newsfirstkannada.com

Mandya Accident: ಕೇವಲ ಮೂರು ದಿನಗಳ ಅಂತರದಲ್ಲಿ ಎರಡು ಅಪಘಾತ.. ಸಾವಿನ ಕಾಲುವೆ ಆಗ್ತಿದ್ಯಾ ವಿಸಿ ನಾಲೆ..?

Share :

30-07-2023

  ಮಂಡ್ಯದ ವಿಸಿ ನಾಲೆಯಲ್ಲಿ ಮತ್ತೊಂದು ಘೋರ ಅನಾಹುತ

  ಶ್ರೀರಂಗಪಟ್ಟಣ ತಾಲೂಕು ಗಾಮನಹಳ್ಳಿಯಲ್ಲಿ ದುರ್ಘಟನೆ

  ಬಲಿಷ್ಠ ತಡೆಗೋಡೆ ಇಲ್ಲದೇ ಸಾಲು ಸಾಲು ಅಪಘಾತ

ಮಂಡ್ಯ: ಮಂಡ್ಯದ ಗಾಮನಹಳ್ಳಿ ಬಳಿಯ ವಿಸಿ ನಾಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಕಾರು ಉರುಳಿ ಬಿದ್ದು ನಾಲ್ವರ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ. ಮೂರು ದಿನದ ಅಂತರದಲ್ಲೇ ಇದು ಎರಡನೇ ಪ್ರಕರಣವಾಗಿದೆ.

ಆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಬಂಭವಿಸಿದೆ. ಗಾಮನಹಳ್ಳಿಯ ಮಹದೇವಮ್ಮ, ಸಂಜನಾ, ಮಮತಾ, ರೇಖಾ ಮೃತದುರ್ದೈವಿಗಳು. ಅದೃಷ್ಟವಶಾತ್ ಕಾರು ಚಾಲಕ ಮನೋಜ್ ಬಚಾವ್ ಆಗಿದ್ದಾರೆ. ಕಾರಿನಲ್ಲಿದ್ದ ನಾಲ್ವರು ಹೊರಬರಲಾಗದೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿದೇವರ ಕೆಲಸ ನಿಮಿತ್ತ ಹೊರಟಿದ್ದಾಗ ಭೀಕರ ದುರಂತ.. ವಿಧಿಯಾಟಕ್ಕೆ ದಾರಿ ಮಧ್ಯೆಯೇ ಪ್ರಾಣಬಿಟ್ಟ ನಾಲ್ವರು.

ಸಾವಿನ ನಾಲೆ?

ಮಂಡ್ಯ ಜಿಲ್ಲೆಯ ವಿಸಿ ನಾಲೆ ಸಾವಿನ ನಾಲೆಯಾಗುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ. ಯಾಕಂದರೆ ಮೂರು ದಿನಗಳ ಅಂತರದಲ್ಲಿ ಇದು ಎರಡನೇ ಪ್ರಕರಣವಾಗಿದೆ. ಕಳೆದ ಗುರುವಾರ ಮಂಡ್ಯದ ತಿಬ್ಬನಹಳ್ಳಿ ಬಳಿ ನಡೆದ ದುರಂತದಲ್ಲಿ ಓರ್ವ ಸಾವನಪ್ಪಿದ್ದ. ಆ ಘಟನೆ ಮಾಸುವ ಮುನ್ನವೇ ನಿನ್ನೆ ರಾತ್ರಿ ಮತ್ತೊಂದು ದುರಂತ ಸಂಭವಿಸಿದೆ.

ಘಟನೆ ನಡೆದಿದ್ದು ಹೇಗೆ..?

ರಸ್ತೆ ತಿರುವಿನಲ್ಲಿ ಕಂಟ್ರೋಲ್ ಮಾಡಲಾಗದೇ ತಡೆಗೋಡೆಗೆ ಕಾರು ಡಿಕ್ಕಿಯಾಗಿದೆ. ಬಲವಾಗಿ ಬ್ರೇಕ್ ಹಾಕಿದ್ದರೂ ಕಾರು ಕಂಟ್ರೋಲ್​​ಗೆ ಸಿಗದೇ ನಾಲೆಗೆ ಪಲ್ಟಿ ಹೊಡೆದಿದೆ. ಘೋರ ದುರಂತದಿಂದ ಗಾಮನಹಳ್ಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mandya Accident: ಕೇವಲ ಮೂರು ದಿನಗಳ ಅಂತರದಲ್ಲಿ ಎರಡು ಅಪಘಾತ.. ಸಾವಿನ ಕಾಲುವೆ ಆಗ್ತಿದ್ಯಾ ವಿಸಿ ನಾಲೆ..?

https://newsfirstlive.com/wp-content/uploads/2023/07/VC.jpg

Load More