newsfirstkannada.com

ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ.. ಬೈಕ್‌ಗಳ ಮೇಲೆ ಕಾರು ಹತ್ತಿಸಿ ಹುಚ್ಚಾಟ ಮೆರೆದ ಕುಡುಕ

Share :

13-09-2023

  ಬೈಕ್‌ಗಳ ಮೇಲೆ ಕಾರು ಹತ್ತಿಸಿ ಕುಡುಕನ ಅವಾಂತರ

  ತಡೆಯಲು ಯತ್ನಿಸಿದವರ ಮೇಲೆ ಕಾರು ಹತ್ತಿಸಲು ಯತ್ನ

  ಕಾರಿಗೆ ಕಲ್ಲಿನಿಂದ ಹೊಡೆದು ಕುಡುಕನ ತಡೆದ ಜನರು

ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಆದ್ರೂ ಜನ್ರೂ ಸೇವನೆ ಮಾಡ್ತಾರೆ. ಕುಡಿದ್ಮೇಲೆ ತೆಪ್ಪಗೆ ಮನೇಲಿ ಇದ್ರೆ ಎಲ್ಲರಿಗೂ ಒಳ್ಳೆದು. ಅದನ್ನ ಬಿಟ್ಟು ಡ್ರಂಕ್ ಡ್ರೈವ್ ಮಾಡಿ ಮತ್ತೊಬ್ಬರಿಗೆ ತೊಂದ್ರೆ ಕೊಡೋದು ಎಷ್ಟರ ಮಟ್ಟಿಗೆ ಸರಿ. ಇದೀಗ ಸಕ್ಕರೆ ನಾಡಿನಲ್ಲಿ ಎಣ್ಣೆ ಏರಿಸಿಕೊಂಡ ವ್ಯಕ್ತಿಯೊಬ್ಬ ಮಾಡಿರೋ ಅವಾಂತರ ಒಂದಾ, ಎರಡಾ. ಏನ್ ಮಾಡಿದ್ದಾನೆ ನೀವೇ ನೋಡಿ.

ಎಣ್ಣೆ ಏಟಲ್ಲಿ ವ್ಯಕ್ತಿಯಿಂದ ಅಡ್ಡಾದಿಡ್ಡಿ ಕಾರು ಚಾಲನೆ

ಇದು ಎಣ್ಣೆ ಕಿಕ್‌ನಲ್ಲಿ ಕುಡುಕ ಮಾಡಿರೋ ಕಿತಾಪತಿಯ ದೃಶ್ಯ. ಒಳಗೆ ಗುಂಡು ಸೇರಿದ ಮೇಲೆ ವ್ಯಕ್ತಿಯೊಬ್ಬ ತೋರಿರೋ ದುರ್ವರ್ತನೆ. ಮೈಮೇಲೆ ಪ್ರಜ್ಞೆ ಇಲ್ಲದೇ ಮಾಡಿರೋ ಅವಾಂತರ.

ಮಂಡ್ಯದಲ್ಲಿ ಕುಡಿದು ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ

ಇಷ್ಟೆಲ್ಲಾ ಅವಾಂತರ ನಡೆದಿರೋದು ಮಂಡ್ಯ ಜಿಲ್ಲೆಯಲ್ಲಿ. ಕುಡುಕ ವ್ಯಕ್ತಿಯೊಬ್ಬ ಮದ್ಯಸೇವನೆ ಮಾಡಿ ಕಾರನ್ನ ಚಲಾಯಿಸಿ ಇಷ್ಟೆಲ್ಲಾ ರಾದ್ಧಾಂತ ಮಾಡಿದ್ದಾನೆ. ಜನರ ಆಕ್ರೋಶದ ಕಿಚ್ಚಿಗೆ ಗುರಿಯಾಗಿದ್ದಾನೆ.

ಅಷ್ಟಕ್ಕೂ ನಡೆದದ್ದೇನು? ಕಿರಿಕ್ ಕುಡುಕ ಯಾರು?.

