ಮಂಡ್ಯದಲ್ಲಿ ಪುಂಡನಿಂದ ಬೆಚ್ಚಿ ಬೀಳಿಸೋ ವಿಕೃತಿ..!
ಕ್ಲಾಸ್ಗೆ ಹೋಗೋ ಅಂದ್ರೆ ಲಾಂಗ್ ಹಿಡ್ಕೊಂಡ್ ಬಂದ!
ಉಪನ್ಯಾಸಕರಿಗೇ ಲಾಂಗ್ ತೋರಿಸಿ ವಿದ್ಯಾರ್ಥಿಯ ಬೆದರಿಕೆ
ಮಂಡ್ಯ: ‘ನಿಮ್ಮ ಮಗ ಕ್ಲಾಸ್ಗೆ ಬರುತ್ತಿಲ್ಲ, ಬುದ್ಧಿ ಹೇಳಿ’ ಎಂದಿದ್ದ ಶಿಕ್ಷಕನ ವಿರುದ್ಧ ಸೇಡು ತೀರಿಸಿಕೊಳ್ಳಲು ಪುಂಡ ವಿದ್ಯಾರ್ಥಿಯೊಬ್ಬ ತರಗತಿಗೆ ಲಾಂಗ್ ಹಿಡಿದುಕೊಂಡು ಬಂದ ಘಟನೆ ನಡೆದಿದೆ. ನಾಗಮಂಗಲದ ಬಿಜಿ ನಗರ ಡಿಪ್ಲೊಮಾ ಕಾಲೇಜಿನ ಅಪ್ರಾಪ್ತ ವಿದ್ಯಾರ್ಥಿ, ಲಾಂಗ್ ಹಿಡಿದು ಕ್ಲಾಸ್ ರೂಮ್ಗೆ ಎಂಟ್ರಿಯಾಗಿದ್ದಾನೆ.
ಉದ್ದವಾಗಿರುವ ಲಾಂಗ್ ಹಿಡಿದು ಬಂದು ಪುಂಡ, ಉಪನ್ಯಾಸಕರಿಗೆ ಅವಾಜ್ ಹಾಕಿದ್ದಾರೆ. ಗುರುವಿನ ಜೊತೆ ವಾಗ್ವಾದಕ್ಕೆ ಇಳಿದಿರುವ ದೃಶ್ಯ ಕೆಲವು ವಿದ್ಯಾರ್ಥಿಗಳ ಮೊಬೈಲ್ನಲ್ಲಿ ಸೆರೆಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಲಾಂಗ್ ಹಿಡಿದು ಕ್ಲಾಸ್ ರೂಮ್ಗೆ ಬಂದ ಹಿನ್ನೆಲೆಯಲ್ಲಿ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆರೋಪಿ ಅಪ್ರಪ್ತ ಹಿನ್ನೆಲೆಯಲ್ಲಿ ತಪ್ಪೊಪ್ಪಿಗೆ ಬರೆಸಿ ವಾಪಸ್ ಕಳುಹಿಸಿದ್ದಾರೆ. ಆಗಸ್ಟ್ 19ರಂದು ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