newsfirstkannada.com

ನಿಗಿ ನಿಗಿ ಕೆಂಡವಾದ ಕಾವೇರಿ ಹೋರಾಟ; ಸಿದ್ದರಾಮಯ್ಯ ಸರ್ಕಾರದ ಮೇಲೆ ಸುಮಲತಾ ಅಂಬರೀಶ್ ಆರೋಪ

Share :

21-08-2023

    ತಮಿಳುನಾಡು ಅರ್ಜಿ ಹಾಕಿದ ಕೂಡಲೇ ನೀರು ಬಿಡೋದೇಕೆ?

    ‘ಸಿದ್ದರಾಮಯ್ಯ ಸರ್ಕಾರದಿಂದ ದಾರಿ ತಪ್ಪಿಸುವ ಕೆಲಸ ಆಗ್ತಿದೆ’

    ಕಾವೇರಿ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರ ಎಂಟ್ರಿ ಆಗಿಲ್ಲ

ಮಂಡ್ಯ: ರೈತರು, ಕನ್ನಡಿಗರ ತೀವ್ರ ವಿರೋಧದ ಮಧ್ಯೆ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ. ಸರ್ಕಾರದ ಈ ನಡೆ ಕಾವೇರಿ ಕಣಿವೆಯಲ್ಲಿ ಆಕ್ರೋಶದ ಕಟ್ಟೆ ಹೊಡೆಯುವಂತೆ ಮಾಡಿದೆ. ಅದರಲ್ಲೂ ಮಂಡ್ಯದಲ್ಲಿ ನಿರಂತರ ಹೋರಾಟಗಳು ನಡೆಯುತ್ತಿದ್ದು, ಬಿಜೆಪಿ ನಾಯಕರು ಪ್ರತಿಭಟನೆಗೆ ಕೈಜೋಡಿಸಿದ್ದಾರೆ. ಬಿಜೆಪಿ ನಾಯಕರ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾದ ಸಂಸದೆ ಸುಮಲತಾ ಅಂಬರೀಶ್, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ಹೋರಾಟಗಾರರ ಪರ ಧ್ವನಿ ಎತ್ತಿದ ಸುಮಲತಾ ಅಂಬರೀಶ್, ಒಬ್ಬ ತಾಯಿ ತನ್ನ ಮಕ್ಕಳನ್ನ ಉಪವಾಸ ಇಟ್ಟು ಪಕ್ಕದ ಮನೆಯ ಮಕ್ಕಳಿಗೆ ಊಟ ಕೊಡಲ್ಲ. ಈಗಿನ ಪರಿಸ್ಥಿತಿಯಲ್ಲಿ ನಮ್ಮ ರೈತರಿಗೆ ಅನ್ಯಾಯ ಆಗ್ತಿದೆ. ರಾಜ್ಯದಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಇದೆ. ಇದನ್ನ ಗಮನದಲ್ಲಿಟ್ಟಿಕೊಳ್ಳದೇ ಸರ್ಕಾರ ಯಾವ ರೀತಿ ನೀರು ಬಿಡುಗಡೆ ಮಾಡ್ತಿದೆ. ಇದಕ್ಕೆ ಒಂದು ಕ್ಲಾರಿಟಿ ಇಲ್ಲ. ನಾವು ಎಲ್ಲಾ ಕಡೆ ಕಾವೇರಿ ನೀರಿನ ಸಮಸ್ಯೆ ಬಂದಾಗ ಮಾತನಾಡಿದ್ದೇವೆ. ತಮಿಳುನಾಡಿನ ವಿರುದ್ಧ ಸಂಸತ್‌ನಲ್ಲಿ ನಾನೇ ಫಸ್ಟ್ ಮಾತನಾಡಿದ್ದೆ ಎಂದರು.

