ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ನಿನ್ನೆ ಅಮಂಗಳಕರ ಕೃತ್ಯ
ನಿನ್ನೆ ರಾತ್ರಿ ನಾಗಮಂಗಲ ಪಟ್ಟಣದಲ್ಲಿ ಆಗಿದ್ದೇನು? ಯಾಕೆ ಗಲಾಟೆ?
ದಬ್ಬಾಳಿಕೆ ನಿಲ್ಲಬೇಕು, ಸರ್ಕಾರ ಕ್ರಮವಹಿಸಬೇಕೆಂದ ಹೆಚ್ಡಿಕೆ
ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ನಿನ್ನೆ ರಾತ್ರಿ ಅಮಂಗಳದ ಕೃತ್ಯ ನಡೆದಿದೆ. ಅದ್ಧೂರಿ ಗಣೇಶೋತ್ಸವದಲ್ಲಿ ಅಹಿತಕರ ಘಟನೆ ನಡೆದಿದೆ. ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿ, ದಾಂಧಲೆ ನಡೆಸಿದ್ದಾರೆ. ಪೊಲೀಸರು ಲಾಠಿ ಪ್ರಯೋಗಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಹಿಂದೂ ಸಂಘಟನೆಗಳು ನಾಗಮಂಗಲ ಬಂದ್ಗೆ ಕರೆ ನೀಡಿವೆ.
ಆಗಿದ್ದೇನು..?
ನಾಗಮಂಗಲ ಪಟ್ಟಣದಲ್ಲಿ ನಿನ್ನೆ ರಾತ್ರಿ ಗಣೇಶ ಮೆರವಣಿಗೆ ವೇಳೆ ಅಮಂಗಲ ಉಂಟು ಮಾಡುವ ಕೃತ್ಯ ನಡೆದಿದೆ. ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಯನ್ನು ಪ್ರತಿವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ ಗಣೇಶ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಸಾಗಿತ್ತು. ದರ್ಗಾ ಎದುರು ಮೆರವಣಿಗೆ ಸಾಗುತ್ತಿದ್ದಂತೆ ಕೆಲ ಕಿಡಿಗೇಡಿಗಳು ಇದ್ದಕ್ಕಿದ್ದಂತೆ ಕಲ್ಲು ತೂರಿದ್ದೇ ಗಲಾಟೆಗೆ ಕಾರಣ ಆಗಿದೆ.
ಇದನ್ನೂ ಓದಿ: ‘ಮಂಡ್ಯದಲ್ಲಿ ಇಂತಹ ಗಲಾಟೆ ನಡೆದಿರಲಿಲ್ಲ’- ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ
ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಮುಂದೆ ಮೆರವಣಿಗೆ ಮಾಡದಂತೆ ಕ್ಯಾತೆ ತೆಗೆದ ಕಿಡಿಗೇಡಿಗಳ ಗುಂಪು ದರ್ಗಾ ಮುಂದೆ ತಮಟೆ, ಡೊಳ್ಳು ಬಾರಿಸದಂತೆ ದಾಂಧಲೆ ನಡೆಸಿದೆ. ಮೆರವಣಿಗೆ ಮಾಡ್ತಿದ್ದ ಹಿಂದೂ ಯುವಕರ ಹಾಗೂ ಪೊಲೀಸರ ಮೇಲೆಯೂ ಕಲ್ಲು ತೂರಾಟ ನಡೆಸಿದೆ. ಇದೇ ವೇಳೆ ಮಾರಕಾಸ್ತ್ರಗಳನ್ನು ಝಳಪಿಸಿದೆ. ಪೆಟ್ರೋಲ್ ಬಾಂಬ್ ಕೂಡ ಎಸೆದಿದ್ದಾರೆ ಎನ್ನಲಾಗಿದೆ. ಮಂಡ್ಯ ವೃತ್ತದಲ್ಲಿ ನಾಲ್ಕೈದು ಬೈಕ್ಗಳಿಗೆ ಬೆಂಕಿ ಇಟ್ಟು ರಸ್ತೆ ಬದಿಯ 2-3 ಅಂಗಡಿಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಲಾಠಿ ಪ್ರಯೋಗ ಮಾಡಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ ನಡೆಸಿದ್ರು. ಕಲ್ಲು ತೂರಾಟದಲ್ಲಿ ಕೆಲ ಯುವಕರು ಹಾಗೂ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಲಾಟೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಯುವಕರು ಪೊಲೀಸ್ ಠಾಣೆ ಎದುರು ಗಣೇಶಮೂರ್ತಿ ನಿಲ್ಲಿಸಿ ಪ್ರತಿಭಟನೆ ನಡೆಸಿದ್ರು. ಕಿಡಿಗೇಡಿಗಳ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದ್ರು. ಕಳೆದ ವರ್ಷವೂ ಇದೇ ದರ್ಗಾ ಎದುರು ಗಲಾಟೆ ನಡೆದಿತ್ತು.

