newsfirstkannada.com

ಮುದ್ದಾದ ಮಕ್ಕಳ ಕತ್ತು ಸೀಳಿ ಸಾಯಿಸಿದ ತಂದೆ.. ಕೊನೆಗೂ ಕೊಲೆಯ ಹಿಂದಿನ ರಹಸ್ಯ ಬಾಯ್ಬಿಟ್ಟ ಹಂತಕ

Share :

25-06-2023

    ಟಿವಿಯಲ್ಲಿ ಮಗನ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದ ತಂದೆ-ತಾಯಿ

    ತನ್ನ ಮಕ್ಕಳ ಕತ್ತು ಸೀಳಿದ್ದ ಆರೋಪಿ ಬಳಿಕ ಸುತ್ತಿಗೆಯಿಂದ ಹೊಡೆದು ಕೊಲೆ

    ಪತ್ನಿ ಪ್ರಜ್ಞೆ ಕಳೆದು ಕೊಳ್ಳುತ್ತಿದ್ದಂತೆ ತನ್ನ ಹುಟ್ಟೂರಿಗೆ ಪ್ರಯಾಣ ಬೆಳಸಿದ್ದ ಪಾಪಿ

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ತನ್ನಿಬ್ಬರು ಮಕ್ಕಳ ಕತ್ತು ಸೀಳಿ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದ ಪಾಪಿ ತಂದೆಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಪತ್ನಿಯ ಶೀಲ ಶಂಕಿಸಿ ಮಕ್ಕಳನ್ನು ಕೊಂದಿರುವುದಾಗಿ ಆರೋಪಿ ಶ್ರೀಕಾಂತ್ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.

ಆದರ್ಶ್ (4), ಅಮೂಲ್ಯ (2) ಎನ್ನುವ ತನ್ನ ಮಕ್ಕಳನ್ನು ಕೊಲೆ ಮಾಡಿ, ಪತ್ನಿ ಲಕ್ಷ್ಮೀಯ ತಲೆಗೆ 6 ಬಾರಿ ಸುತ್ತಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ. ಪತ್ನಿ ಪ್ರಜ್ಞೆ ಕಳೆದು ಕೊಳ್ಳುತ್ತಿದ್ದಂತೆ ಆರೋಪಿ ತನ್ನ ಹುಟ್ಟೂರು ಕಲಬುರಗಿ ಜಿಲ್ಲೆಯ ಜೇವರ್ಗಿ ನಗರಕ್ಕೆ ಹೋಗಿದ್ದ. ಮನೆಯಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ ಪಾಪಿ ಮಲಗಿದ್ದ. ಮಗ ಮನೆಗೆ ಏಕೆ ಬಂದಿದ್ದಾನೆ ಎಂದು ತಂದೆ-ತಾಯಿಗೆ ತಿಳಿದಿರಲಿಲ್ಲ. ಟಿವಿಯಲ್ಲಿ ಮಕ್ಕಳ ಕೊಲೆಯ ವಿಚಾರ ತಿಳಿದ ಆರೋಪಿಯ ತಂದೆ-ತಾಯಿ ನೇರವಾಗಿ ಠಾಣೆಗೆ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆ ಬಳಿ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನು ಓದಿ: ಮುದ್ದಾದ ಕಂದಮ್ಮಗಳ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದ ಪಾಪಿ ಅಪ್ಪ

ಪೊಲೀಸ್ ವಿಚಾರಣೆ ವೇಳೆ ಆರೋಪಿಯು ಪತ್ನಿಯ ಶೀಲವನ್ನು ಶಂಕಿಸಿ ಈ ಕೃತ್ಯವೆಸಗಿದ್ದಾಗಿ ಬಾಯಿ ಬಿಟ್ಟಿದ್ದಾನೆ. ಪತ್ನಿಯು ಯಾವಾಗಲೂ ಮೊಬೈನಲ್ಲಿ ಗಂಟೆ ಗಟ್ಟಲೇ ಮಾತನಾಡುತ್ತಿದ್ದಳು. ಹೀಗಾಗಿ ಆಕೆಯ ಶೀಲ ಶಂಕಿಸಿ, ಎರಡು ಮಕ್ಕಳು ನನ್ನದಲ್ಲವೆಂದು ಸದಾ ಮಕ್ಕಳು ಮತ್ತು ಪತ್ನಿಯ ಮೇಲೆ ಹಲ್ಲೆ ಮಾಡ್ತಿದ್ದೆ. ಇದೇ ವಿಚಾರಕ್ಕೆ ಬುಧವಾರ ಫಾರ್ಮ್​ಹೌಸ್​ನಲ್ಲಿ ಮಕ್ಕಳನ್ನು ಹತ್ಯೆ ಮಾಡಿ ಹೆಂಡತಿ ಮೇಲೆ ಹಲ್ಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುದ್ದಾದ ಮಕ್ಕಳ ಕತ್ತು ಸೀಳಿ ಸಾಯಿಸಿದ ತಂದೆ.. ಕೊನೆಗೂ ಕೊಲೆಯ ಹಿಂದಿನ ರಹಸ್ಯ ಬಾಯ್ಬಿಟ್ಟ ಹಂತಕ

https://newsfirstlive.com/wp-content/uploads/2023/06/MND_CRIME.jpg

Load More