newsfirstkannada.com

ಜಮೀನು ವಿವಾದ; 19 ವರ್ಷದ ಯುವಕನ ಮೇಲೆ ಗುಂಡು ಹಾರಿಸಿ ಕೊಲೆಗೈದ ಚಿಕ್ಕಪ್ಪ

Share :

04-11-2023

    ತಂದೆಯೇ ಎದುರೇ ಅಣ್ಣನ ಮಗನನ್ನು ಕೊಂದ ಚಿಕ್ಕಪ್ಪ

    ಯುವಕನ ಮೇಲೆ ಗನ್​ನಲ್ಲಿ ಮೂರು ಬಾರಿ ಶೂಟ್​​ ಮಾಡಿ ಕೊಲೆ

    ಜಮೀನು ವಿವಾದ ಇತ್ಯರ್ಥ ಮಾಡುವ ನೆಪದಲ್ಲಿ ನಡೆಯಿತು ಕೊಲೆ

ಮಂಡ್ಯ: ತಂದೆಯ ಎದುರು ಶೂಟ್ ಮಾಡಿ ಮಗನನ್ನು ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಮೀನು ವಿವಾದದ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಜಯಪಾಲ್ (19) ಕೊಲೆಯಾಗಿದ್ದಾನೆ.

ಜಯಪಾಲ್ ತನ್ನ ಚಿಕ್ಕಪ್ಪ ಸೀಮೆಎಣ್ಣೆ ಕುಮಾರ್‌ನಿಂದ ಹತ್ಯೆಯಾಗಿದ್ದಾನೆ. ಗನ್‌ನಲ್ಲಿ ಶೂಟ್ ಮಾಡಿದ ಪರಿಣಾಮ ಜಯಪಾಲ್​ ಸಾವನ್ನಪ್ಪಿದ್ದಾನೆ. ಜಯಪಾಲ್‌ಗೆ 3 ಬಾರಿ ಗುಂಡು ಹಾರಿಸಿ‌ದ್ದ ಕಾರಣ ಆತನ ಪ್ರಾಣಪಕ್ಷಿ ಹಾರಿಹೋಗಿದೆ.

ಜಯಪಾಲ್​- ಕುಮಾರ್​
ಮೃತ ಜಯಪಾಲ್​- ಕೊಲೆಗೈದ ಕುಮಾರ್​

ಜಮೀನು ವಿವಾದ ಬಗ್ಗೆ ಗಲಾಟೆ ಪ್ರಾರಂಭವಾಗಿತ್ತು. ಈ ವಿವಾದ ಇತ್ಯರ್ಥ ಮಾಡಲು ಕುಮಾರ್​​ ಜಮೀನಿಗೆ ಜಯಪಾಲ್ ಹಾಗೂ ತಂದೆಯನ್ನು ಕರೆಸಿಕೊಂಡಿದ್ದನು. ಈ ವೇಳೆ ಜಯಪಾಲ್‌ಗೆ ಗುಂಡು ಹಾರಿಸಿ ಕುಮಾರ್​ ಕೊಲೆಗೈದಿದ್ದಾನೆ.

ಕುಮಾರ್​ ಅಣ್ಣ ವಾಸುವಿನ ಮಗ ಜಯಪಾಲ್‌ನ ಎದೆ, ತೋಳು, ಮುಗದ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ಗುಂಡಿನ ಹೊಡೆತಕ್ಕೆ ಜಯಪಾಲ್​ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬಿಂಡಿಗನವಿಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಮೀನು ವಿವಾದ; 19 ವರ್ಷದ ಯುವಕನ ಮೇಲೆ ಗುಂಡು ಹಾರಿಸಿ ಕೊಲೆಗೈದ ಚಿಕ್ಕಪ್ಪ

https://newsfirstlive.com/wp-content/uploads/2023/11/MND.jpg

Load More