newsfirstkannada.com

Video: ಬರೋಬ್ಬರಿ 9.20 ಲಕ್ಷಕ್ಕೆ ಮಾರಾಟವಾದ ಮಂಡ್ಯದ ‘ಜಾಗ್ವಾರ್’​.. ಇದು ಕಾರಲ್ಲ ಕಣ್ರಿ ಎತ್ತು!

Share :

Published July 27, 2023 at 4:49pm

Update July 27, 2023 at 4:52pm

    ತಮಿಳುನಾಡಿನವರ ಹುಬ್ಬೇರಿಸುವಂತೆ ಮಾಡಿತ್ತು ಈ ಮಂಡ್ಯದ ಎತ್ತು

    ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ 9.20 ಲಕ್ಷಕ್ಕೆ ಸೇಲ್​ ಅಂದ್ರೆ ನಂಬ್ತೀರಾ?

    ಇದು ಹಳ್ಳಿಕಾರ್ ತಳಿಯ ಎತ್ತು, ‘ಜಾಗ್ವಾರ್​’ನಷ್ಟೇ ಸ್ಪೀಡ್, ಅಷ್ಟೇ ಫೇಮಸ್ಸು​​

ಮಂಡ್ಯ: ಎರಡು ಹಲ್ಲಿನ ಒಂಟಿ ಎತ್ತು ಬರೋಬ್ಬರಿ 9.20 ಲಕ್ಷಕ್ಕೆ ಮಾರಾಟವಾದ ಘಟನೆ ಶ್ರೀರಂಗಪಟ್ಟಣದ ಶ್ರೀನಿವಾಸ ಅಗ್ರಹಾರದಲ್ಲಿ ಬೆಳಕಿಗೆ ಬಂದಿದೆ. ಹಳ್ಳಿಕಾರ್ ತಳಿಯ ಒಂಟಿ ಎತ್ತು ಇದಾಗಿದ್ದು, ಬ್ರಾಂಡ್ ಜಾಗ್ವಾರ್ ಎಂಬ ಹೆಸರನ್ನು ಹೊಂದಿತ್ತು.

ಅಂದಹಾಗೆಯೇ, ಈ ಎತ್ತನ್ನು ನವೀನ್ ಎಂಬುವರು ಸಾಕಿದ್ದರು. ತಮಿಳುನಾಡು ಮೂಲದ ಸರವಣಪಟ್ಟಿ ಗ್ರಾಮದ ಸಿರವೈ ತಂಬಿ ಎಂಬವರು 9.20 ಲಕ್ಷಕ್ಕೆ ಈ ಎತ್ತು ಖರೀದಿಸಿದ್ದಾರೆ.

ಬ್ರಾಂಡ್ ಜಾಗ್ವಾರ್ ಕರ್ನಾಟಕ ಸೇರಿದಂತೆ ಹೊರ ರಾಜ್ಯದ ಎತ್ತು ಗಾಡಿ ರೇಸ್ ನಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿ ಗಳಿಸಿತ್ತು. ತಮಿಳುನಾಡಿನಲ್ಲಿ ನಡೆದ ರೇಸ್ ನಲ್ಲಿ ಈ ಎತ್ತು ತನ್ನ ವೇಗದಿಂದ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು.

ರೇಸ್ ನಲ್ಲಿ ಈ ಬ್ರಾಂಡ್​ ಜಾಗ್ವಾರ್ ಹೆಸರಿನ ಎತ್ತಿನ ವೇಗ ನೋಡಿದ ಸಿರವೈ ತಂಬಿ ಭಾರೀ ಮೊತ್ತಕ್ಕೆ ಎತ್ತು ಖರೀದಿ ಮಾಡಿದ್ದಾರೆ.

ನವೀನ್​ ಬ್ರಾಂಡ್ ಜಾಗ್ವಾರ್ ಎತ್ತನ್ನು ಈ ಹಿಂದೆ 1.20 ಲಕ್ಷಕ್ಕೆ ಮಂಡ್ಯದ ಇಂಡವಾಳು ಗ್ರಾಮದ ಅಜಿತ್ ರಿಂದ ಖರೀದಿಸಿದ್ದರು. ಆದರೀಗ ದುಬಾರಿ ಬೆಲೆಗೆ ಮಾರಾಟವಾಗುವ ಮೂಲಕ ಅಚ್ಚರಿ ಮೂಡಿಸಿದೆ.

ಇನ್ನು 9.20 ಲಕ್ಷಕ್ಕೆ ದಾಖಲೆ ಬೆಲೆಗೆ ಮಾರಾಟವಾದ ಈ ಎತ್ತನ್ನು ನವೀನ್​ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಮಾಡಿ ಬೀಳ್ಕೊಡಿಗೆ ಮಾಡಿದ್ದಾರೆ. ಬೀಳ್ಕೊಡಿಗೆ ವೇಳೆ ಎತ್ತಿಗೆ ಆರತಿ ಬೆಳಗಿ ನಮಸ್ಕರಿಸಿ ಭಾರದ ಮನಸ್ಸಿನಿಂದ  ಕುಟುಂಬಸ್ಥರು‌ ಬೀಳ್ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಬರೋಬ್ಬರಿ 9.20 ಲಕ್ಷಕ್ಕೆ ಮಾರಾಟವಾದ ಮಂಡ್ಯದ ‘ಜಾಗ್ವಾರ್’​.. ಇದು ಕಾರಲ್ಲ ಕಣ್ರಿ ಎತ್ತು!

https://newsfirstlive.com/wp-content/uploads/2023/07/Jaguar.jpg

Load More