newsfirstkannada.com

ಮೈ-ಬೆಂ ಹೆದ್ದಾರಿಯಲ್ಲಿ ಸಿನಿಮೀಯ ರೀತಿಯ ಕಾರುಗಳ ಅಪಘಾತ; ಮೂವರು ಸ್ಥಳದಲ್ಲೇ ಸಾವು, ಓರ್ವ ಗಂಭೀರ

Share :

20-06-2023

  ಸಾವಿನ ರಹದಾರಿಯಾದ ಮೈ-ಬೆಂ ದಶಪಥ‌ ಹೆದ್ದಾರಿ

  ಮದ್ದೂರು ತಾಲೂಕಿನ ಗೆಜ್ಜಲೆಗೆರೆ ಬಳಿ ಭೀಕರ ಅಪಘಾತ.

  ಅತಿವೇಗದಿಂದ ನಿಯಂತ್ರಣ ತಪ್ಪಿ ಕಾರುಗಳ ನಡುವೆ ಅಪಘಾತ

ಮಂಡ್ಯ: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾರುಗಳು ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದರೆ, ಓರ್ವನ ಸ್ಥಿತಿ ಗಂಭೀರವಾಗಿದೆ.

ಮೈ-ಬೆಂ ದಶಪಥ‌ ಹೆದ್ದಾರಿ ಉದ್ಘಾಟನೆಗೊಂಡ ಬಳಿಕ ಸಾಕಷ್ಟು ಅಪಘಾತಗಳು ನಡೆಯುತ್ತಲೇ ಇವೆ. ಅದರಂತೆ ಇಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲೆಗೆರೆ ಬಳಿ ಟಾಟಾ ಎಕ್ಸ್ ಕಾರಿಗೆ ಸ್ವಿಫ್ಟ್ ಡಿಸೈರ್ ಕಾರು ಗುದ್ದಿದ್ದು, ಕೊಪ್ಪ ಮೂಲದ ಕಾರು ಚಾಲಕ ನಿರಂಜನ್ ಕುಮಾರ್ (55 ), ಉತ್ತರ ಪ್ರದೇಶ ಮೂಲದ ನೀರಜ್ ​ಕುಮಾರ್​, ಸೆಲ್ವಿ (50) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊರ್ವ ವ್ಯಕ್ತಿ ಶ್ರೀ ವಾತ್ಸವ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಟಾಟಾ ಎಕ್ಸ್ ಕಾರು ರಸ್ತೆ ವಿಭಜಕ ಹಾರಿ ಎದುರುನಿಂದ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅತಿವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿd ಟಾಟಾ ಎಕ್ಸ್ ಕಾರು ರಸ್ತೆ ಡಿವೈಡರ್ ದಾಟಿ ಮತ್ತೊಂದು ಕಾರಿಗೆ ಗುದ್ದಿದೆ. ಗಾಯಾಳುವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈ-ಬೆಂ ಹೆದ್ದಾರಿಯಲ್ಲಿ ಸಿನಿಮೀಯ ರೀತಿಯ ಕಾರುಗಳ ಅಪಘಾತ; ಮೂವರು ಸ್ಥಳದಲ್ಲೇ ಸಾವು, ಓರ್ವ ಗಂಭೀರ

https://newsfirstlive.com/wp-content/uploads/2023/06/Mandya-accident-1.jpg

Load More