newsfirstkannada.com

ಗಂಡ, ಹೆಂಡ್ತಿ ಜಗಳದಲ್ಲಿ 1 ವರ್ಷದ ಕೂಸು ಅನಾಥ.. ಮಂಡ್ಯ ದಂಪತಿಯ ಸಾವಿಗೆ ಹೊಸ ಟ್ವಿಸ್ಟ್‌; ಆಗಿದ್ದೇನು?

Share :

Published August 21, 2024 at 10:21pm

    ಏನು ತಪ್ಪು ಮಾಡದ ಪುಟ್ಟ ಕಂದಮ್ಮ ತಂದೆ-ತಾಯಿ ಇಲ್ಲದೇ ಅನಾಥ

    ಪತ್ನಿ ಸಾವಿನ ಬಳಿಕ ಪತಿ ಎಸ್ಕೇಪ್ ಅಂದುಕೊಂಡಿದ್ದವರಿಗೆ ಶಾಕ್‌!

    ಆರ್‌.ಪೇಟೆ ತಾಲೂಕಿನ ಗದ್ದೆ ಹೊಸೂರು ಗ್ರಾಮದಲ್ಲಿ ನೀರವ ಮೌನ

ಮಂಡ್ಯದಲ್ಲಿ ಬದುಕಿ ಬಾಳಬೇಕಿದ್ದ ಜೋಡಿ ದುರಂತ ಅಂತ್ಯ ಕಂಡಿದೆ. ಕೌಟುಂಬಿಕ ಕಲಹಕ್ಕೆ ಪತ್ನಿ ನೇಣಿಗೆ ಶರಣಾಗಿದ್ರೆ ಪತಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಮಗಳನ್ನ ಕೊಲೆ ಮಾಡಿ ನೇಣು ಹಾಕಿದ್ದಾರೆಂದು ಆಕೆ ಸಂಬಂಧಿಕರು ಅಳಿಯ ಮನೆಗೆ ಬೆಂಕಿ ಇಟ್ಟಿದ್ದಾರೆ. ಇಬ್ಬರ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಇಬ್ಬರ ಸಾವಿನಿಂದ ವರ್ಷನೂ ತುಂಬದೇ ಇರೋ ಹೆಣ್ಣು ಮಗು ಅನಾಥವಾಗಿದೆ.

ಇದನ್ನೂ ಓದಿ: ನಾಳೆ ದರ್ಶನ್​​​ ರಿಲೀಸ್​​ಗಾಗಿ ಪರಪ್ಪನ ಅಗ್ರಹಾರ ಜೈಲು ಮುಂದೆ ಉರುಳು ಸೇವೆ; 101 ತೆಂಗಿನ ಕಾಯಿ ಹೊಡೆದು ಪೂಜೆ 

ಮಗಳು ಚೆನ್ನಾಗಿ ಇರ್ಲಿ ಅಂತಾ ಕೇಳಿದಷ್ಟು ವರದಕ್ಷಿಣೆ ಕೊಟ್ಟು ಅದ್ಧೂರಿಯಾಗಿ ಮದ್ವೆ ಮಾಡಿದ್ದ ಪೋಷಕರು ಕಣ್ಣೀರು ಹಾಕುವಂತಾಗಿದೆ. ಇಷ್ಟು ಮುದ್ದಾಗಿ ಕಾಣ್ತಿರೋ ಜೋಡಿ ಸ್ವಾತಿ-ಮೋಹನ್. ಜಸ್ಟ್‌ ಎರಡು ವರ್ಷದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಸುಖ ಸಂಸಾರಕ್ಕೆ ಇನ್ನೂ ವರ್ಷ ತುಂಬದ ಪುಟ್ಟ ಹೆಣ್ಣು ಮಗು ಇದೆ. ಆದ್ರೀಗ ಇಬ್ಬರು ಸಾವನ್ನಪ್ಪಿದ್ದಾರೆ. ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿಯಾದ್ಲಾ ಎಂಬ ಅನುಮಾನ ಶುರುವಾಗಿದೆ. ಈ ಘಟನೆ ನಡೆದಿರೋದು ಆರ್‌.ಪೇಟೆ ತಾಲೂಕಿನ ಗದ್ದೆ ಹೊಸೂರು ಗ್ರಾಮದಲ್ಲಿ.

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು
ಗಂಡನ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ್ಳಾ ಗೃಹಿಣಿ?
ಹೆತ್ತವರು 30 ರಿಂದ 40 ಎಕರೆ ಜಮೀನು ಇದ್ದ ಮೋಹನ್‌ಗೆ ಸ್ವಾತಿಯನ್ನ ಮದುವೆ ಮಾಡಿ ಕೊಟ್ಟಿದ್ರು. ತಂದೆ-ತಾಯಿ ಹಾಗೂ ಪತ್ನಿ-ಮಗು ಜೊತೆ ತೋಟದ ಮನೆಯಲ್ಲಿದ್ರು. ಸ್ವಾಮಿ ಹಾಗೂ ಮೋಹನ್ ನಡುವೆ ಆಗಾಗ ಸಣ್ಣ-ಪುಟ್ಟ ಜಗಳ ಕೂಡ ಆಗ್ತಿತ್ತಂತೆ. ತವರು ಮನೆಗೆ ಹೋಗಿದ್ದ ಸ್ವಾತಿಯನ್ನ ಐದು ದಿನಗಳ ಹಿಂದಷ್ಟೇ ಮೋಹನ್ ಕರ್ಕೊಂಡು ಬಂದಿದ್ದ. ನಿನ್ನೆ ಯಾವ್ದೋ ವಿಷಯಕ್ಕೆ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿದೆ. ತವರು ಮನೆಯಲ್ಲಿದ್ದ ಮಗುವನ್ನ ಭಾವನ ಮನೆಗೆ ಕರ್ಕೊಂದು ಬಂದಿದ್ದ ಸ್ವಾತಿ ಸಹೋದರನಿಗೆ ಶಾಕ್ ಎದುರಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮಿ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ಅವಳಲ್ಲಿ ಇವನಿಲ್ಲಿ.. 60 ವರ್ಷದ ಅರ್ಚಕ, 20ರ ಸುಂದರಿ ಮೋಸದ ಕೇಸ್‌ಗೆ ಹೊಸ ಟ್ವಿಸ್ಟ್; ಅಸಲಿಗೆ ಆಗಿದ್ದೇನು?

