ನಾಗಮಂಗಲ 52 ಆರೋಪಿಗಳಿಗೆ ನ್ಯಾಯಾಂಗ ಬಂಧನ
ನಾಗಮಂಗಲ ಪಟ್ಟಣದಲ್ಲಿ ಇಂದು ಮದ್ಯ ಮಾರಾಟ ನಿಷೇಧ
ಇಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೇಟಿ
ನಾಗಮಂಗಲ ಪ್ರಕರಣ ಸಂಬಂಧ ಪೊಲೀಸರು 52 ಆರೋಪಿಗಳನ್ನು ಬಂಧಿಸಿದ್ದು ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ಕರೆದೊಯ್ಯುವ ವೇಳೆ ಆರೋಪಿಗಳ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಕೋರ್ಟ್ ಎದುರು ಜಮಾಯಿಸಿದ್ದ ನೂರಾರು ಮಹಿಳೆಯರು ಹೈಡ್ರಾಮಾ ಸೃಷ್ಟಿಸಿದ್ದಾರೆ.
ಕುಟುಂಬಸ್ಥರ ಕಣ್ಣೀರು, ಹೈಡ್ರಾಮಾ!
ಶಾಂತ ನಾಗಮಂಗಲದಲ್ಲಿ ಅಶಾಂತಿ ಶುರುವಾಗಿತ್ತು. ಗಣೇಶೋತ್ಸವ ಮೆರವಣಿಗೆ ಗಲಾಟೆಯ ಗೂಡಾಗಿ ಪರಿಣಮಿಸ್ತು. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಶಾಂತಿಗೆ ಭಂಗ ತಂದವರನ್ನ ಪೊಲೀಸ್ರು ವಶಕ್ಕೆ ಪಡೆದ್ರು.. ವಶಕ್ಕೆ ಪಡೆದ 52 ಜನರನ್ನ ಪೊಲೀಸರು ನಾಗಮಂಗಲದ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಲಾಗಿತ್ತು.. ಬಳಿಕ ಕೋರ್ಟ್ ಎಲ್ಲಾ 52 ಆರೋಪಿಗಳಿಗೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. 52 ಆರೋಪಿಗಳನ್ನು ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುವಾಗ ಹೈಡ್ರಾಮಾವೇ ನಡೆದೋಯ್ತು. ಪೊಲೀಸ್ ವಾಹನಗಳಲ್ಲಿ ಕರೆದೊಯ್ಯುವ ವೇಳೆ ಕುಟುಂಬಸ್ಥರು ಕಣ್ಣೀರಿಟ್ಟರು, ತಪ್ಪೇ ಮಾಡದಿದ್ರೂ ಕರೆದೊಯ್ದಿದ್ದಾರೆ ಅಂತ ರೋದಿಸಿದ್ರು.
ಇದನ್ನೂ ಓದಿ:ನಾಗಮಂಗಲ ಕೇಸ್; ನಮ್ಮವ್ರು ತಪ್ಪು ಮಾಡಿಲ್ಲ ಎಂದು ಹೈಡ್ರಾಮಾ ಮಾಡಿದ ಕುಟುಂಬಸ್ಥರಿಗೆ ಇನ್ಸ್ಪೆಕ್ಟರ್ ಪಾಠ
ಪುತ್ರ ಜೈಲುಪಾಲು.. ಕುಸಿದು ಬಿದ್ದ ತಾಯಿ
ಇನ್ನೊಂದೆಡೆ ಅರೆಸ್ಟ್ ಆದವ್ರಲ್ಲಿ ಬದರಿಕೊಪ್ಪಲು ಗ್ರಾಮದ ಯುವಕರೇ ಹೆಚ್ಚಿದ್ದಾರೆ.. ನಾಗಮಂಗಲ ಟೌನ್ ಠಾಣೆ ಮುಂದೆ ಜಮಾಯಿಸಿದ್ದ ನೂರಾರು ಮಹಿಳೆಯರು ಹೈಡ್ರಾಮಾ ಸೃಷ್ಟಿಸಿದ್ರು. ಪುತ್ರ ಜೈಲು ಪಾಲಾಗ್ತಿದ್ದಂತೆ ಓರ್ವ ತಾಯಿ ರಸ್ತೆಯಲ್ಲಿ ಬಿದ್ದು ಆಕ್ರಂದಿಸಿದ್ರು. ಬಲವಂತವಾಗಿ ಮಕ್ಕಳನ್ನ ಎಳ್ಕೊಂಡು ಹೋಗಿದ್ದಾರೆಂದು ಶಾಪ ಹಾಕಿದ್ರು. ಇತ್ತ, ನಾಗಮಂಗಲ ಘಟನೆ ನಡೀಬಾರದಿತ್ತು ಅಂತ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಈ ಘಟನೆ ಪೂರ್ವ ನಿಯೋಜಿತ. ಓಲೈಕೆ ರಾಜಕೀಯ ಇಂತಹ ಘಟನೆಗಳಿಗೆ ಕಾರಣ ಅಂತ ಕೇಂದ್ರ ಸಚಿವ ಜೋಶಿ ಕಿಡಿಕಾರಿದ್ದಾರೆ. ಒಟ್ಟಾರೆ, ಅಶಾಂತಿ ಸೃಷ್ಟಿಸುವ ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಆಗಬೇಕಿದೆ.
ಇದನ್ನೂ ಓದಿ:ಅಂಗಡಿಗೆ ಬೆಂಕಿ ಇಟ್ರು, 1.5 ಕೋಟಿ ಹೋಯ್ತು.. ಜೀವ ಉಳಿಸಿಕೊಂಡಿದ್ದೇ ದೊಡ್ಡದು -ನಾಗಮಂಗಲ ಬಟ್ಟೆ ವ್ಯಾಪಾರಿ ಕಣ್ಣೀರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