ಹಗಲು ವೇಳೆ ಪ್ಲಾನ್, ರಾತ್ರಿ ವೇಳೆ ಜಾನುವಾರಗಳ ಕಳ್ಳತನ
ಕಳ್ಳತನ ಮಾಡಿದ ಹಸುಗಳಿಂದ ಶುರುವಾದ ಹೈನೋದ್ಯಮ
ಸ್ಥಳೀಯರ ಮಾಹಿತಿ ಮೇರೆಗೆ ಕೊನೆಗೂ ಅರೆಸ್ಟ್ ಆದ ಕಳ್ಳ
ಮಂಡ್ಯ: ವ್ಯಕ್ತಿಯೋರ್ವ ಹಸು, ಎಮ್ಮೆ ಕದ್ದು ಜಾನುವಾರು ಫಾರಂ ನಿರ್ಮಾಣ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚಾಕೇನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಚಾಕೇನಹಳ್ಳಿ ಗ್ರಾಮದ ರವೀಗೌಡ ಎಂಬಾತ ಕಳ್ಳತನ ಮಾಡಿದ ಹಸುಗಳನ್ನು ಇಟ್ಟುಕೊಂಡು ಹೈನೋದ್ಯಮ ಆರಂಭಿಸಿದ್ದಾನೆ.
ರವೀಗೌಡ ತಾನೊಬ್ಬ ಜಾನುವಾರು ವ್ಯಾಪಾರಿ ಎಂದು ಗುರುತಿಸಿಕೊಂಡಿದ್ದ. ಹಗಲು ವೇಳೆ ಪ್ಲಾನ್, ರಾತ್ರಿ ವೇಳೆ ಹಸು, ಎಮ್ಮೆ ಕಳ್ಳತನ ಮಾಡ್ತಿದ್ದ. ರಾತ್ರಿ ವೇಳೆ ಕದ್ದ ಹಸು, ಎಮ್ಮೆಯನ್ನ ತನ್ನ ಫಾರಂನಲ್ಲಿಯೇ ಸಾಕಾಣಿಕೆ ಮಾಡುತ್ತಿದ್ದ. ಬಳಿಕ ಹಂತ ಹಂತವಾಗಿ ಜಾನುವಾರುಗಳ ಮಾರಾಟ ಮಾಡುತ್ತಿದ್ದ. ಆದರೀಗ ಈ ಖತರ್ನಾಕ್ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕೆಲವು ತಿಂಗಳ ಹಿಂದೆ ರವೀಗೌಡ ಅಂಡ್ ಗ್ಯಾಂಗ್ ಹಲಗೂರು, ಚನ್ನಪಟ್ಟಣ, ಚನ್ನರಾಯಪಟ್ಟಣ ಭಾಗದಲ್ಲಿ ಹಸುಗಳ ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಹಲವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸ್ಥಳೀಯರ ಮಾಹಿತಿ ಮೇರೆಗೆ ರವೀಗೌಡ ಫಾರಂಗೆ ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ. ದಾಳಿ ವೇಳೆ ಕದ್ದ ಹಸು, ಎಮ್ಮೆಗಳು ಪತ್ತೆಯಾಗಿವೆ. ಸದ್ಯ ಆರೋಪಿ ರವಿಗೌಡನನ್ನ ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಕಳ್ಳತನವಾಗಿದ್ದ ಜಾನುವಾರುಗಳನ್ನ ಮಾಲೀಕರಿಗೆ ಒಪ್ಪಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ನೊಂದಿದ್ದ ರೈತರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