ಮೃತಳ ಕುಟುಂಬಸ್ಥರಿಂದ ಅಳಿಯ ಮೋಹನ್ ಮನೆಗೆ ಬೆಂಕಿ
ಸ್ವಾತಿ ಸಾವಿನ ಬಳಿಕ ಗಂಡ ಮೋಹನ್ ಹಾಗೂ ಆತನ ಪೋಷಕರು ಪರಾರಿಯಾಗಿದ್ರು. ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆಂದು ಮೃತಳ ಪೋಷಕರು ಆರೋಪ ಮಾಡಿದ್ರು. ಮಗಳ ಸಾವಿಗೆ ಆಕ್ರೋಶಗೊಂಡ ಸಂಬಂಧಿಕರು ಆತನ ಮನೆಗೆ ನುಗ್ಗಿ ಮನೆಯಲ್ಲಿದ್ದ ಪೀಠೋಪಕರಣಗಳನ್ನ ಧ್ವಂಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪಕ್ಕದಲ್ಲಿ ಕೊಬ್ಬರಿ ಶೇಖರಿಸಿಟ್ಟಿದ್ದ ಮನೆಗೆ ಬೆಂಕಿ ಹಚ್ಚಿ ಎರಡು ಬೈಕ್‌ಗಳನ್ನ ಸುಟ್ಟು ಹಾಕಿದ್ದಾರೆ. ಮಗಳಿಗೆ ವರದಕ್ಷಿಣೆಗ ಕಿರುಕುಳ ಕೊಡ್ತಿದ್ರು ಅಂತಾ ಪೋಷಕರು ಆರೋಪಿಸಿದ್ದಾರೆ.

ಪತ್ನಿ ಸಾವಿನ ಬಳಿಕ ಪತಿ ಮೋಹನ್ ಎಸ್ಕೇಪ್ ಆಗಿದ್ದಾನೆ ಅನ್ಕೊಂಡಿದ್ರೆ ಇವತ್ತು ಬೆಳಗ್ಗೆ ಮನೆ ಸಮೀಪದಲ್ಲಿ ಇರೋ ಕೆರೆಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಪತ್ನಿ ಸಾವಿನ ಬೆನ್ನಲ್ಲೇ ಪತಿ ಕೂಡ ಕೆರೆ ಹಾರಿ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಅತ್ತೆ-ಸೊಸೆ ಮಧ್ಯೆ ಹೊಂದಾಣಿಕೆ ಕಡಿಮೆ ಇತ್ತಂತೆ. ಇದ್ರಿಂದ ಗಂಡ-ಹೆಂಡತಿ ನಡುವೆ ಆಗಾಗ ಜಗಳ ಆಗ್ತಿತ್ತು ಎಂಬುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.

ಆರ್‌.ಪೇಟೆ ತಾಲೂಕಿನ ಗದ್ದೆ ಹೊಸೂರು ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮತ್ತೆ ಗಲಾಟೆಯಾಗಬಹುದು ಅಂತ ಮನೆ ಬಳಿ ಪೊಲೀಸರನ್ನ ನಿಯೋಜಿಸಲಾಗಿದೆ. ಅದೇನೇ ಇರ್ಲಿ ಏನೇ ಸಮಸ್ಯೆ ಇದ್ರೂ ಕೂಡ ದೊಡ್ಡವರ ಮುಂದೆ ಕೂತ್ಕೊಂಡು ಬಗೆಹರಿಸಬೇಕು. ಪತ್ನಿಯನ್ನ ಪತಿಯೇ ಕೊಲೆ ಮಾಡಿದ್ನಾ ಗೊತ್ತಿಲ್ಲ. ಇತ್ತ ಪತಿಯೂ ಆತ್ಮಹತ್ಯೆ ಮಾಡ್ಕೊಬಿಟ್ಟಿದ್ದು ತನಿಖೆ ನಂತ್ರ ಸತ್ಯಾಸತ್ಯತೆ ಬಯಲಾಗಬೇಕಿದೆ. ಆದ್ರೆ ಏನು ತಪ್ಪು ಮಾಡದ ಪುಟ್ಟ ಕಂದಮ್ಮ ಮಾತ್ರ ತಂದೆ-ತಾಯಿ ಇಲ್ಲದೇ ಅನಾಥವಾಗಿದ್ದು ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡ, ಹೆಂಡ್ತಿ ಜಗಳದಲ್ಲಿ 1 ವರ್ಷದ ಕೂಸು ಅನಾಥ.. ಮಂಡ್ಯ ದಂಪತಿಯ ಸಾವಿಗೆ ಹೊಸ ಟ್ವಿಸ್ಟ್‌; ಆಗಿದ್ದೇನು?

https://newsfirstlive.com/wp-content/uploads/2024/08/Mandya-Couple-Death.jpg

Load More