newsfirstkannada.com

ಟವಲ್​​ನಿಂದ ಕತ್ತು ಬಿಗಿದು ವೃದ್ಧೆಯ ಕೊಲೆ.. ಆಸ್ತಿಗಾಗಿ ಸಾಯಿಸಿರೋ ಶಂಕೆ

Share :

26-10-2023

    ದುಷ್ಕರ್ಮಿಗಳಿಂದ ಕೊಲೆಯಾದ 62 ವರ್ಷದ ವೃದ್ಧೆ

    ಕಾಫಿ ಪುಡಿ ಅಂಗಡಿ-ಚಿಕೋರಿ ಕಾರ್ಖಾನೆಯ ಮಾಲೀಕನ ಪತ್ನಿ

    ಮಂಡ್ಯ ಬಿಟ್ಟು ಮೈಸೂರಿನ ವೃದ್ಧಾಶ್ರಮದಲ್ಲಿ ನೆಲೆಸಿದ್ದ ದಂಪತಿಗಳು

ಮಂಡ್ಯ: ಟವಲ್ ನಿಂದ ಕತ್ತು ಬಿಗಿದು ವೃದ್ಧೆಯ ಕೊಲೆ ಮಾಡಿರುವ ಘಟನೆ ಹೆಬ್ಬಾಳ ಸಮೀಪದ ಕಾರ್ಖಾನೆಯೊಂದರಲ್ಲಿ ನಡೆದಿದೆ. ನಳಿನಿ ರಮೇಶ್ (62) ಕೊಲೆಯಾದ ವೃದ್ಧೆ.

ಮೃತ ನಳಿನಿ ರಮೇಶ್ ಮಂಡ್ಯ ನಗರದ ವಿದ್ಯಾನಗರದ ನಿವಾಸಿಯಾಗಿದ್ದು, ಕಾಫಿ ಪುಡಿ ಅಂಗಡಿ-ಚಿಕೋರಿ ಕಾರ್ಖಾನೆಯ ಮಾಲೀಕರಾದ ರಮೇಶ್ ಅವರ ಪತ್ನಿ.

ಉದ್ಯಮ ಮಾಡಲು ಮಾಲೀಕರು ಕಾಫಿ ಪುಡಿ ಅಂಗಡಿ ಹಾಗೂ ಚಿಕೋರಿ ಕಾರ್ಖಾನೆಯನ್ನ ಬ್ಯಾಂಕ್ ನಲ್ಲಿ ಅಡಮಾನ ಇಟ್ಟಿದ್ದರು. ಈ ವೇಳೆ ಸಾಲ ತೀರಿಸಲಾಗದ ಕಾರಣ ಕಾರ್ಖಾನೆಯನ್ನ ಬ್ಯಾಂಕ್​ ವಶಕ್ಕೆ ಪಡೆದಿತ್ತು. ಹೀಗಾಗಿ ದಂಪತಿಗಳು ಮಂಡ್ಯ ಬಿಟ್ಟು ಮೈಸೂರಿನ ವೃದ್ಧಾಶ್ರಮದಲ್ಲಿ ನೆಲೆಸಿದ್ದರು.

ಇತ್ತೀಚಿಗೆ ವೃದ್ಧೆ ಮಂಡ್ಯದ ಚಿಕೋರಿ ಕಾರ್ಖಾನೆಯ ಮನೆಯಲ್ಲಿ ವಾಸವಿದ್ದರು. ಆದರೆ ಯಾರೋ ದುಷ್ಕರ್ಮಿಗಳು ಟವಲ್ ನಿಂದ ಬಿಗಿದು ವೃದ್ದೆಯನ್ನು ಕೊಲೆ ಮಾಡಿದ್ದಾರೆ. ಆಸ್ತಿಗಾಗಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವೃದ್ಧೆಯ ಶವವನ್ನು ಮಂಡ್ಯ ಮಿಮ್ಸ್ ಶವಗಾರಕ್ಕೆ ರವಾನಿಸಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟವಲ್​​ನಿಂದ ಕತ್ತು ಬಿಗಿದು ವೃದ್ಧೆಯ ಕೊಲೆ.. ಆಸ್ತಿಗಾಗಿ ಸಾಯಿಸಿರೋ ಶಂಕೆ

https://newsfirstlive.com/wp-content/uploads/2023/10/Mandya-1.jpg

Load More