ಇನ್ನು ನಾಗಮಂಗಲವ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿರೋ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೆರವಣಿಗೆ ವೇಳೆ ಸೈಲೆಂಟಾಗಿ ಹೋಗಲು ಸಾಧ್ಯನಾ, ತಮಟೆ ಬಾರಿಸದೇ ಸಂಭ್ರಮಿಸದೇ ಹೋಗೋಕ್ಕಾಗುತ್ತಾ ಅಂತ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮೆರವಣಿಗೆ ಸಾಗಬೇಕಾದರೆ ಕಳೆದ ವರ್ಷನೂ ಸಣ್ಣ ಗಲಾಟೆ ನಡೆದಿತ್ತು. ಈ ಬಾರಿಯು ನಡೆದಿದೆ. ಇದಕ್ಕೆ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿತ್ತು. ಈ ಸರ್ಕಾರ ಒಂದು ವರ್ಗದ ಜನರನ್ನು ಹೆಚ್ಚಿನ ಓಲೈಕೆ ಮಾಡುತ್ತಿದೆ. ಅವರಿಗೆ ಭಯ, ಭಕ್ತಿ ಇಲ್ಲದಂತ ವಾತಾವರಣ ಶುರುವಾಗಿದೆ. ಮಂಡ್ಯದಲ್ಲಿ ಯಾವತ್ತೂ ಈ ರೀತಿಯಾಗಿಲ್ಲ. ಸರ್ಕಾರದ ವೈಫಲ್ಯದಿಂದ ಈ ರೀತಿ ಆಗುತ್ತಿದೆ.
ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
ಇನ್ನು ಘಟನೆ ಯಾಕೆ ನಡೀತು ಎಂಬ ಬಗ್ಗೆ ವಿವರಣೆ ಕೇಳಿದ್ದೀವಿ, ಇನ್ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದೇವೆ, ನಾನು ಕೂಡ ಸ್ಥಳಕ್ಕೆ ಭೇಟಿ ನೀಡ್ತೀನಿ ಅಂತ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಅದನ್ನೆಲ್ಲ ತನಿಖೆ ಮಾಡಿ ಯಾರದ್ದು ತಪ್ಪು ಎಂದು ತಿಳಿದು ಕೊಳ್ಳಲಾಗುತ್ತದೆ. ಗಲಾಟೆಯನ್ನು ಕಂಟ್ರೋಲ್ ಮಾಡೋಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಿಎಂ, ಗೃಹ ಸಚಿವರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಎಡಿಜಿಪಿ, ಲಾ ಆ್ಯಂಡ್ ಆರ್ಡರ್ಗೂ ಹೇಳಿದ್ದೇವೆ. ಐಜಿ, ಎಸ್ಪಿ, ಡಿಸಿ ಸ್ಥಳದಲ್ಲೇ ಇದ್ದಾರೆ. ಈಗ ಕಂಟ್ರೋಲ್ ಆಗಿದೆ. ಇಂದು ಬೆಳಗ್ಗೆ ನಾನು ಸ್ಥಳಕ್ಕೆ ಭೇಟಿ ನೀಡುತ್ತೇನೆ.
ಚಲುವರಾಯಸ್ವಾಮಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ
ಈ ಮಧ್ಯೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸುಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಗಣೇಶ ಚತುರ್ಥಿಯಂದೇ ರೈಲು ಅಪಘಾತ.. ಹಳಿ ತಪ್ಪಿದ ಪ್ರಯಾಣಿಕರಿದ್ದ ಎರಡು ಬೋಗಿಗಳು
ಇವತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನಾಗಮಂಗಲಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುವ ಸಾಧ್ಯತೆ ಇದೆ. ಸದ್ಯ ನಾಗಮಂಗಲ ಪಟ್ಟಣದಲ್ಲಿ 144 ಸೆಕ್ಷನ್ ಜಾರಿಯಾಗಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಘಟನೆ ಖಂಡಿಸಿ ಹಿಂದೂ ಸಂಘಟನೆಗಳು ಇಂದು ನಾಗಮಂಗಲ ಬಂದ್ಗೆ ಕರೆ ನೀಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