ ಅವ್ಯವಸ್ಥೆ ಬಗ್ಗೆ ಯುವತಿ ಬರೆದಿದ್ದಳಂತೆ. ಹೀಗಾಗಿ ನಮ್ಮ ಪಿಜಿ ಬಗ್ಗೆಯೇ ಹೀಗೆ ಬರೆದ್ದಾಳೆ ಎಂದು ಮ್ಯಾನೇಜರ್ ಯುವತಿ ನಂಬರ್ ಅನ್ನು ಲೊಕೆಂಟೋ ಸೇರಿದಂತೆ ಕಾಲ್ ಗರ್ಲ್ ವೆಬ್ ಸೈಟ್​ನಲ್ಲಿ ಅಪ್ಲೋಡ್ ಮಾಡಿದ್ದಾನೆ.

ಇದಾದ ಬಳಿಕ ಯುವತಿ ಫೋನ್​ ನಂಬರ್​ಗೆ ಅನೇಕರು ಕರೆ ಮಾಡಿ ರೇಟ್ ಎಷ್ಟು ಅಂತ ಹೇಳಿದ್ದಾರೆ. ಜೊತೆಗೆ ರೂಮ್​ಗೆ ಬಾ ಎಂದೆಲ್ಲ ಕರೆ ಮಾಡಿ ಟಾರ್ಚರ್ ‌ನೀಡಿದ್ದಾರಂತೆ. ಕೂಡಲೇ ಯುವತಿ ಪೂರ್ವ ವಿಭಾಗ ಸೆನ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಮ್ಯಾನೇಜರ್ ಆನಂದ್ ಶರ್ಮಾ ದುಷ್ಕೃತ್ಯಕ್ಕೆ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಪಿಜಿ ಮ್ಯಾನೇಜರ್ ಆನಂದ್ ಶರ್ಮಾನನ್ನ ಪೂರ್ವ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು PG ಹುಡುಗಿಯರೇ ಎಚ್ಚರ.. ಮ್ಯಾನೇಜರ್ ದುಷ್ಕೃತ್ಯಕ್ಕೆ ಬೆಚ್ಚಿ ಬಿದ್ದ ಯುವತಿ; ಆಗಿದ್ದೇನು?

https://newsfirstlive.com/wp-content/uploads/2024/07/pg-bng.jpg

Load More