ರಾತ್ರಿ 8.45ರ ಸಮಯ. ಮಂಡ್ಯದ ಹೊಳಲು ವೃತ್ತದಲ್ಲಿ ಜನ್ರೆಲ್ಲಾ ತಮ್ಮ ಪಾಡಿಗೆ ಕೆಲಸ ಮುಗಿಸಿ ಮನೆಗೆ ಹೋಗೋಕೆ ಸಜ್ಜಾಗಿದ್ರು. ಅಷ್ಟರಲ್ಲಿ ಕಾರಿನಲ್ಲಿ ಎಂಟ್ರಿ ಕೊಟ್ಟ ಮೊಹಮ್ಮದ್ ಇಸ್ಮಾಯಿಲ್ ಎಂಬ ವ್ಯಕ್ತಿ ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾನೆ. ರಸ್ತೆ ಪಕ್ಕದಲ್ಲೇ ನಿಂತಿದ್ದ ಬೈಕ್‌ಗಳ ಮೇಲೆ ಕಾರು ಹತ್ತಿಸಿ ಸಂಪೂರ್ಣ ಜಖಂ ಮಾಡಿದ್ದಾನೆ.

ಇದಷ್ಟೇ ಅಲ್ಲ. ಹೀಗೆ ವಾಹನಗಳಿಗೆ ಡಿಕ್ಕಿ ಹೊಡೆದಿದ್ದನ್ನ ಕಂಡ ಜನರು ಈತನ ಕಿರಿಕ್‌ನ ತಡೆಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಮೈಮೇಲೆ ಪ್ರಜ್ಞೆ ಇಲ್ಲದಂತೆ ಕುಡಿದು ಟೈಟ್‌ ಆಗಿದ್ದ ಇಸ್ಮಾಯಿಲ್, ತಡೆಯಲು ಬಂದವರ ಮೇಲೆ ಕಾರು ಹತ್ತಿಸಲು ಮುಂದಾಗಿದ್ದಾನೆ.

ಬಳಿಕ ಹೇಗಾದ್ರೂ ಮಾಡಿ ಇವನನ್ನ ಕಂಟ್ರೋಲ್‌ಗೆ ತರೋಕೆ ಮುಂದಾದ ಜನರು ಕಲ್ಲು, ದೊಣ್ಣೆಯಿಂದ ಕಾರಿನ ಗ್ಲಾಸ್ ಹೊಡೆದು ನಿಲ್ಲಿಸಿದ್ದಾರೆ. ಇಡೀ ಕಾರಿನ ಗ್ಲಾಸ್‌ಗಳನ್ನೆಲ್ಲಾ ಪುಡಿ ಪುಡಿ ಮಾಡಿದ್ದಾರೆ. ಬಳಿಕ ಚಾಲಕ ಮೊಹಮ್ಮದ್ ಇಸ್ಮಾಯಿಲ್‌ನನ್ನ ಹಿಡಿದು ಧರ್ಮದೇಟು ಕೊಟ್ಟಿದ್ದಾರೆ. ಬಳಿಕ ಜನರು ಇಸ್ಮಾಯಿಲ್‌ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಇಸ್ಮಾಯಿಲ್‌ಗೆ ಆಸ್ಪತ್ರೆಗೆ ದಾಖಲಿಸಿ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಮಂಡ್ಯದ ಬೀಡಿ ಕಾಲೋನಿಯಲ್ಲಿ ಇಸ್ಮಾಯಿಲ್ ವಾಸವಿದ್ದ ಅಂತ ತಿಳಿದುಬಂದಿದೆ. ಇದೀಗ ಈತನ ವಿರುದ್ಧ ಸೆಂಟ್ರಲ್ ಠಾಣೆ ಪೊಲೀಸರು ಕೇಸ್‌ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.

ಒಟ್ಟಾರೆ, ಜನರು ಡ್ರಂಕ್‌ ಅಂಡ್‌ ಡ್ರೈವ್‌ ಮಾಡಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳೋದಲ್ಲದೇ ಇತರರ ಜೀವಕ್ಕೂ ಕಂಟಕ ತರ್ತಿದ್ದಾರೆ. ಇಂತಹ ಘಟನೆಗಳಿಗೆ ಕಾರಣರಾಗ್ತಿದ್ದಾರೆ. ಸೋ ಕುಡಿದು ಕಾರು ಏರುವ ಮುನ್ನ ಬಿ-ಅಲರ್ಟ್‌.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ.. ಬೈಕ್‌ಗಳ ಮೇಲೆ ಕಾರು ಹತ್ತಿಸಿ ಹುಚ್ಚಾಟ ಮೆರೆದ ಕುಡುಕ

https://newsfirstlive.com/wp-content/uploads/2023/09/mandya-1-1.jpg

Load More