ಇನ್ನು, ಪ್ರತಿ ಬಾರಿ ಕಾವೇರಿ ವಿಚಾರದಲ್ಲಿ ತಮಿಳುನಾಡಿನಿಂದ ಕರ್ನಾಟಕಕ್ಕೆ ಅನ್ಯಾಯ ಆಗ್ತಿದೆ‌. ನಮ್ಮ ಕಡೆಯಿಂದ ಸರಿಯಾಗಿ ಪ್ರೆಸೆಂಟ್ ಮಾಡುವುದರಲ್ಲಿ ವಿಫಲರಾಗಿದ್ದೇವೆ. ಯಾವ ಪ್ರಯತ್ನ ಮಾಡದೆ ತಮಿಳುನಾಡಿನವರು ಅರ್ಜಿ ಹಾಕಿದ ಕೂಡಲೇ ನೀರು ಬಿಟ್ಟರೆ ರೈತರ ಗತಿ ಏನು? ನಮ್ಮ ರೈತರಿಗೆ ಅನ್ಯಾಯ ಮಾಡಿ ಪಕ್ಕದ ರಾಜ್ಯಕ್ಕೆ ನೀರು ಕೊಟ್ಟರೆ ಒಪ್ಪಲು ಸಾಧ್ಯವಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡಿಗರೇ.. ಬರಿದಾಗುತ್ತಿದೆ ರಾಜ್ಯದ 4 ಡ್ಯಾಂಗಳ ನೀರಿನ ಮಟ್ಟ! ಇದು ಅಪಾಯದ ಮುನ್ಸೂಚನೆಯೇ?

ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ಪರ ಬ್ಯಾಟಿಂಗ್ ಮಾಡಿದ ಸುಮಲತಾ ಅಂಬರೀಶ್, ಕೇಂದ್ರ ಸರ್ಕಾರ ಇದರಲ್ಲಿ ಎಂಟ್ರಿ ಇಲ್ಲ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಸುಳ್ಳು ಹೇಳ್ತಿದೆ. ರಾಜ್ಯ ಸರ್ಕಾರದಿಂದ ದಾರಿ ತಪ್ಪಿಸುವ ಕೆಲಸ ಆಗ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಕಾವೇರಿ ಸಮಸ್ಯೆ ಇತ್ತು. ಆಗ ಸುಪ್ರೀಂಕೋರ್ಟ್ ನೆಪ ಹೇಳಿ ತಮಿಳುನಾಡಿಗೆ ನೀರು ಬಿಡಲಾಗಿತ್ತು. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಂಬರೀಶ್ ರಾಜೀನಾಮೆ ಕೊಟ್ಟಿದ್ರು. ಇದನ್ನ ಪರಿಹಾರ ಮಾಡೋದಾಗಿದ್ರೆ ಆಗಲೇ ಮಾಡಬಹುದಿತ್ತು ಎಂದು ಸುಮಲತಾ ಅಂಬರೀಶ್ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಕಾವೇರಿ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೇ ಆಗಸ್ಟ್ 23ರಂದು ಸರ್ವ ಪಕ್ಷಗಳ ಸಭೆ ಕರೆದಿದೆ. ಮತ್ತೊಂದೆಡೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ಬಿಜೆಪಿ ತನ್ನ ಹೋರಾಟವನ್ನು ತೀವ್ರಗೊಳಿಸಿದೆ. ಸರ್ವ ಪಕ್ಷಗಳ ಸಭೆಯಲ್ಲಿ ಕೈಗೊಳ್ಳಲಾಗುವ ತೀರ್ಮಾನದ ಬಳಿಕ ಮತ್ತೊಂದು ಹೋರಾಟದ ರೂಪುರೇಷೆ ಸಿದ್ಧಪಡಿಸಲು ಬಿಜೆಪಿ ನಾಯಕರು ಪ್ಲಾನ್ ಹೆಣೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ನಿಗಿ ನಿಗಿ ಕೆಂಡವಾದ ಕಾವೇರಿ ಹೋರಾಟ; ಸಿದ್ದರಾಮಯ್ಯ ಸರ್ಕಾರದ ಮೇಲೆ ಸುಮಲತಾ ಅಂಬರೀಶ್ ಆರೋಪ

https://newsfirstlive.com/wp-content/uploads/2023/08/Sumalatha-Ambareesh.jpg

Load More